ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ಕುರುಬರ ಹೊರಾಟ ಸಮಿತಿ, ಜಿಲ್ಲಾ ಕನಕ ಬ್ಯಾಂಕ್, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘ, ಬೀರೇಶ್ವರ ವಿದ್ಯಾವರ್ಧಕ ಹೋರಾಟ ಸಮಿತಿಯಿಂದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಇವರ ಮೂಲಕ ಕೊರೊನಾ ಸಂತ್ರಸ್ತರಿಗೆ 100 ಆಹಾರ ಕಿಟ್ ನೀಡಲಾಯಿತು. ಬಿ.ಸಿ.ಬಸವರಾಜಪ್ಪ, ಎಂ.ಬಿ. ದ್ಯಾಮಪ್ಪ, ಸುರೇಶ್ ಇದ್ದರು. ಇದೇ ವೇಳೆ ಹಡಗಲಿ ಇಂಜಿನಿಯರ್ ಐಗೋಳ ಪ್ರಕಾಶ್ ಅವರು ವೈಯಕ್ತಿಕವಾಗಿ 30 ಆಹಾರ ಕಿಟ್‍ಗಳಿಗೆ ತಗಲುವ ವೆಚ್ಚದಷ್ಟು ಮೊತ್ತದ ಚೆಕ್‍ನ್ನು ಜಿಲ್ಲಾಧಿಕಾರಿಗೆ ನೀಡಿದರು.



