Connect with us

Dvg Suddi-Kannada News

ಜಾತಿ, ಹಣ ಆಮೀಷಕ್ಕೆ ಒಳಗಾಗಬೇಡಿ ; ಸುಂದರೇಶ್

ಮುಖಪುಟ

ಜಾತಿ, ಹಣ ಆಮೀಷಕ್ಕೆ ಒಳಗಾಗಬೇಡಿ ; ಸುಂದರೇಶ್

ಡಿವಿಜಿ ಸುದ್ದಿ, ದಾವಣಗೆರೆ:

ಮತದಾರರು  ಹಣ, ಹೆಂಡ ಜಾತಿ ವ್ಯಾಮೋಹಕ್ಕೆ ಒಳಗಾಗದೇ ನಗರದ ಅಭಿವೃದ್ದಿಗೆ ಶ್ರಮಿಸುವ  ಕಮ್ಯೂನಿಷ್ಟ್ ಪಕ್ಷದ ಅಭ್ಯರ್ಥಿಗಳಿಗೆ ನಿಮ್ಮ ಮತ ಹಾಕಿ ಎಂದು ಕಮ್ಯೂನಿಷ್ಟ್ ಪಕ್ಷದ ರಾಜ್ಯ ಮಂಡಳಿ ಕಾರ್ಯದರ್ಶಿ ಸಾತಿ ಸುಂದರೇಶ್ ಕರೆ ನೀಡಿದರು.

ದಾವಣಗೆರೆ ಮಹಾನಗರ ಪಾಲಿಕೆ ಚುನಾವಣೆ ಅಂಗವಾಗಿ 28ನೇ ವಾರ್ಡಿನಲ್ಲಿ ಕಮ್ಯೂನಿಷ್ಟ್ ಪಕ್ಷದಿಂದ ಸ್ಪರ್ಧಿಸಿರುವ ಆವರಗೆರೆ ಉಮೇಶ್ ಪರವಾಗಿ ಚುನಾವಣಾ ಪ್ರಚಾರ ಕಾರ್ಯಕ್ಕೆ ಇಂದು ಚಾಲನೆ ನೀಡಿ ಮಾತನಾಡಿದ ಅವರು, ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮತ್ತೊಮ್ಮೆ ಕೆಂಪು ಧ್ವಜವನ್ನು ಹಾರಿಸುವ ಮೂಲಕ ಕಮ್ಯೂನಿಷ್ಟ್ ಪಕ್ಷವನ್ನು ಆರಿಸಿ ತರಬೇಕು. ಅಲ್ಲದೇ ದಾವಣಗೆರೆಯಲ್ಲಿ 6  ವಾರ್ಡುಗಳಲ್ಲಿ ಸಿಪಿಐನ ಅಭ್ಯರ್ಥಿಗಳು ಸ್ಪರ್ಧಿಸಿದ್ದು, ವಾರ್ಡಿನ ಮತದಾರರು ತಮ್ಮ ಅಮೂಲ್ಯ ಮತವನ್ನು ಸಿಪಿಐನ ಚಿನ್ನೆಯಾದ ಕುಡುಗೋಲು ತೆನೆಗೆ ನೀಡುವ ಮೂಲಕು ಎಂದರು.

ಈ ಹಿಂದೆ ದೇಶ ಮತ್ತು ರಾಜ್ಯದಲ್ಲಿ ಆಡಳಿತ ನಡೆಸಿದ, ಈಗ ನಡೆಸುತ್ತಿರುವ ಪಕ್ಷಗಳು ಜನರಿಗೆ ಕೇವಲ ಆಸೆ, ಅಮಿಷಗಳನ್ನು ನೀಡುತ್ತಿದ್ದಾರೆಯೇ ವಿನಹ ಅವುಗಳನ್ನು ಪಾಲಿಸುವ ಗೋಜಿಗೆ ಹೋಗುತ್ತಿಲ್ಲ. ಬದಲಿಗೆ ಸ್ವಾರ್ಥ ರಾಜಕಾರಣ, ಹಣ ದುರುಪಯೋಗ, ಅಧಿಕಾರ, ಕುರ್ಚಿ ಆಸೆಗೆ ಬಲಿಯಾಗಿ ರೆಸಾರ್ಟ್ ರಾಜಕಾರಣ ಮಾಡುವ ಮೂಲಕ ರಾಜಕೀಯ ದೊಂಬರಾಟ ನಡೆಸುತ್ತಿದ್ದಾರೆ. ಇಂತಹ ಡೋಂಗಿ ರಾಜಕಾರಣಿಗಳಿಗೆ ಮತದಾರರು ಸೂಕ್ತ ಉತ್ತರ ನೀಡಬೇಕೆಂದು ಹೇಳಿದರು.

ಅಭ್ಯರ್ಥಿ ಆವರಗೆರೆ ಹೆಚ್.ಜಿ.ಉಮೇಶ್ ಮಾತನಾಡಿ, ದಾವಣಗೆರೆ ನಗರದ ಅಭಿವೃದ್ದಿಗೆ ಪೂರಕವಾದಂತ ಕೆಲಸವನ್ನು ಕಮ್ಯೂನಿಷ್ಟ್ ಪಕ್ಷ ಮಾಡಿಕೊಂಡು ಬಂದಿದೆ. ಪಕ್ಷದ ನಾಯಕರಾದ ಸುರೇಶಪ್ಪ, ಶೇಖರಪ್ಪ ಕಾರ್ಮಿಕರಿಗಾಗಯೇ ತಮ್ಮ ಪ್ರಾಣವನ್ನು ಬಲಿ ಕೊಟ್ಟರು. ನಗರ ಸಭೆ ಅಧ್ಯಕ್ಷರಾಗಿ, ಶಾಸಕರಾದ ಪಂಪಾಪತಿ ಕಾರ್ಮಿಕರು, ನಗರದ ಏಳಿಗೆಗೆ ಹಗಲಿರುಳು ದುಡಿದರು. ಅದರಂತೆ ಲಾವಣಿ ಬುಡೇನ್‌ಸಾಬ್, ಸೈಯದ್ ಜಿಕ್ರಿಯಾಸಾಬ್, ಹೆಚ್.ಕೆ.ರಾಮಚಂದ್ರಪ್ಪರಂತಹ ನಾಯಕರು ನಗರದಲ್ಲಿ ಪಕ್ಷದಿಂದ ಗೆದ್ದು, ಉತ್ತಮ ಆಡಳಿತ ನೀಡಿ ನಗರಕ್ಕೆ ಮಾದರಿಯಾಗುವಂತ ಕೆಲಸ ಮಾಡಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಲಕ್ಷ್ಣ್, ಪಿ.ಕೆ.ಲಿಂಗರಾಜ್, ಸುರೇಶ್, ವಿಶಾಲಮ್ಮ, ಶಾರದಮ್ಮ, ಸರೋಜಮ್ಮ, ಬಾನಪ್ಪ, ಆವರಗೆರೆ ವಾಸು, ಜಯಪ್ಪ, ಶಿವಕುಮಾರ್, ರಂಗಪ್ಪ, ಹನುಮಂತಪ್ಪ, ಮೋಹನ್, ಮಂಜುನಾಥ್, ಬಿ.ದುಗಪ್ಪ, ದುರುಗೇಶ್, ಐರಣಿ ಚಂದ್ರು ಸೇರಿದಂತೆ ಇತರರು ಇದ್ದರು.

 

 

 

 

 

 

Continue Reading
You may also like...
Click to comment

Leave a Reply

Your email address will not be published. Required fields are marked *

More in ಮುಖಪುಟ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top