ಡಿವಿಜಿ ಸುದ್ದಿ, ದಾವಣಗೆರೆ: ಈ ಬಾರಿಯ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಆಡಳಿತ ಹಿಡಿಯುವುದು ನೂರಕ್ಕೆ ನೂರಷ್ಟು ಸತ್ಯ. 45 ವಾರ್ಡ್ ಗಳಲ್ಲಿ 35 ಕ್ಕೂ ಸ್ಥಾನ ಗೆಲ್ಲುವುದು ನಿಶ್ಚಯವಿದೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ಈ ಬಗ್ಗೆ ಡಿವಿಜಿ ಸುದ್ದಿ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿ ಇದ್ದಾಗ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಿಲ್ಲ. ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಬಂದ ಹಣವನ್ನು ಸರಿಯಾಗಿ ಉಪಯೋಗಿಸಿಲ್ಲ. ಸಾವಿರ ಕೋಟಿಯಲ್ಲಿ ಕೇವಲ 100 ಕೋಟಿಯಷ್ಟು ಮಾತ್ರ ಬಳಕೆಯಾಗಿದೆ. ಈ ಬಾರಿ ಬಿಜೆಪಿಗೆ ಮತ ನೀಡುವ ಮೂಲಕ ಜನರು ಅತ್ಯಧಿಕ ಸ್ಥಾನ ಗೆಲ್ಲಿಸಿ ಎಂದು ಮನವಿ ಮಾಡಿಕೊಂಡರು. ಒಂದು ಪಕ್ಷ ಅಂದ ಮೇಲೆ ಬಂಡಾಯ ಸಾಮಾನ್ಯ. ಇದೆಲ್ಲವನ್ನು ಮೀರಿ ಬಿಜೆಪಿ ಗೆಲುವು ಸಾಧಿಸಲಿದೆ ಎಂದರು.



