Connect with us

Dvgsuddi Kannada | online news portal | Kannada news online

ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ: ‌ಮುಖ್ಯ ಕಾರ್ಯದರ್ಶಿ ವಿಜಯ್‍ ಭಾಸ್ಕರ್

ಪ್ರಮುಖ ಸುದ್ದಿ

ಅಗತ್ಯ ವಸ್ತುಗಳ ಸಾಗಾಣಿಕೆಗೆ ಯಾವುದೇ ನಿರ್ಬಂಧವಿಲ್ಲ: ‌ಮುಖ್ಯ ಕಾರ್ಯದರ್ಶಿ ವಿಜಯ್‍ ಭಾಸ್ಕರ್

ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿರುವ ವಲಸಿಗರಿಗೆ ಅವರು ಇರುವಲ್ಲಿಯೆ ಊಟ, ವಸತಿ ವ್ಯವಸ್ಥೆ ಮಾಡಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ, ಅವರು ಪಕ್ಕದ ಜಿಲ್ಲೆಗಳಿಗೆ ತೆರಳದಂತೆ ನೋಡಿಕೊಳ್ಳಬೇಕು. ಹಾಗೆಯೇ ಅಗತ್ಯ ವಸ್ತು ಸಾಗಾಣಿಕೆಗೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು ‌ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇಂದು ನಡೆದ ವಿಡಿಯೋ ಕಾನ್ಪರೆನ್ನಸ್ ನಲ್ಲಿ ಮಾತನಾಡಿದ ಅವರು, ವಲಸಿಗರು ತಮ್ಮ ಕೆಲಸದ ಸ್ಥಳ ಮತ್ತು ವಾಸ ಸ್ಥಳದಿಂದ ಅವರು ಬೇರೆ ಊರುಗಳಿಗೆ ಹೈವೆ ಮೂಲಕ ತೆರಳುತ್ತಿರುವುದು ಕಂಡು ಬಂದಿದ್ದು, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಹಾಗೂ ನಗರಪಾಲಿಕೆ ಕ್ರಮವಹಿಸಿ ವಲಸಿಗರು ಬೇರೆ ಜಿಲ್ಲೆಗಳಿಗೆ ತೆರಳದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಶಾಲೆ, ಕಾಲೇಜು, ಕಲ್ಯಾಣ ಮಂಟಪ, ಓಪನ್ ಫೀಲ್ಡ್‍ಗಳಲ್ಲಿ ಅವರಿಗೆ ತಾತ್ಕಾಲಿಕ ವಸತಿ ಕಲ್ಪಿಸಿಕೊಟ್ಟು ಇಂದಿರಾ ಕ್ಯಾಂಟೀನ್, ಸ್ಕೂಲ್‍ಗಳಲ್ಲಿ ಬಿಸಿಯೂಟದ ಕೇಂದ್ರಗಳನ್ನು ಊಟದ ವ್ಯವಸ್ಥೆ ಮಾಡಬೇಕು. ವಲಸಿಗರ ಬಳಿ ರೇಷನ್ ಕಾರ್ಡ್ ಇದ್ದರೆ ಅವರಿಗೆ ರೇಷನ್ ವ್ಯವಸ್ಥೆ ಕಲ್ಪಿಸಬೇಕು. ಅವರ ಬಳಿ ರೇಷನ್ ಕಾರ್ಡ್ ಇಲ್ಲದಿದ್ದಲ್ಲಿ ಸರ್ಕಾರದ ಅನುಮತಿ ಪಡೆದುಕೊಂಡು ರೇಷನ್ ಪ್ಯಾಕ್ ನೀಡಬಹುದು. ರೇಷನ್ ಅಂಗಡಿಗಳಲ್ಲಿ ಜನರಿಗೆ ಯಾವುದೇ ಸಮಸ್ಯೆಯಾಗದಂತೆ ಪಡಿತರ ವಿತರಣೆ ಮಾಡಬೇಕು ಎಂದರು.

ಹೈವೆಗಳಲ್ಲಿ ಅಗತ್ಯ ವಸ್ತು ವಾಹನಗಳಿಗೆ ನಿರ್ಬಂಧವಿಲ್ಲ

ಹೈವೆಯಲ್ಲಿ ಸಂಚರಿಸುವ ಅಗತ್ಯ ವಸ್ತು ವಾಹನಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮವಹಿಸಬೇಕು. ಚೆಕ್‍ಪೋಸ್ಟ್‍ಗಳ ಮುಖಾಂತರ ಸಂಚರಿಸಿ ಎಲ್ಲಾ ವಸ್ತುಗಳ ಪೂರೈಕೆ ಮಾಡುತ್ತಿರುವ ಹಾಗೂ ಮಾಡದಿರುವ ವಾಹನಗಳಿಗೆ ಹೆಚ್ಚು ನಿರ್ಬಂಧ ಹೇರದೆ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಗೂಡ್ಸ್ ಗಾಡಿಗಳನ್ನು ಸಹ ಚೇಕ್‍ಪೋಸ್ಟ್ ಗಳಲ್ಲಿ ತಡೆಯಬಾರದು ಎಂದು ತಿಳಿಸಿದರು.

ಎಪಿಎಂಸಿ ಗಳನ್ನು ತೆರೆಯಲು ಕೇಂದ್ರ ಸರ್ಕಾರದಿಂದಲೇ ಅವಕಾಶವಿದ್ದು, ಎಲ್ಲಾ ಎಪಿಎಂಸಿ ಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಎಂದಿನಂತೆ ಕಾರ್ಯನಿರ್ವಹಿಸಬೇಕು. ಆಯಾ ಜಿಲ್ಲೆಯಲ್ಲಿರುವ ರೈಸ್ ಮಿಲ್‍ಗಳು, ಬೇಳೆ ಮಿಲ್‍ಗಳನ್ನು ತೆರೆದು ಆಹಾರ ಸಗಟಿನಲ್ಲಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದರು.

ಸಗಟು ಸಾಗಾಣಿಕೆ ಸಾರಿಗೆಯವರು ತೊಂದರೆಯಾಗುತ್ತದೆಂದು ಭಯದಿಂದ ನಿಲ್ಲಿಸಿರುವುದರಿಂದ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿರುವ ಸಾಗಾಣಿಕೆ ಸಾರಿಗೆಯವರಿಗೆ ಜಿಲ್ಲಾಡಳಿತದ ವತಿಯಿಂದ ಪಾಸ್ ನೀಡಿ ಕಾರ್ಯನಿರ್ವಹಿಸಲು ಸೂಚಿಸಬೇಕೆಂದರು. ರೈತರ ಹಿತದೃಷ್ಠಿಯಿಂದ ಫರ್ಟಿಲೈಸರ್ ಅಂಗಡಿಗಳು ಮತ್ತು ಮೇವು ಒದಗಿಸುವ ಅಂಗಡಿಗಳನ್ನು ತೆರೆಸುವಂತೆ ಸೂಚಿಸಿದರು.

ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂರ್ಪಕ ಹೊಂದಿರುವವರ ಕೈಗಳ ಮೇಲೆ ಸೀಲ್ ಹಾಕಿ ಅವರ ಮನೆಯ ಗೋಡೆಗಳ ಮೇಲೆ ಸ್ಟಿಕರ್ ಅಂಟಿಸಬೇಕು. ಪ್ರಾಥಮಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಅವಲೋಕನದಲ್ಲಿರಿಸಬೇಕು. ದ್ವಿತೀಯ ಸಂರ್ಪಕದಲ್ಲಿದವರನ್ನು ಮನೆಗಳಲ್ಲೇ ಅವಲೋಕನದಲ್ಲಿರಿಸಿ ಅವಧಿ ಮುಗಿಯುವವರೆಗೆ ಪಿಡಿಒಗಳಿಗೆ ಅವರ ಮೇಲೆ ನಿಗಾವಹಿಸಲು ಸೂಚಿಸಬೇಕು ಎಂದರು.

ವೀಡಿಯೋ ಕಾನ್ಪರೆನ್ಸ್ ನಂತರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅಧಿಕಾರಿಗಳೊಂದಿಗೆ ಮಾತನಾಡಿ ಜನರಿಗೆ ಸಮಸ್ಯೆಯಾಗುತ್ತಿರುವುದರಿಂದ ಜಿಲ್ಲೆಯಲ್ಲಿರುವ , ರೀಟೆಲ್ ಅಂಗಡಿಗಳು, ಫುಡ್ ಪ್ರೊಸೆಸಿಂಗ್ ಇಂಡಸ್ಟ್ರಿಗಳು ಹಾಗೂ ಪ್ಯಾಕೆಜಿಂಗ್ ಇಂಡಸ್ಟ್ರಿಗಳು ಹಾಗೂ ಅಗತ್ಯ ವಸ್ತುಗಳನ್ನು ಪೊರೈಸುವ ಕಾರ್ಖಾನೆಗಳನ್ನು ಇಂದಿನಿಂದಲೇ ತೆರೆದು ಕಾರ್ಯನಿರ್ವಹಿಸುವಂತೆ ಸೂಚಿಸಿದರು.

ಸಭೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಪಂ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಪದ್ಮಾ ಬಸವಂತಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ ವೀರಮಲ್ಲಪ್ಪ, ಎಸಿ ಮಮತಾ ಹೊಸಗೌಡರ್, ವಿಶೇಷ ಭೂಸ್ವಾಧೀನಾಧಿಕಾರಿ ರೇಷ್ಮಾ ಹಾನಗಲ್, ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ನಗರಾಭಿವೃದ್ದಿ ಕೋಶದ ಯೋಜನಾ ನಿರ್ದೇಶಕಿ ನಜ್ಮಾ, ಡಿಹೆಚ್‍ಓ ಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಹಾಜರಿದ್ದರು

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top