ಡಿವಿಜಿ ಸುದ್ದಿ, ದಾವಣಗೆರೆ: ಭದ್ರಾ ಡ್ಯಾಂ ಭರ್ತಿಗೆ ಕ್ಷಣ ಗಣನೆ ಆರಂಭವಾಗಿದ್ದು, ಯಾವುದೇ ಕ್ಷಣದಲ್ಲಿ ಡ್ಯಾಂ ನಿಂದ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಕರ್ನಾಟಕ ನೀರಾವರಿ ನಿಗಮ ಎಚ್ಚರಿಕೆ ವಹಿಸುವಂತೆ ಮುನ್ಸೂಚನೆ ನೀಡಿದೆ.
ಭದ್ರಾ ಜಲಾಯನ ಪ್ರದೇಶದಲ್ಲಿ ಸತತ ಮಳೆಯಿಂದ ಜಲಾಶಯ ತುಂಬುವ ಹಂತಕ್ಕೆ ಬಂದಿದೆ. ಅಣೆಕಟ್ಟೆ ಸುರಕ್ಷತೆ ದೃಷ್ಠಿಯಿಂದ ಯಾವುದೇ ಕ್ಷಣದಲ್ಲಿ ಡ್ಯಾಂನ ಎಡ, ಬಲ ದಂಡೆಯಿಂದ ನದಿಗೆ ನೀರು ಹರಿಸುವ ಸಾಧ್ಯತೆ ಇದೆ. ಗರಿಷ್ಠ 186 ಅಡಿ ನೀರು ಸಂಗ್ರಹ ಸಾಮಾರ್ಥ್ಯ ಹೊಂದಿರುವ ಡ್ಯಾಂ, ಸದ್ಯ ನೀರಿನ ಮಟ್ಟ 184.5 ರಷ್ಟಿದೆ.

ಡ್ಯಾಂನಿಂದ ನೀರು ಯಾವುದೇ ಕ್ಷಣದಲ್ಲಿ ಹರಿಸುವುದರಿಂದ ಭದ್ರಾ ಕಾಲುವೆ, ನದಿ ಪಾತ್ರದಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನಕರುಗಳನ್ನು ತೊಳೆಯುವುದು ನಿಷೇಧಿಸಲಾಗಿದೆ. ನದಿ ಪಾತ್ರ ತಗ್ಗು ಪ್ರದೇಶದ ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.
- ಇಂದಿನ ನೀರಿನ ಮಟ್ಟ: 184’5 1/2″
- ಪೂರ್ಣ ಮಟ್ಟ:186′ ಅಡಿ
- ಇಂದಿನ ಸಾಮರ್ಥ್ಯ: 69.605 ಟಿಎಂಸಿ
- ಒಟ್ಟು ಸಾಮರ್ಥ್ಯ:71.535 ಟಿಎಂಸಿ
- ಒಳಹರಿವು:2864 ಕ್ಯೂಸೆಕ್ಸ್
- ಒಟ್ಟು ಹೊರಹರಿವು:1070 ಕ್ಯೂಸೆಕ್ಸ್
- ಕಳೆದ ವರ್ಷದ ಮಟ್ಟ:185’5″ಅಡಿ
- ಸಾಮರ್ಥ್ಯ: 70.802 ಟಿಎಂ ಸಿ



