Connect with us

Dvg Suddi-Kannada News

ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ, ಒಂದೇ ಕುಟುಂಬದ 6 ಜನರಿಗೆ ವೈರಸ್ ಬಂದಿದ್ದು ಹೇಗೆ..?

ಪ್ರಮುಖ ಸುದ್ದಿ

ಯಾವುದೇ ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ, ಒಂದೇ ಕುಟುಂಬದ 6 ಜನರಿಗೆ ವೈರಸ್ ಬಂದಿದ್ದು ಹೇಗೆ..?

ಡಿವಿಜಿ ಸುದ್ದಿ, ದಾವಣಗೆರೆ:  ನಗರದ ಜಾಲಿ ನಗರ ನಿವಾಸಿಯಾದ ವೃದ್ಧನಿಗೆ ಏ. 29 ರಂದು ಕೊರೊನಾ ಪಾಸಿಟಿವ್ ಪತ್ತೆಯಾಗಿತ್ತು. ಇಂದು ಅದೇ ವೃದ್ಧನ ಕುಟುಂಬದ 5 ಜನ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದೆ. ಯಾವುದೇ ವಿದೇಶಿ ಪ್ರಯಾಣ, ಟ್ರಾವಲ್ ಹಿಸ್ಟರಿ ಇಲ್ಲದಿದ್ದರೂ, ವೃದ್ಧನಿಗೆ ವೈರಸ್ ಹೇಗೆ ಬಂದಿದೆ ಎಂಬುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ. ಹೀಗಾಗಿ ವೃದ್ಧನ ನಿವಾಸದ ಸುತ್ತಮುತ್ತ ಇರುವ ನಿವಾಸಿಗಳನ್ನು ಮಾದರಿ ಪರೀಕ್ಷೆಗೆ ಒಳಪಡಿಸಲು  ಜಿಲ್ಲಾಡಳಿತ ನಿರ್ಧರಿಸಿದೆ.

Posted by Dvgsuddi on Friday, May 1, 2020

ಇಂದು ವೃದ್ಧನ ಕುಟುಂಬದ  31,  24, 18 ವರ್ಷದ  ಸೊಸೆಯಂದಿರು,  24  ವರ್ಷದ ಮಗ ಹಾಗೂ ಒಂದು ವರ್ಷದ ಮಗುವಿಗೆ ಕೊರೊನೊ ಪಾಸಿವ್ ಪತ್ತೆಯಾಗಿದೆ. ಇದರಿಂದ ಒಂದೇ ಕುಟುಂಬದ 6 ಮಂದಿಗೆ ಕೊರೊನಾ ಪಾಸಿವ್ ಬಂದಂತಾಗಿದೆ.

ಇಂದು ಕೂಡ ವೃದ್ಧನ ಸುತ್ತಮುತ್ತ ಜಾಲಿನಗರ ಮತ್ತು ಭಾಷಾನಗರ ಸೇರಿ 80 ಜನರನ್ನು ಮಾದರಿ ಪರೀಕ್ಷೆ ಮಾಡಲಾಗಿದ್ದು, ಸಂಜೆ ಇನ್ನಷ್ಟು ಜನರನ್ನು ಮಾದರಿ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಮಾಹಿತಿ ನೀಡಿದರು.

ಈ ಮೂಲಕ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆ ಕೇವಲ ಮೂರು ದಿನಗಳ ಅಂತರದಲ್ಲಿ  8 ಪ್ರಕರಣಗಳು ಪತ್ತೆಯಾಗಿವೆ. ಅದರಲ್ಲೂ ಹಳೇ ದಾವಣಗೆರೆ ಭಾಗದಲ್ಲಿ 8 ಪ್ರಕಣಗಳು ದಾಖಲಾಗಿದ್ದು, ಭಾಷಾ ನಗರ ಮತ್ತು ಜಾಲಿನಗರವನ್ನು ಸಂಪೂರ್ಣವಾಗಿ ಸೀಲ್ ಡೌನ್ ಮಾಡಲಾಗಿದೆ.  ಇಲ್ಲಿನ ಜನರಲ್ಲಿ ಇನ್ನಷ್ಟು ಆತಂಕ ಹೆಚ್ಚಾಗಿದ್ದು,  ಸಮೂಹ ಹಂತಕ್ಕೆ ಬಂದಿದೆಯಾ ಎನ್ನುವ ಅನುಮಾನ ಕಾಡುವಂತಾಗಿದೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top