ಡಿವಿಜಿ ಸುದ್ದಿ, ದಾವಣಗೆರೆ: ಭೂಗತ ಕೇಬಲ್ ಅಳವಡಿಕೆಯ ಕಾರ್ಯವು ಅಂತಿಮ ಹಂತಕ್ಕೆ ಬಂದಿದ್ದು, ಜ.28 ರಂದು ಎಮ್.ಸಿ.ಸಿ. ಬಿ ಫೀಡರ್ ವ್ಯಾಪ್ತಿಯ ವಿದ್ಯುತ್ ಮಾರ್ಗವನ್ನು ಸಂಪೂರ್ಣಗೊಳ್ಳಲಿದೆ. ಇದರ ವ್ಯಾಪ್ತಿಯಲ್ಲಿ ಯಾವುದೇ ತರಹದ ನೆಲ ಅಗೆಯುವ ಮುನ್ನ ಬೆಸ್ಕಾಂ ಸಂಪರ್ಕಿಸಿ.
ಸಿದ್ದವೀರಪ್ಪ ಬಡಾವಣೆ 2ನೇ ಕ್ರಾಸ್ ನಿಂದ ಸುಕ್ಷೇಮ ಆಸ್ಪತ್ರೆ, ಸಿದ್ದವೀರಪ್ಪ ಬಡಾವಣೆ 10ನೇ ಕ್ರಾಸ್ ಭದ್ರಾ ಕಾಲೇಜ್ ನಿಂದ ಶಾಮನೂರು ರಸ್ತೆವರೆಗೆ, ಸಿದ್ದವೀರಪ್ಪ ಬಡಾವಣೆ 2ನೇ ಕ್ರಾಸ್‍ನಿಂದ ಶಾಮನೂರು ಶಾಪೆವರೆಗೆ, ಬಿ.ಐ.ಇ.ಟಿ ಕಾಲೇಜ್ ಮುಖ್ಯ ರಸ್ತೆ, ಎಸ್.ಎಸ್. ಬಡಾವಣೆ ಎ ಬ್ಲಾಕ್ ಸುತ್ತ ಮುತ್ತ, ಭ್ರಷ್ಟಾಚಾರ ನಿಗ್ರಹ ದಳ ಕಚೇರಿ, ಅಂಗವಿಕಲರ ಶಾಲೆ, ಕರ್ನಾಟಕ ಬ್ಯಾಂಕ್, ಲಕ್ಷ್ಮೀ ಫ್ಲೋರ್ ಮಿಲ್ ನಿಂದ ಶಾರದಂಭಾ ದೇವಸ್ಥಾನದವರೆಗೆ, ಎಮ್.ಸಿ.ಸಿ.ಬಿ 13ನೇ ಮುಖ್ಯ ರಸ್ತೆಯಿಂದ ಬಾಪೂಜಿ ಶಾಲೆ, ದವನ್ ಕಾಲೇಜ್ ಮತ್ತು ಕುವೆಂಪು ನಗರ ಸುತ್ತ ಮುತ್ತ ಪ್ರದೇಶಗಳಲ್ಲಿ ಸಾರ್ವಜನಿಕರು ಯಾವುದೇ ನೆಲ ಅಗಿಯುವ ಕಾರ್ಯ ಕೈಗೊಳ್ಳುವ ಮುನ್ನ ಬೆ.ವಿ.ಕಂ. ಅಧಿಕಾರಿ, ಸಿಬ್ಬಂದಿಗಳನ್ನು ಸಂಪರ್ಕಿಸಬೇಕೆಂದು ಬೆಸ್ಕಾಂ ಪ್ರಕಟಣೆ ತಿಳಿಸಿದೆ.



