ಡಿವಿಜಿ ಸುದ್ದಿ, ದಾವಣಗೆರೆ: ಡೆಡ್ಲಿ ಕೊರೊನಾಗೆ ಮಧ್ಯ ಕರ್ನಾಟಕ ದಾವಣಗೆರೆ ಮತ್ತೆ ತತ್ತರಿಸಿದೆ. ಇಂದು ಮತ್ತೆ 6 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 67ಕ್ಕೆ ಏರಿಕೆಯಾಗಿದೆ.
ಒಂದು ಹಂತದಲ್ಲಿ ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆ ಕಳೆದ 10 ದಿನದಿಂದ ಸತತವಾಗಿ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಸಾಗಿದೆ. ಇಂದು ಮತ್ತೆ 6 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಬರೊಬ್ಬರಿ 67 ಪಾಸಿಟಿವ್ ಕೇಸ್ ಬಂದಂತಾಗಿದೆ.
ಬಾಷಾನಗರ ಮತ್ತು ಜಾಲಿನಗರದ ನರ್ಸ್ ಹಾಗೂ ವೃದ್ಧನಿಂದ ದಾವಣಗೆರೆಯಲ್ಲಿ ಕೊರೊನಾ ಪಾಸಿಟಿವ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲಿದೆ. ಇಂದು ನರ್ಸ್ ನಿಂದ 5 ಮಂದಿಗೆ ಕೊರೊನಾ ಸೋಂಕು, ಜಾಲಿನಗರ ವೃದ್ಧನಿಂದ 1 ಪಾಸಿಟಿವ್ ಬಂದಿದೆ. ಜಿಲ್ಲೆಯಲ್ಲಿ ಒಟ್ಟು 67 ಪಾಸಿಟಿವ್ ಪ್ರಕರಣಗಳಲ್ಲಿ 4 ಮಂದಿ ಮೃತಪಟ್ಟಿದ್ದು, 2 ಗುಣಮುಖರಾಗಿದ್ದಾರೆ. 61 ಕೇಸ್ ಗಳು ಆಕ್ಟಿವ್ ಆಗಿವೆ.



