Connect with us

Dvg Suddi-Kannada News

ಶೀಘ್ರವೇ  ಹರಿಹರದಲ್ಲಿ 2ಜಿ ಇಥನಾಲ್ ಕೇಂದ್ರ ಪ್ರಾರಂಭ: ಜಿ.ಎಂ. ಸಿದ್ದೇಶ್ವರ

ದಾವಣಗೆರೆ

ಶೀಘ್ರವೇ  ಹರಿಹರದಲ್ಲಿ 2ಜಿ ಇಥನಾಲ್ ಕೇಂದ್ರ ಪ್ರಾರಂಭ: ಜಿ.ಎಂ. ಸಿದ್ದೇಶ್ವರ

ಡಿವಿಜಿ ಸುದ್ದಿ, ದಾವಣಗೆರೆ: ಭಾರತದ ಅತೀ ದೊಡ್ಡ 2ಜಿ ಇಥನಾಲ್ ಕೇಂದ್ರವನ್ನು ಸ್ಥಾಪಿಸಲು ಜಿಲ್ಲೆಯ ಹರಿಹರ ತಾಲ್ಲೂಕಿನ ಹನಗವಾಡಿಯಲ್ಲಿ ಜಾಗ ನೀಡಲಾಗಿದ್ದು, ಆದಷ್ಟು ಬೇಗ ಈ ಕೇಂದ್ರದ ಕಟ್ಟಡ ಕಾಮಗಾರಿ ಕೆಲಸವನ್ನು ಶೀಘ್ರದಲ್ಲಿ ಆರಂಭಿಸಿ ಹಾಗೂ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗಾವಕಾಶ ಒದಗಿಸುವಂತೆ ಸಂಸದ ಜಿ.ಎಂ. ಸಿದ್ದೇಶ್ವರ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.

ಹನಗವಾಡಿ ಗ್ರಾಮ, ಹರಿಹರ ತಾಲ್ಲೂಕು ಇಲ್ಲಿ 60 ಕೆಎಲ್‍ಪಿಡಿ 2ಜಿ ಇಥನಾಲ್ ಉತ್ಪಾದನೆಯ ಘಟಕವನ್ನು ಸ್ಥಾಪಿಸುವ ಸಂಬಂಧ ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಇಥನಾಲ್ ಕೇಂದ್ರ ಸ್ಥಾಪಿಸುವ ಹೊಣೆಯನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿ. ನೀಡಲಾಗಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ 2ಜಿ ಇಥನಾಲ್ ಕೇಂದ್ರ ಸ್ಥಾಪಸಿಲು ಅವಕಾಶ ದೊರೆತಿದೆ ಎಂದರು.

2023 ಏಪ್ರಿಲ್ ಅಂತ್ಯದ ವೇಳೆಗೆ ಕಟ್ಟಡ ಉದ್ಘಾಟನೆಗೆ ಸಿದ್ದವಾಗಬೇಕೆಂದು ಸೂಚನೆ ನೀಡಿದರು. ಹಾಗೂ ಕಟ್ಟಡ ಕಾಮಗಾರಿಗೆ ಈ ವ್ಯಾಪ್ತಿಯಲ್ಲಿನ ಕುಟುಂಬಗಳನ್ನು ಗುರುತಿಸಲಾಗಿದ್ದು, ಅವರನ್ನು ತೆಗೆದುಕೊಳ್ಳಿ. ಸಂಸ್ಥೆ ಕೆಲಸ ಆರಂಭಿಸಿದ ನಂತರ ಉದ್ಯೋಗದಲ್ಲಿ ದಾವಣಗೆರೆಯ ಸ್ಥಳೀಯ ಜನರಿಗೆ ಆದ್ಯತೆ ನೀಡಬೇಕು. ಅರ್ಹತೆ ಅನುಗುಣವಾಗಿ ಕೆಲಸ ನೀಡಿ. ವಾಚಮ್ಯಾನ್ ಕೆಲಸದಿಂದ ತಂತ್ರಜ್ಞಾನದ ಕೆಲಸ ಮಾಡುವ ಅರ್ಹತೆ ಇದ್ದವರು ಕಂಡು ಬಂದರೆ ಸ್ಥಳೀಯ ನಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡಿ. ಸಾಧ್ಯವಾದಷ್ಟು ಸ್ಥಳೀಯರಿಗೆ ಉದ್ಯೋಗಾವಕಾಶ ಒದಗಿಸಿಕೊಡುವಂತೆ ತಿಳಿಸಿದರು.

ಎಂಆರ್‍ಪಿಎಲ್ ಜನರಲ್ ಮ್ಯಾನೇಜರ್ ಗಿರೀಶ್ ಮಾತನಾಡಿ, ಸಂಸ್ಥೆಯ ಬೆಳವಣಿಗೆ ಮತ್ತು 2ಜಿ ತಂತ್ರಜ್ಞಾನದಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸಲಿದೆ ಎಂದು ವಿವರಿಸಿದರು. ಈ ಹಿಂದೆ 60 ಕೆಡಿಎಲ್‍ಪಿ ತಂತ್ರಜ್ಞಾನವನ್ನು ಈಗ 2ಜಿ ಇಥನಾಲ್ ತಂತ್ರಜ್ಞಾನಕ್ಕೆ ಅಭಿವೃದ್ದಿ ಪಡಿಸಲಾಗುತ್ತಿದೆ. ಭಾರತ ದೇಶವು ಪೆಟ್ರೋಲ್‍ಗೆ ಬೇರೆ ದೇಶಗಳ ಮೇಲೆ ಅವಲಂಬನೆಯಾಗುವುದನ್ನು ಕಡಿಮೆ ಮಾಡಲು ಈ ತಂತ್ರಜ್ಞಾನವನ್ನು ಅಭಿವೃದ್ದಿ ಪಡಿಸಲಾಗುತ್ತಿದೆ. ತಮ್ಮ ಸಂಸ್ಥೆಯಿಂದ ಎಲ್.ಪಿ.ಜಿ. ಡಿಸೇಲ್, ಪೆಟ್ರೋಲ್, ನೆಪ್ತಾ, ಬಿಲಿಯಮ್ ಆಯಿಲ್‍ಗಳನ್ನು ತಯಾರಿಸುತ್ತಿದ್ದು, ಕರ್ನಾಟ ಸರ್ಕಾರಕ್ಕೆ ರೂ.1000 ಕೋಟಿ ತೆರಿಗೆ ನೀಡುತ್ತಿದೆ ಹಾಗೂ ಭಾರತಕ್ಕೆ ರೂ.11,000 ಕೋಟಿ ತೆರಿಗೆ ನೀಡುತ್ತಿದೆ ಎಂದರು.

2ಜಿ ತಂತ್ರಜ್ಞಾನದಲ್ಲಿ ಆಯಿಲ್‍ಗಳ ತಯಾರಿಕೆಗಾಗಿ ರೈತರು ಬೆಳೆದ ಬೆಳೆಗಳ ತ್ಯಾಜ್ಯ ವಸ್ತುಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತದೆ. ಮೆಕ್ಕೆಜೋಳದ ದಂಟು, ಬೆಂಡು, ಭತ್ತದ ಹುಲ್ಲು, ಹತ್ತಿಯ ಕಡ್ಡಿಗಳನ್ನು ಬಳಸಿಕೊಳ್ಳಲಾಗುತ್ತದೆ. ಬೆಳೆಯ ತ್ಯಾಜ್ಯಗಳನ್ನು  ರೈತರಿಂದ ಖರೀದಿಸಲು ಕೆಲವು ಏಜೆನ್ಸಿಗಳನ್ನು ಗುರುತಿಸಿದ್ದು, ಅವರು ರೈತರಿಂದ ಖರೀದಿಸಿ ತಮಗೆ ನೀಡುತ್ತಾರೆ ಎಂದು ಮಾಹಿತಿ ನೀಡಿದರು.

ಈ ಸಂಸ್ಥೆಯು ಒಂದು ದಿನಕ್ಕೆ 60 ಸಾವಿರ ಲೀಟರ್ ಆಯಿಲ್ ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಇದರ ತಯಾರಿಕೆಗೆ 200 ರಿಂದ 300 ಟನ್ ತ್ಯಾಜ್ಯ ಪದಾರ್ಥಗಳು ಬೇಕಾಗುತ್ತವೆ. ಈ ಪ್ರಮಾಣದ ಕಚ್ಚಾ ಪದಾರ್ಥಗಳನ್ನು ರೈತರಿಂದ ಸಂಗ್ರಹಿಸಲಾಗುವುದು. ಹಾಗೂ ನೀರಿಗಾಗಿ ಶಾಂತಿಸಾಗರದ ಕೆರೆಯನ್ನು ಗುರುತಿಸಿದ್ದು, ಸರ್ಕಾರದಿಂದ ಅಧಿಕೃತ ಆದೇಶ ಬಂದ ನಂತರ ತುಂಗಭದ್ರ ನದಿ ನೀರನ್ನು ಬಳಸುತ್ತೇವೆ ಎಂದರು.ಶಾಂತಿಸಾಗರದ ನೀರು ಕುಡಿಯಲು ಬಳಸಲಾಗುತ್ತದೆ. ನೀವು ಆ ನೀರನ್ನು ಬಳಸಬೇಡಿ, ಬದಲಾಗಿ ತುಂಗಭದ್ರ ನದಿ ನೀರನ್ನು ಬಳಸುವಂತೆ ಸಂಸದರು ಸಲಹೆ ನೀಡಿದರು.

2ಜಿ ಇಥನಾಲ್ ಕಟ್ಟಡ ಕಾಮಗಾರಿಗೆ ಕೇಂದ್ರ ಸರ್ಕಾರದ ‘ಪ್ರಧಾನ್ ಮಂತ್ರಿ ಜೀವನ್’ ಯೋಜನೆಯಲ್ಲಿ ಶೇ.20 ರಷ್ಟು ಅನುದಾನ ನೀಡುತ್ತಾರೆ. ರಾಜ್ಯ ಸರ್ಕಾರದಿಂದ ಯಾವುದೇ ಅನುದಾನ ಇಲ್ಲ, ರಾಜ್ಯ ಸರ್ಕಾರದ ಅನುದಾನಕ್ಕೆ ಅರ್ಜಿ ಸಲ್ಲಿಸಲಾಗಿದೆ. ಪರಿಸರ ಮಾಲಿನ್ಯ ನಿವಾರಣೆ ಸರ್ಟಿಫಿಕೇಟ್ ಬಂದ ಕೂಡಲೇ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಪ್ರಭಾರ ಅಪರ ಜಿಲ್ಲಾಧಿಕಾರಿ ನಜ್ಮಾ.ಜಿ, ಉಪವಿಭಾಗಧಿಕಾರಿ ಮಮತಾ ಹೊಸಗೌಡರ್, ಎಂ.ಆರ್.ಪಿ.ಎಲ್ ಸಂಸ್ಥೆಯ ಇಂಡಿಪೆಂಡೆಂಟ್ ಡೈರೆಕ್ಟರ್ ಮಂಜುಳಾ, ಹರಿಹರ ತಹಶೀಲ್ದಾರರಾದ ರಾಮಚಂದ್ರಪ್ಪ, ಪರಿಸರ ಮಾಲಿನ್ಯ ನಿಯಂತ್ರಣಾ ಧಿಕಾರಿಗಳು, ಎಂಆರ್‍ಪಿಎಲ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top