ಡಿವಿಜಿ ಸುದ್ದಿ, ಚನ್ನಗಿರಿ : ದೇಶದಾದ್ಯಂತ ಲಾಕ್ ಡೌನ್ ಹಿನ್ನೆಲೆ ತಾಲ್ಲೂಕಿನ ಎಲ್ಲಾ ಬಂಕ್ ಗಳು ಮುಚ್ಚಿದ್ದು, ನೀತಿಗೆರೆ ಗ್ರಾಮದ ರುದ್ರೇಶ್ ಎಂಬ ವ್ಯಕ್ತಿ ಅಕ್ರಮವಾಗಿ ಕ್ಯಾನ್ ನಲ್ಲಿ ಪೆಟ್ರೋಲ್ , ಡಿಸೇಲ್ ತುಂಬಿಸಿಕೊಂಡು ಹೋಗುತ್ತಿದ್ದಾಗ ಆಕಸ್ಮಿಕ ಬೆಂಕಿ ಕಾಣಿಸಿಕೊಂಡ ಪರಿಣಾಮ ಒಮ್ನಿ ಕಾರ್ ಸುಟ್ಟು ಭಸ್ಮವಾಗಿದೆ.
ಇಂದು ಬೆಳೆಗ್ಗೆ ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮದಲ್ಲಿನ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ಹಾಗೂ ಡಿಸೇಲ್ ಅನ್ನು ಕ್ಯಾನ್ ನಲ್ಲಿ ತುಂಬಿಸಿಕೊಂಡು ಒಮ್ನಿ ವ್ಯಾನ್ ನಲ್ಲಿ ಹೋಗುತ್ತಿದ್ದಾಗ ಚನ್ನಗಿರಿ ತಾಲೂಕಿನ ಕೋರಟಿಕೆರೆ ಗ್ರಾಮದ ಹತ್ತಿರ ಬರುವಾಗ ಆಕಸ್ಮಿಕಾಗಿ ಪೆಟ್ರೋಲ್ ಕ್ಯಾನ್ ವ್ಯಾನ್ನಲ್ಲಿ ಬಿದ್ದಿದ್ದರಿಂದ ಬೆಂಕಿ ಹೊತ್ತಿಕೊಂಡು ವ್ಯಾನ್ ಪೂರ್ಣವಾಗಿ ಸುಟ್ಟು ಹೋಗಿದೆ.
ವ್ಯಾನ್ ನಲ್ಲಿ ಇಬ್ಬರು ಪ್ರಯಾಣಿಕರಿದ್ದರು. ಒಬ್ಬರಿಗೆ ಸಣ್ಣ ಪ್ರಮಾಣದ ಸುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣ ಹಾನಿಯಾಗಿಲ್ಲ.