ಡಿವಿಜಿ ಸುದ್ದಿ, ದಾವಣಗೆರೆ: ಸತತವಾಗಿ ಕೊರೊನಾ ಪಾಸಿಟಿವ್ ಮತ್ತು ಮೃತರ ಸಂಖ್ಯೆ ಏರಿಕೆಯಾಗುತ್ತಿದ್ದ ಜಿಲ್ಲೆಯಲ್ಲಿ ಇಂದು ಮೃತರ ಸಂಖ್ಯೆ ತಗ್ಗಿದೆ. ಇಂದು 165 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿದ್ದು, 212 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 5453ಕ್ಕೆ ಏರಿಕೆಯಾಗಿದ್ದು, 3712 ಮಂದಿ ಕೊರೊನಾದಿಂದ ಗುಣಮುಖರಾಗಿದ್ದಾರೆ.ಸಾವಿನ ಸಂಖ್ಯೆ ಏರಿಕೆಯಿಂದ ಆತಂಕ ಮೂಡಿಸಿದ್ದ ಜಿಲ್ಲೆಯಲ್ಲಿ ಇಂದು ಯಾವುದೇ ಸಾವಿನ ಸಂಖ್ಯೆ ಸಂಭವಿಸಿಲ್ಲ. ಜಿಲ್ಲೆಯಲ್ಲಿ ಇದುವರೆಗೆ 129 ಮಂದಿ ಮೃತಪಟ್ಟಿದ್ದಾರೆ.
ದಾವಣಗೆರೆಯಲ್ಲಿ ಅಧಿಕ 77, ಹರಿಹರ 27, ಜಗಳೂರು 06, ಚನ್ನಗಿರಿ 18, ಹೊನ್ನಾಳಿ 30 ಹಾಗೂ ಇತರ ಜಿಲ್ಲೆಯಿಂದ ಬಂದ 07 ಮಂದಿಯಲ್ಲು ಕೊರೊನಾ ಪಾಸಿಟಿವ್ ಪತ್ತೆಯಾಗಿದೆ.