ಡಿವಿಜಿ ಸುದ್ದಿ, ದಾವಣಗೆರೆ: ನಗರದ ಭಾಷಾನಗರ ನಿವಾಸಿಯಾದ ನರ್ಸ್ ಕೆಲ ದಿನಗಳ ಹಿಂದೆ ಹೆರಿಗೆ ಮಾಡಿಸಿದ್ದ ಬಾಣಂತಿ ಮತ್ತು ಮಗುವಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ. ಇದರಿಂದ ಬಾಣಂತಿ ನಿಟ್ಟುಸಿರು ಬಿಡುವಂತಾಗಿದೆ.
ಭಾಷಾನಗರದ ನರ್ಸ್ ಪಾಸಿಟಿವ್ ಪತ್ತೆಯಾಗುವುದಕ್ಕಿಂತ ಮುನ್ನ ಹೆರಿಗೆ ಮಾಡಿಸಿದ್ದರು. ಹೀಗಾಗಿ ಅವರ ಸಂಪರ್ಕದಲ್ಲಿದ್ದ 70 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಇದೀಗ ಕ್ವಾರಂಟೈನ್ ನಲ್ಲಿದ್ದ ಬಾಣಂತಿಯ ವರದಿ ಬಂದಿದ್ದು, ನೆಗೆಟಿವ್ ಬಂದಿದೆ. ಆದರೂ ಅವರನ್ನು 14 ದಿನ ಕ್ವಾರಂಟೈನ್ ಚಿಕಿತ್ಸೆ ನೀಡ ಜಿಲ್ಲಾಡಳಿತ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದರು.
https://www.facebook.com/dvgsuddi.kannada/posts/274066923762426
ಜಿಲ್ಲಾಡಳಿತಕ್ಕೆ ತಲೆ ನೋವಾದ ಮೂಲ ಪತ್ತೆ
ನರ್ಸ್ನ 16 ವರ್ಷದ ಮಗನಿಗೆ ಕೊರೊನಾ ಪಾಸಿಟಿವ್ ಬಂದಿದೆ. ಈ ಪ್ರಕರಣದಲ್ಲಿ ಮಗನಿಂದ ತಾಯಿಗೆ ಬಂದಿದೆಯಾ..? ಅಥವಾ ತಾಯಿಯಿಂದ ಮಗನಿಗೆ ಬಂದಿದೆಯಾ ಎನ್ನುವ ಗೊಂದಲ ವೈದ್ಯರಿಗೆ ಮೂಡಿದೆ. ಜಿಲ್ಲಾಡಳಿತಕ್ಕೆ ಈ ಪ್ರಕರಣ ತಲೆ ನೋವಾಗಿದ್ದು, ಮೂಲ ಪತ್ತೆಗೆ ವೈದ್ಯರ ತಂಡ ರಚನೆ ಮಾಡಲಾಗಿದೆ.
ಈಗಾಗಲೇ ಈ 16 ವರ್ಷದ ಯುವಕನನ್ನು ಕ್ವಾರಂಟೈನ್ ನಲ್ಲಿ ಇದ್ದು, ಚಿಕಿತ್ಸೆ ಮುಂದುವರಿದೆ. ಇಂದು ಕೂಡ ಭಾಷಾನಗರ ನೆರ್ಸ್ ನಿವಾಸದ ಸುತ್ತಮುತ್ತಲಿನ ಜನರನ್ನು ಮಾದರಿ ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದೆ.



