ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ 14ನೇ ವಾರ್ಡ್ ಸದಸ್ಯರಾದ ಕೆ. ಚಮನ್ ಸಾಬ್ ರವರು ತಮ್ಮ ವಾರ್ಡ್ ನಲ್ಲಿ ಸೇವೆ ಸಲ್ಲಿಸುತ್ತಿರುವ ಪೌರಕಾರ್ಮಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಿಸಿದರು.
ನಂತರ ಮಾತನಾಡಿದ ಅವರು ವಾರ್ಡ್ ಸ್ವಚ್ಛವಾಗಿಡುವಲಿ ಪೌರ ಕಾರ್ಮಿಕರ ಪಾತ್ರ ಬಹು ಮುಖ್ಯವಾಗಿದೆ. ಅವರ ಆರೋಗ್ಯದ ಬಗ್ಗೆ ಕಾಳಜಿ ಇರಲಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ, ಬಸವರಾಜ ಕಾಂಗ್ರೆಸ್ ಮುಖಂಡರಾದ ಅಲ್ಲಾ ವಲಿ ಗಾಜಿ ಖಾನ್, ಕೆ. ಜಬಿವುಲ್ಲಾ, ಕೆ, ಜುಬೇರ್, ಖಾಜಿ ಖಲೀಲ್, ಆಹಮದ್ ರಜ್ಜಾ, ಗುರುಕುಲ ಶಾಲೆಯ ಆರ್. ಅಬ್ದುಲ್ , ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಕೆ.ಎಲ್. ಹರೀಶ್ ಬಸಾಪುರ ಉಪಸ್ಥಿತರಿದ್ದರು.



