Connect with us

Dvgsuddi Kannada | online news portal | Kannada news online

ಎಲ್ ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ: ಸಬ್ಸಿಡಿ ರಹಿತ ಸಿಲಿಂಡರ್ ದರ 162 ರೂಪಾಯಿ ಇಳಿಕೆ

ಪ್ರಮುಖ ಸುದ್ದಿ

ಎಲ್ ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿ: ಸಬ್ಸಿಡಿ ರಹಿತ ಸಿಲಿಂಡರ್ ದರ 162 ರೂಪಾಯಿ ಇಳಿಕೆ

ನವದೆಹಲಿ:  ಲಾಕ್‍ಡೌನ್ ನಡುವೆ ಎಲ್‍ಪಿಜಿ ಗ್ರಾಹಕರಿಗೆ ಸಿಹಿ ಸುದ್ದಿಯನ್ನು ಕೇಂದ್ರ ಸರ್ಕಾರ ನೀಡಿದೆ. ಮೇ 1ರಿಂದ ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್‌ನ ಬೆಲೆಯನ್ನು 162 ರೂ.ಗೆ ಇಳಿಕೆ ಮಾಡಿದೆ. ಹೊಸ ದರವು ಇಂದಿನಿಂದಲ್ಲೇ ಜಾರಿಗೆ ಬಂದಿದೆ.

ದೆಹಲಿಯಲ್ಲಿ ಸಬ್ಸಿಡಿ ರಹಿತ ಸಿಲಿಂಡರ್ ಬೆಲೆಯಲ್ಲಿ 162.50 ರೂ. ಕಡಿಮೆ ಮಾಡಲಾಗಿದೆ. ಹೀಗಾಗಿ ಇಂದಿನಿಂದ ಒಂದು ಸಿಲಿಂಡರ್‍ಗೆ 581.50 ರೂ. ನೀಡಿ ಗ್ರಾಹಕರು ಖರೀಸಬಹುದಾಗಿದೆ. ಹೊಸ ದರದ ಪ್ರಕಾರ ಸಬ್ಸಿಡಿ ರಹಿತ ಸಿಲಿಂಡರ್‌ಗೆ ಮುಂಬೈನಲ್ಲಿ 579,  ಕೋಲ್ಕತ್ತಾದಲ್ಲಿ 584.50 ಮತ್ತು ಚೆನ್ನೈನಲ್ಲಿ 569.50 ರೂ. ಪಾವತಿಸಬೇಕಾಗುತ್ತದೆ.

ಬೆಂಗಳೂರಿನಲ್ಲಿ ಇಂದಿನಿಂದ ಸಬ್ಸಿಡಿ ರಹಿತ ಸಿಲಿಂಡರ್ ಗ್ರಾಹಕರು 585 ರೂ. ಪಾವತಿಸಬೇಕಾಗುತ್ತದೆ. ಕೇಂದ್ರ ಸರ್ಕಾರವು ಒಂದು ವರ್ಷದಲ್ಲಿ  ಸಬ್ಸಿಡಿ ದರದಲ್ಲಿ 12 ಸಿಲಿಂಡರ್‌ಗಳನ್ನು ನೀಡುತ್ತದೆ. ಅದಕ್ಕಿಂತ ಹೆಚ್ಚಿನ ಬೇಡಿಕೆ ಹೊಂದಿದ್ದರೆ ಮಾರುಕಟ್ಟೆಯ ಬೆಲೆಯನ್ನು ಪಾವತಿಸಬೇಕಾಗುತ್ತದೆ.

ಈ ವರ್ಷದಲ್ಲಿ ಸತತ ನಾಲ್ಕನೇ ತಿಂಗಳಿಂದ ಸಬ್ಸಿಡಿ ರಹಿತ ಅಡುಗೆ ಅನಿಲ ಬೆಲೆಯನ್ನು ಕಡಿಮೆ ಮಾಡಲಾಗಿದೆ. ವಾಣಿಜ್ಯ ಬಳಕೆಯ ಅನಿಲದ ಬೆಲೆಯಲ್ಲಿಯೂ  ಕಡಿತಗಳಾಗಿವೆ. ರಾಜಧಾನಿ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಅನಿಲ ಸಿಲಿಂಡರ್ ಬೆಲೆಯಲ್ಲಿ 256  ರೂಪಾಯಿಗೆ ಇಳಿಕೆಯಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top