ಡಿವಿಜಿಸುದ್ದಿ, ದಾವಣಗೆರೆ: ಮಹಾನಗರ ಪಾಲಿಕೆಯ 19 ನೇ ವಾರ್ಡ್ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿರು ವವಕೀಲ ಸಿದ್ಧೇಶಿ ಎನ್ ಸ್ಪರ್ಧಿಸಿದ್ದು, ಬಿಜೆಪಿಗೆ ಬಂಡಾಯದ ಬಿಸಿ ತೋರಿಸಲಿದ್ದಾರೆ.
ಬೆಳಗ್ಗೆನಿಂದಲೇ ಮನೆ ಮನೆಗೆ ತೆರಳಿ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದರು. ನೂರಕ್ಕೆ ನೂರಷ್ಟು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಾನು ಸ್ಥಳೀಯ ನಿವಾಸಿಯಾಗಿದ್ದು, ಇಲ್ಲಿನ ಜನರ ನೋವು, ನಲಿವಿನ ಅರಿವಿದೆ. ನಾನು ವಕೀಲ ವೃತ್ತಿ ಜೊತೆಗೆ ಬಿಜೆಪಿ ಮತ್ತು ಸಂಘ ಪರಿವಾರದ ಜೊತೆ ನಿಕಟವಾದ ಸಂಪರ್ಕ ಹೊಂದಿದ್ದೇನೆ.
ಈ ಬಾರಿ 19 ನೇ ವಾರ್ಡ್ ನಿಂದ ಟಿಕೆಟ್ ಸಿಗುವ ಭರವಸೆಯಲ್ಲಿದ್ದೆ. ಆದರೆ, ಕೊನೆಯ ಕ್ಷಣದಲ್ಲಿ ಟಿಕೆಟ್ ಕೈ ತಪ್ಪಿದ್ದರಿಂದ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ. ವಾರ್ಡ್ನ ಸಮಗ್ರ ಅಭಿವೃದ್ಧಿ ನನ್ನ ಉದ್ದೇಶವಾಗಿದ್ದು, ಮತದಾರರು ಕ್ರಮ ಸಂಖ್ಯೆ 7ರ ಟ್ರ್ಯಾಕ್ಟರ್ ರ್ಓಡಿಸುತ್ತಿರುವ ರೈತ ಗುರುತಿಗೆ ಮತ ಹಾಕುವ ಮೂಲಕ ಸ್ಥಳೀಯರನ್ನು ಗೆಲ್ಲಿಸಿಕೊಡಬೇಕೆಂದು ಮನವಿ ಮಾಡಿಕೊಂಡರು.