ಡಿವಿಜಿ ಸುದ್ದಿ, ದಾವಣಗೆರೆ: ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಮತದಾರರು ಯಾವ ಪಕ್ಷಕ್ಕೂ ಬಹುಮತ ನೀಡದೆ ಅಂತಂತ್ರ ಪರಿಸ್ಥಿತಿಗೆ ತಂದು ನಿಲ್ಲಿಸಿದ್ದಾರೆ. ಈ ಬಾರಿ ಯಾವುದೇ ಪಕ್ಷ ಅಧಿಕಾರ ಗದ್ದುಗಿ ಹಿಡಿಯಬೇಕಾದರೆ, ಸ್ವತಂತ್ರ ಅಭ್ಯರ್ಥಿಗಳ ಜತೆ ಜೆಡಿಎಸ್ ಪಾತ್ರ ನಿರ್ಣಾಯವಾಗಲಿದೆ.

ದಾವಣಗೆರೆ ಮಹಾ ನಗರ ಪಾಲಿಕೆ ಚುನಾವಣೆ 45 ವಾರ್ಡ್ ಗಳಲ್ಲಿ 22 ಕಾಂಗ್ರೆಸ್, 17 ಬಿಜೆಪಿ, 1 ಜೆಡಿಎಸ್ ಹಾಗೂ 5 ಪಕ್ಷೇತರರ ಸ್ಥಾನಗಳು ಗೆಲುವು ಸಾಧಿಸಿದ್ದಾರೆ. ಯಾವುದೇ ಪಕ್ಷ ಅಧಿಕಾರಕ್ಕೆ ಹಿಡಿಯಬೇಕಾದ್ರೆ ಮ್ಯಾಜಿಕ್ ನಂಬರ್ 23 ದಾಟಬೇಕು. ಗೆದ್ದಿರುವ 5 ಪಕ್ಷೇತರಲ್ಲಿ 4 ಅಭ್ಯರ್ಥಿಗಳು ಬಿಜೆಪಿ ಬಂಡಾಯ ಅಭ್ಯರ್ಥಿಗಳಾಗಿದ್ದು, ಇನ್ನೊಂದು ಕಾಂಗ್ರೆಸ್ ಬಂಡಾಯ ಅಭ್ಯರ್ಥಿ. ಇನ್ನುಳಿದ 1 ಜೆಡಿಎಸ್ ಪಾತ್ರವೂ ಇಲ್ಲಿ ನಿರ್ಣಾಯವಾಗಿದ್ದು, ಯಾರ ಒಲವು ಯಾರ ಕಡೆ ಇದೆ ಎನ್ನುವುದೇ ತೀವ್ರ ಕುತೂಹಲ ಮೂಡಿಸಿದೆ.
ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ: ಮ್ಯಾಜಿಕ್ ನಂಬರ್ 23
22 ಪಾಲಿಕೆ ಸದಸ್ಯರು
1 ಕಾಂಗ್ರೆಸ್ ಬಂಡಾಯಅಭ್ಯರ್ಥಿ ಬೆಂಬಲ
1 ಜೆಡಿಎಸ್ ಅಭ್ಯರ್ಥಿ ಬೆಂಬಲ
1 ವಿಧಾನಸಭೆ ಸದಸ್ಯರು
2 ವಿಧಾನ ಪರಿಷತ್ ಸದಸ್ಯರು
27 ಒಟ್ಟು ಸ್ಥಾನಗಳು
ಕಾಂಗ್ರೆಸ್ ಪಕ್ಷ 22 ಸ್ಥಾನ ಗೆದ್ದಿರುವುದರಿಂದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಜೊತೆ 1 ಜೆಡಿಎಸ್, 2 ವಿಧಾನ ಪರಿಷತ್ ಸದಸ್ಯರ ಹಾಗೂ 1 ವಿಧಾನ ಸಭಾಸಭೆ ಸದಸ್ಯರ ಬಲದಿಂದ ಕಾಂಗ್ರೆಸ್ ಅಧಿಕಾರಕ್ಕೆ ಹೇರಬಹುದು ಎಂಬುದು ಕಾಂಗ್ರೆಸ್ ಪಕ್ಷದ ಲೆಕ್ಕಾಚಾರ .
ಬಿಜೆಪಿ ಲೆಕ್ಕಾಚಾರ : ಮ್ಯಾಜಿಕ್ ನಂಬರ್ 23
17 ಪಾಲಿಕೆ ಸದಸ್ಯರು
04 ಬಿಜೆಪಿ ಬಂಡಾಯ ಅಭ್ಯರ್ಥಿಗಳು ಬೆಂಬಲ
1 +1 ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಥವಾ ಜೆಡಿಎಸ್ ಬೆಂಬಲ
2 ವಿಧಾನಸಭಾ ಸದಸ್ಯರು
1 ಸಂಸದರು
26 ಒಟ್ಟು ಸ್ಥಾನಗಳು
ಕಳೆದ ಬಾರಿ ಕೇವಲ 01 ಸ್ಥಾನ ಗೆದ್ದಿದ್ದ ಬಿಜೆಪಿ ಈ ಬಾರಿ 17 ಸ್ಥಾನ ಗೆಲ್ಲುವ ಮೂಲಕ ಈ ಬಾರಿಯ ಅಧಿಕಾರ ಗದ್ದುಗೆ ಹಿಡಿಯುವ ಹಠಕ್ಕೆ ಬಿದ್ದಿದೆ. ಪಕ್ಷೇತರ 05 ಅಭ್ಯರ್ಥಿಗಳು, 02 ವಿಧಾನಸಭಾ ಸದಸ್ಯರು ಹಾಗೂ ಒಂದು ಸಂಸದರ ಬೆಂಬಲದಿಂದ ಪಾಲಿಕೆ ಅಧಿಕಾರ ಹಿಡಿಯುವ ವಿಶ್ವಾಸ ವ್ಯಕ್ತಪಪಡಿಸಿದೆ.
ಚುನಾವಣೆಗೆ ಮುನ್ನ 35 ಸ್ಥಾನ ಗೆಲ್ಲವ ವಿಶ್ವಾಸ ವ್ಯಕ್ತಪಡಿಸಿದ್ದ ಎರಡು ಪಕ್ಷಗಳಿಗೆ ಮತದಾರರು ಪೂರ್ಣ ಬಹುಮತ ನೀಡಿಲ್ಲ.ಹೀಗಾಗಿ ಈ ಬಾರಿ ಯಾರೇ ಅಧಿಕಾರ ಹಿಡಿಯಬೇಕಾದರೂ, ಪಕ್ಷೇತರ ಬೆಂಬಲ ಅಗತ್ಯವಾಗಿದೆ. ಎರಡೂ ಪಕ್ಷದ ನಾಯಕು ಪಕ್ಷೇತರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.



