ಡಿವಿಜಿ ಸುದ್ದಿ, ದಾವಣಗೆರೆ: ಕೊರೊನಾ ವೈರಸ್ ಹರಡದಂತೆ ತಡೆಗಟ್ಟುವ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ದಾವಣಗೆರೆ ಜಿಲ್ಲೆಯಲ್ಲಿ 6 ಹೆಚ್ಚುವರಿ ಚೆಕ್‍ಪೋಸ್ಟ್‍ಗಳನ್ನು ತೆರೆಯಲಾಗಿದೆ.
ದಾವಣಗೆರೆ ಜಿಲ್ಲೆಗೆ ವಿದೇಶಗಳಿಂದ, ಹೊರ ರಾಜ್ಯಗಳಿಂದ ಹಾಗೂ ಬೇರೆ ಜಿಲ್ಲೆಗಳಿಂದ ಬರುವ ಜನರನ್ನು ತಪಾಸಣೆ ಮಾಡಲು ಜಿಲ್ಲೆಯಲ್ಲಿ ನಿನ್ನೆಯವರೆಗೂ (ಮಾರ್ಚ್ 24 ರವರೆಗೆ) 10 ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಆದೇಶಿಸಲಾಗಿತ್ತು. ಆದರೆ ಜಿಲ್ಲೆಯಲ್ಲಿ ಇನ್ನು ಹೆಚ್ಚಿನ ಚೆಕ್‍ಪೋಸ್ಟ್ ಅವಶ್ಯಕತೆ ಇರುವುದರಿಂದ ಚನ್ನಗಿರಿ ತಾಲ್ಲೂಕಿನಲ್ಲಿ 3 ಚೆಕ್‍ಪೋಸ್ಟ್‍ಗಳು, ಹೊನ್ನಾಳಿ 2, ಜಗಳೂರು 1, ಒಟ್ಟಾರೆ 6 ಹೆಚ್ಚುವರಿ ಚೆಕ್‍ಪೋಸ್ಟ್‍ಗಳನ್ನು ಸ್ಥಾಪಿಸಲು ಆದೇಶಿಸಲಾಗಿದೆ.
ಈ ಹೆಚ್ಚುವರಿಯಾಗಿ ತೆರೆಯಲಾದ ಚೆಕ್‍ಪೋಸ್ಟ್‍ಗಳ ಉಸ್ತುವಾರಿಗೆ ತಾಲ್ಲೂಕು ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲು ತಹಶೀಲ್ದಾರರಿಗೆ ಸೂಚಿಸಲಾಗಿದ್ದು, ಜಿಲ್ಲೆಯಲ್ಲಿ ಸ್ಥಾಪಿಸಲಾದ 16 ಚೆಕ್‍ಪೋಸ್ಟ್‍ಗಳ ವಿವರ ಇಲ್ಲಿದೆ ನೋಡಿ.
1) ಬಾಡಾಕ್ರಾಸ್ ದಾವಣಗೆರೆ ನಗರ ಸರಹದ್ದು
2) ಶಾಮನೂರು ಬಳಿ ದಾವಣಗೆರೆ ನಗರ ಸರಹದ್ದು
3) ಲಕ್ಕಮುತ್ತೇನಹಳ್ಳಿ, ದಾವಣಗೆರೆ ತಾಲ್ಲೂಕು
4) ಹೆಚ್.ಬಸಾಪುರ, ದಾವಣಗೆರೆ ತಾಲ್ಲೂಕು
5) ಕುಮಾರಪಟ್ಟಣಂ ಹಲಸಬಾಳು ಹತ್ತಿರ ಹರಿಹರ ತಾಲ್ಲೂಕು,
6) ಕುರುಬರಹಳ್ಳಿ ಹರಿಹರ ತಾಲ್ಲೂಕು
7) ಚೀಲೂರು ಹೊನ್ನಾಳಿ ತಾಲ್ಲೂಕು,
8) ಜೀನಹಳ್ಳಿ ಕ್ರಾಸ್ ನ್ಯಾಮತಿ ತಾಲ್ಲೂಕು 9)ಸವಳಂಗ ವೃತ್ತ ಹೊನ್ನಾಳಿ ತಾಲ್ಲೂಕು
9) ಹನಗವಾಡಿ ಹೊನ್ನಾಳಿ ತಾಲ್ಲೂಕು
11) ಮಾದಾಪುರ ಚನ್ನಗಿರಿ ತಾಲ್ಲೂಕು
12) ಮಾವಿನಕಟ್ಟೆ ಚನ್ನಗಿರಿ ತಾಲ್ಲೂಕು
13) ಮಸಣಿಕೆರೆ ಚನ್ನಗಿರಿ ತಾಲ್ಲೂಕು
14) ಜೋಳ್‍ದಾಳ್ ಚನ್ನಗಿರಿ ತಾಲ್ಲೂಕು
15) ದೊಣ್ಣೆಹಳ್ಳಿ ಜಗಳೂರು ತಾಲ್ಲೂಕು
16) ಗಡಿಮಾಕುಂಟೆ ಜಗಳೂರು ತಾಲ್ಲೂಕು
ಹೊರ ರಾಜ್ಯದಿಂದ ಹಾಗೂ ಹೊರ ಜಿಲ್ಲೆಗಳಿಂದ ಸ್ವಂತ/ ಖಾಸಗಿ ವಾಹನಗಳಲ್ಲಿ ಬರುವ ಜನರನ್ನು ಕೂಲಂಕೂಷವಾಗಿ ತಪಾಸಣೆ ನಡೆಸಿ ಕೋವಿಡ್-19 ಸೋಂಕಿನ ಲಕ್ಷಣಗಳು ಕಂಡು ಬಂದ ವ್ಯಕ್ತಿಗಳನ್ನು ಪ್ರತ್ಯೇಕ ವಾಹನದಲ್ಲಿ ಕ್ವಾರಂಟೈನ್ ಸ್ಥಳಗಳಿಗೆ ಕಳುಹಿಸಿ ಮೇಲಾಧಿಕಾರಿಗಳ ಗಮನಕ್ಕೆ ತರುವುದು ಹಾಗೂ ರೋಗ ಲಕ್ಷಣಗಳು ಕಂಡು ಬಾರದಿದ್ದಲ್ಲಿ ಮುಂದಿನ ಪ್ರಯಾಣಿಕ್ಕೆ ಅವಕಾಶ ಮಾಡುವಂತೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



