Connect with us

Dvg Suddi-Kannada News

ಬ್ರೇಕಿಂಗ್: ದಾವಣಗೆರೆಯಲ್ಲಿ ಮತ್ತೆ 12 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಪ್ರಮುಖ ಸುದ್ದಿ

ಬ್ರೇಕಿಂಗ್: ದಾವಣಗೆರೆಯಲ್ಲಿ ಮತ್ತೆ 12 ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆ

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇಂದು ಮತ್ತೆ 12 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಬೆಣ್ಣೆ ನಗರಿ ಜನರು ಕೊರೊನಾ ಮಹಾಮಾರಿ ಅಲೆಗೆ ತತ್ತರಿಸಿ ಹೋಗಿದ್ದಾರೆ.

ದಾವಣಗೆರೆಯಲ್ಲಿ ಈವರೆಗೆ 44 ಪ್ರಕರಣಗಳು ಪತ್ತೆಯಾದಂತಾಗಿದ್ದು, 3 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಇನ್ನಷ್ಟು ಆತಂಕ ಹೆಚ್ಚಾಗುವಂತೆ ಮಾಡಿದೆ. ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆ ಭಾಷಾನಗರ ನರ್ಸ್, ಜಾಲಿನಗರ ವೃದ್ಧ ನಿಂದ ಪತ್ತೆಯಾದ ಸೋಂಕು, ಇಡೀ ಜಿಲ್ಲೆಗೆ ವ್ಯಾಪಿಸುವ ಲಕ್ಷಣ ಕಾಣತ್ತಿದೆ.

ಭಾಷಾನಗರ ನರ್ಸ್ , ಜಾಲಿನಗರದ ವೃದ್ಧನ ಸುತ್ತಮುತ್ತಲಿನ ನಿವಾಸಿಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಜಿಲ್ಲೆಯಲ್ಲಿ ಈ ಸ್ಫೋಟಕ ಮಾಹಿತಿಗಳು ಹೊರ ಹೊಮ್ಮುತ್ತಿವೆ. ಏ.29 ರಂದು ಈ ಎರಡು ಪ್ರಕರಣ ಪತ್ತೆಯ ನಂತರ ಜಿಲ್ಲೆಯಲ್ಲಿ ಒಮ್ಮೆ 6, ಇನ್ನೊಮ್ಮೆ 21, ಇದೀಗ ಇಂದು ಮತ್ತೆ 12 ಪ್ರಕರಣ ಪತ್ತೆಯಾಗಿವೆ.

ಜಿಲ್ಲೆಯಲ್ಲಿ ಇಂದು ಹೊಸದಾಗಿ 12 ಪ್ರಕರಣ ಪತ್ತೆಯಾಗುವ ಮೂಲಕ ದಾವಣಗೆರೆ ನಗರದಲ್ಲಿ ಸೋಂಕಿತರ ಸಂಖ್ಯೆ 44 ಕ್ಕೆ ಏರಿಕೆಯಾಗಿದೆ. ಇದರಲ್ಲಿ 3 ಸೋಂಕಿತರ ಸಾವನ್ನಪ್ಪಿದ್ದಾರೆ. ಇನ್ನುಳಿದಂತೆ 2 ಗುಣಮುಖರಾಗಿದ್ದಾರೆ. ಈ 5 ಜನರನ್ನು ಹೊರತುಪಡಿಸಿದರೆ, ಜಿಲ್ಲೆಯಲ್ಲಿ ಇನ್ನು 39 ಪ್ರಕರಣಗಳು ಆಕ್ಟಿವ್ ಆಗಿವೆ.

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top