Connect with us

Dvgsuddi Kannada | online news portal | Kannada news online

ಬ್ರೇಕಿಂಗ್: ದಾವಣಗೆರೆಯಲ್ಲಿ ಮತ್ತೆ 6 ಕೊರೊನಾ ಪಾಸಿಟಿವ್ ಪತ್ತೆ

ಪ್ರಮುಖ ಸುದ್ದಿ

ಬ್ರೇಕಿಂಗ್: ದಾವಣಗೆರೆಯಲ್ಲಿ ಮತ್ತೆ 6 ಕೊರೊನಾ ಪಾಸಿಟಿವ್ ಪತ್ತೆ

ಡಿವಿಜಿ ಸುದ್ದಿ, ದಾವಣಗೆರೆ: ಡೆಡ್ಲಿ ಕೊರೊನಾಗೆ ಮಧ್ಯ ಕರ್ನಾಟಕ ದಾವಣಗೆರೆ ಮತ್ತೆ ತತ್ತರಿಸಿದೆ. ಇಂದು ಮತ್ತೆ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.

ಒಂದು ಹಂತದಲ್ಲಿ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆ ಕಳೆದ 10 ದಿನದಿಂದ ಸತತವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಂದು ಮತ್ತೆ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಬರೊಬ್ಬರಿ 67  ಪಾಸಿಟಿವ್ ಕೇಸ್ ಬಂದಂತಾಗಿದೆ.

ಬಾಷಾನಗರ ಮತ್ತು ಜಾಲಿನಗರದ ನರ್ಸ್ ಹಾಗೂ ವೃದ್ಧನಿಂದ ದಾವಣಗೆರೆಯಲ್ಲಿ ಕೊರೊನಾ ಪಾಸಿಟಿವ್  ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ.  ಇಂದು ನರ್ಸ್ ನಿಂದ 5 ಮಂದಿಗೆ ಕೊರೊನಾ ಸೋಂಕು,  ಜಾಲಿನಗರ ವೃದ್ಧನಿಂದ 1 ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 67  ಪಾಸಿಟಿವ್ ಪ್ರಕರಣಗಳಲ್ಲಿ 4 ಮಂದಿ ಮೃತಪಟ್ಟಿದ್ದು, 2 ಗುಣಮುಖರಾಗಿದ್ದಾರೆ. 61 ಕೇಸ್ ಗಳು ಆಕ್ಟಿವ್ ಆಗಿವೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top