Connect with us

Dvgsuddi Kannada | online news portal | Kannada news online

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿಗೆ ಕೊರೊನಾ ವೈರಸ್ ಪಾಸಿಟಿವ್ ; ಸಂಸದರ ಮನೆ ಸುತ್ತ 5 ಕಿ. ಮೀ. ರೆಡ್ ಝೋನ್ ಘೋಷಣೆ

ಪ್ರಮುಖ ಸುದ್ದಿ

ದಾವಣಗೆರೆ ಸಂಸದ ಜಿ.ಎಂ. ಸಿದ್ದೇಶ್ವರ ಪುತ್ರಿಗೆ ಕೊರೊನಾ ವೈರಸ್ ಪಾಸಿಟಿವ್ ; ಸಂಸದರ ಮನೆ ಸುತ್ತ 5 ಕಿ. ಮೀ. ರೆಡ್ ಝೋನ್ ಘೋಷಣೆ

ಡಿವಿಜಿ ಸುದ್ದಿ, ದಾವಣಗೆರೆ: ಕೋಟೆ ನಾಡು ಚಿತ್ರದುರ್ಗಕ್ಕೆ  ಕರೋನಾ ಎಂಟ್ರಿ ಕೊಟ್ಟಿದ್ದು,  ದಾವಣಗೆರೆ  ಸಂಸದ ಜಿ.ಎಂ.ಸಿದ್ದೇಶ್ವರ ಪುತ್ರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡಿದೆ.  ಸಂಸದರ  ಭೀಮಸಮುದ್ರದ  ಮನೆ ಸುತ್ತಲೂ 5 ಕಿ.ಮೀ. ರೆಡ್ ಝೋನ್ ಎಂದು ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ.

ಸಂಸದರು ಸೇರಿ 6 ಜನ ಗಯಾನದಿಂದ ಭಾರತಕ್ಕೆ ಬಂದಿದ್ದರು. ತಪಾಸಣೆಗೆ ಒಳಪಡಿಸಿದಾಗ ಸಂಸದರ ಪುತ್ರಿಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದೆ. ಭೀಮಸಮುದ್ರದ ಜಿಎಂ ಸಿದ್ದೇಶ್ವರ ಮನೆ ಸುತ್ತಲೂ ಈಗ 5 ಕಿ.ಮೀ. ರೆಡ್ ಝೋನ್ ಎಂದು ಘೋಷಣೆ ಮಾಡಲಾಗಿದೆ.  ಮನೆಯಿಂದ ಯಾರು ಕೂಡ  ಹೊರ ಬರುವಂತಿಲ್ಲ.

ಸಂಸದ ಜಿ.ಎಂ.ಸಿದ್ದೇಶ್ವರ ಸೇರಿ 6 ಜನರ ರಕ್ತದ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದೆ. 4 ಜನರ ವರದಿ ಬಂದಿದೆ, 4 ಜನರದ್ದು ನೆಗೆಟಿವ್ ಬಂದಿದೆ. ಇನ್ನೂ ಇಬ್ಬರ ವರದಿ ಬರೋದು ಬಾಕಿ ಇದೆ. ಸೋಂಕಿತರ  ಜೊತೆ ಮಕ್ಕಳಿದ್ದರು. ಆದರೆ, ಮಕ್ಕಳಲ್ಲಿ ಯಾವುದೇ ಸೋಂಕು ಕಂಡು ಬಂದಿಲ್ಲ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top