Connect with us

Dvg Suddi-Kannada News

ಮಾ.16 ರಂದು ದಾವಣಗೆರೆಯಲ್ಲಿ ಉದ್ದಿಮೆ ಪರವಾನಿಗೆ ನವೀಕರಣ, ಹೊಸ ಪರವಾನಿಗೆ ಆಂದೋಲನ

ದಾವಣಗೆರೆ

ಮಾ.16 ರಂದು ದಾವಣಗೆರೆಯಲ್ಲಿ ಉದ್ದಿಮೆ ಪರವಾನಿಗೆ ನವೀಕರಣ, ಹೊಸ ಪರವಾನಿಗೆ ಆಂದೋಲನ

ಡಿವಿಜಿ ಸುದ್ದಿ, ದಾವಣಗೆರೆ: 2019-20ನೇ ಸಾಲಿನ ಆರ್ಥಿಕ ವರ್ಷ ಮುಗಿಯುತ್ತಾ ಬಂದಿದ್ದರೂ ಸಹ ಪಾಲಿಕೆ ವ್ಯಾಪ್ತಿಯ ಬಹುತೇಕ ಉದ್ದಿಮೆದಾರರು ತಮ್ಮ ಉದ್ದಿಮೆಗಳ ಪರವಾನಗಿ ನವೀಕರಿಸಿಕೊಂಡಿರುವುದಿಲ್ಲ. 2019-20ನೇ ಸಾಲಿನಲ್ಲಿ ಹೊಸದಾಗಿ ಉದ್ದಿಮೆ ಪ್ರಾರಂಭಿಸಿದ್ದರೆ, ಹೊಸ ಉದ್ದಿಮೆ ಪರವಾನಿಗೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.

ಪರವಾನಗಿ ಪಡೆಯದೇ ಉದ್ದಿಮೆ ನಡೆಸುವುದು ಕಾನೂನು ಬಾಹಿರವಾದದ್ದು, ಈ ಸಂಬಂಧವಾಗಿ ಉದ್ದಿಮೆದಾರರಿಗೆ ಅನುಕೂಲ ಕಲ್ಪಿಸುವ ದೃಷ್ಠಿಯಿಂದ ಪಾಲಿಕೆ ವತಿಯಿಂದ ಮಾ.16 ರಂದು ಚಾಮರಾಜ ಪೇಟೆಯ ಇಂದಿರಾ ಕ್ಯಾಂಟೀನ್ ಆವರಣದಲ್ಲಿ ಉದ್ದಿಮೆ ಪರವಾನಿಗೆಯ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ. ಆದ್ದರಿಂದ ಎಲ್ಲಾ ಉದ್ದಿಮೆದಾರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ತಮ್ಮ ಉದ್ದಿಮೆಗಳ ನವೀಕರಣ/ಹೊಸದಾಗಿ ಉದ್ದಿಮೆ ಪರವಾನಿಗೆ ಪಡೆಯಬೇಕೆಂದು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top