Connect with us

Dvgsuddi Kannada | online news portal | Kannada news online

ದಾವಣಗೆರೆ ಭಾಷಾನಗರದ ನರ್ಸ್ ನಿಂದಲೇ 18 ಜನರಿಗೆ ಸೋಂಕು

ಪ್ರಮುಖ ಸುದ್ದಿ

ದಾವಣಗೆರೆ ಭಾಷಾನಗರದ ನರ್ಸ್ ನಿಂದಲೇ 18 ಜನರಿಗೆ ಸೋಂಕು

ಡಿವಿಜಿ ಸುದ್ದಿ, ದಾವಣಗೆರೆ: ದಾವಣಗೆರೆಯ ಭಾಷಾನಗರ ನಿವಾಸಿಯಾದ ನರ್ಸ್ ಗೆ ಬಂದಿದ್ದ  ಕೊರೊನಾ ಪಾಸಿಟಿವ್ ,  ಅವರೊಬ್ಬರಿಂದಲೇ 18 ಜನರಿಗೆ ಸೋಂಕು ತಗಲಿರುವುದು ಪತ್ತೆಯಾಗಿದೆ.

ನಿನ್ನೆ ಪತ್ತೆಯಾದ 21 ಪಾಸಿಟಿವ್ ಕೇಸ್ ಗಳಲ್ಲಿ ಸರ್ಸ್ ನಿಂದಲೇ 18 ಸೋಂಕು ಪತ್ತೆಯಾಗಿದೆ. ಇನ್ನುಳಿದಂತೆ 2 ಪಾಸಿಟಿವ್ ಕೇಸ್ ಗಳು ಜಾಲಿನಗರ ನಿವಾಸಿಯಿಂದ ಪತ್ತೆಯಾಗಿದ್ದು, ಇನ್ನೊಂದು ಕೇಸ್ ಬೇತೂರು ರಸ್ತೆಯ ನಿವಾಸಿ, ಹೊರ ಜಿಲ್ಲೆಗೆ ಈರುಳ್ಳಿ ಮಾರಾಟಕ್ಕೆ ಹೋಗಿರುವ ಬಗ್ಗೆ ಮಾಹಿತಿ ಲಭಯವಾಗಿದೆ. ಈ ಮೂರು ಪ್ರತ್ಯೇಕ ಪ್ರಕರಣಕ್ಕೆ ಸೋಂಕು ಹೇಗೆ ತಗುಲಿದೆ ಎಂಬುದರ ಬಗ್ಗೆ ಮೂಲ ಪತ್ತೆಯಾಗಿಲ್ಲ.

ಈ ಮೊದಲು ಜಿಲ್ಲೆಯ ನಿವಾಸಿಗಳಗಿದ್ದ ಇಬ್ಬರು ಫ್ರಾನ್ಸ್ ಹಾಗೂ ಅಮೆರಿಕಾದಿಂದ ಬಂದರಿಗೆ ಮಾತ್ರ ಕೊರೊನಾ ರೋಗ ಪತ್ತೆಯಾಗಿತ್ತು. ಈಗ ಪತ್ತೆಯಾದ 29 ಪ್ರಕರಣಗಳಲ್ಲಿ ಯಾರು ಕೂಡ ವಿದೇಶಿದಿಂದ ಬಂದ ಟ್ರಾವಲ್ ಹಿಸ್ಟರಿ ಹೊಂದಿಲ್ಲ, ಹೀಗಾಗಿ ಜಿಲ್ಲೆಯಲ್ಲಿ ಸೋಂಕು ಸಮೂಹ ಹಂತಕ್ಕೆ ತಲುಪಿದೆಯಾ ಎನ್ನುವ ಅನುಮಾನ ಮೂಡಿಸುವಂತಾಗಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top