ಡಿವಿಜಿ ಸುದ್ದಿ, ಚನ್ನಗಿರಿ : ಕೋಗಲೂರು ಗ್ರಾಮದ ನಿವೃತ್ತ ಆರೋಗ್ಯ ಸಹಾಯಕಿ ಸುಬ್ಬಮ್ಮ ಕೊರಾನಾ ವೈರಸ್ ಪರಿಹಾರ ನಿಧಿಗೆ ಒಂದು ತಿಂಗಳ ಸಂಬಳ ನೀಡಿದ್ದಾರೆ.
ಸುಬ್ಬಮ್ಮ ಕಳೆದ 30 ವರ್ಷದಿಂದ ಆರೋಗ್ಯ ಸಹಾಯಕಿಯಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಕೊರೊನಾ ವೈರಸ್ ಪೀಡಿತರಿಗಾಗಿ ಮುಖ್ಯಮಂತ್ರಿ ಪರಿಹಾರ ನಿಧಿಗೆ ಪ್ರಭಾರ ಉಪ ತಹಸೀಲ್ದಾರ್ ಎಂಕೆ ವಿಶ್ವನಾಥ್ ಅವರ ಮೂಲಕ ವೈಯುಕ್ತಿಕವಾಗಿ ಒಂದು ತಿಂಗಳ ನಿವೃತ್ತಿ ವೇತನ 23.535 ರೂ ಚೆಕ್ಕನ್ನು ನೀಡಿ ಮಾನವಿಯತೆ ಮೆರೆದಿದ್ದಾರೆ.
ಗ್ರಾಮದ ಮುಖಂಡರಾದ ಬಿಜಿ ಸ್ವಾಮಿ , ಗ್ರಾಮಲೆಕ್ಕಾಧಿಕಾರಿ ಕೆ.ಹೆಚ್. ತಿಲಕ್ ಕುಮಾರ್, ಗ್ರಾಪಂ ಪಿಡಿಒ ಬಿ ಶೇರ್ ಆಲಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.



