ಡಿವಿಜಿ ಸುದ್ದಿ, ದಾವಣಗೆರೆ: ಶ್ರೀ ಸಿದ್ಧರಾಮೇಶ್ವರ ಮಹಾಸಂಸ್ಥಾನ, ಭೋವಿ ಗುರುಪೀಠ ದಾವಣಗೆರೆ ಶಾಖೆ ವತಿಯಿಂದ ಪ್ರತಿವರ್ಷ ಶ್ರಾವಣದ ಮೊದಲನೇ ಸೋಮವಾರ ಜರುಗುವ ಶಿವಯೋಗಿ ಶ್ರೀ ಸಿದ್ಧರಾಮೇಶ್ವರ ದೇವರ 58ನೇ ರಥೋತ್ಸವ ಹಾಗೂ ಲಿಂಗೈಕ್ಯ ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ ಅವರ 18ನೇ ಸ್ಮರಣೋತ್ಸವವನ್ನು ರದ್ದುಗೊಳಿಸಿದೆ.
ಜಗತ್ತಿನಾದ್ಯಂತ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದು, ದಾವಣಗೆರೆಯೂ ಇದಕ್ಕೆ ಹೊರತಾಗಿಲ್ಲ. ದಾವಣಗೆರೆಯ ನಗರದ ಶ್ರೀಮಠದ ಸುತ್ತ ಕೆಲವೊಂದು ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಹೀಗಾಗಿ ಭಕ್ತರ ಜೀವ-ಕ್ಷೇಮ-ಅಭಿವೃದ್ಧಿ ಬಯಸುವುದು ಮಠದ ಮೂಲದ್ದೇಶವಾಗಿದೆ. ಈ ಕಾರಣ 27 ಜುಲೈ ರಂದು ಜರುಗಬೇಕಿದ್ದ ರಥೋತ್ಸವವನ್ನು ರದ್ದುಗೊಳಿಸಿದೆ. ಸದ್ಭಕ್ತರು ಮನೆಯಲ್ಲಿದ್ದು ಸಿದ್ಧರಾಮೇಶ್ವರ ಭಾವಚಿತ್ರಕ್ಕೆ ವಚನ ವಂದನೆ ಸಲ್ಲಿಸಿ ಕೃಪಾಶೀರ್ವಾದ ಪಡೆಯಲು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ತಿಳಿಸಿದ್ದಾರೆ.