Connect with us

Dvgsuddi Kannada | online news portal | Kannada news online

ಹಸಿರೆಲೆ ಗೊಬ್ಬರ ಬಳಕೆ ಬಗ್ಗೆ ಗಮನಹರಿಸಿ

ದಾವಣಗೆರೆ

ಹಸಿರೆಲೆ ಗೊಬ್ಬರ ಬಳಕೆ ಬಗ್ಗೆ ಗಮನಹರಿಸಿ

ಡಿವಿಜಿಸುದ್ದಿ.ಕಾಂ, ದಾವಣಗೆರೆ: ಹಸಿರೆಲೆ ಗೊಬ್ಬರದ ಬಳಕೆಯಿಂದ ಭೂಮಿ ಫಲವತ್ತೆ ಹೆಚ್ಚಾಗುತ್ತಿದ್ದು, ರೈತರು ಹಸಿರೆಲೆ ಗೊಬ್ಬರ ಬಳಕೆ ಬಗ್ಗೆ ಗಮನಹರಿಸಬೇಕು ಎಂದು ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ರಾಜ್ಯ ನೋಡಲ್ ಅಧಿಕಾರಿ ಡಾ.ಜಿ ಆರ್ ಪೆನ್ನೋಬಳ ಸ್ವಾಮಿ ಕರೆ ನೀಡಿದರು.

ನಗರದ ಶಾಮನೂರು ರಸ್ತೆಯಲ್ಲಿರುವ ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿಂದು ಆಯೋಜಿಸಿದ್ದ ಕೃಷಿ ಪರಿಕರ ಮಾರಾಟಗಾರರಿಗೆ ಕೃಷಿ ವಿಸ್ತರಣಾ ಸೇವೆಯ ಡಿಪ್ಲೋಮೋ ಪದವಿ ಪ್ರಮಾಣಪತ್ರಗಳ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಹಸಿರೆಲೆಗೊಬ್ಬರದ ಬಳಕೆಯಿಂದ ರೈತರಿಗೆ 1 ಎಕರೆಗೆ 30 ಟನ್‌ನಷ್ಟು ಸಾವಯವ ದೊರೆಯುತ್ತದೆ ಆದ್ದರಿಂದ ರೈತರು ಈ ಬಗ್ಗೆ ಗಮನಹರಿಸಬೇಕು ಎಂದು ಸಲಹೆ ನೀಡಿದರು.

ದಾವಣಗೆರೆ ಜಿಲ್ಲೆಯಲ್ಲಿ 16  ತಂಡಕ್ಕೆ ತರಬೇತಿ ನೀಡಲಾಗಿದೆ. ಪ್ರತಿ ತಂಡದಲ್ಲೂ 40  ಮಂದಿಯಂತೆ 640  ರೈತರು ತರಬೇತಿ ಪಡೆದಿದ್ದಾರೆ. ಇಲ್ಲಿ ಕಲಿತಿರುವುದನ್ನು ಇತರೆ ರೈತರಿಗೆ ತಿಳಿಸಬೇಕು. ಅತ್ಯುತ್ತಮ ಸೇವೆ ನೀಡುವ ಮೂಲಕ ಯಶಸ್ಸು ಕಂಡುಕೊಳ್ಳಬೇಕೆಂದರು. ದೇಶದಲ್ಲೇ ಅತಿ ಹೆಚ್ಚು ತರಬೇತಿ ನಡೆದಿರುವುದು ದಾವಣಗೆರೆ ಜಿಲ್ಲೆಯಲ್ಲಿ ಮಾತ್ರ ಎಂದರು.

ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಡಾ.ಜಿ.ಈಶ್ವರಪ್ಪ, ಪ್ರೊ. ವಿ. ವೀರಭದ್ರಯ್ಯ,ಕೃಷಿ ಅಧಿಕಾರಿ ಶ್ರೀಧರ್ ಮೂರ್ತಿ, ಸಿರಿಯಣ್ಣ, ರಾಮಪ್ಪ, ಬಿ.ಉಮೇಶ್, ಹುಲ್ಲತ್ತಿ,ಅಜಗಣ್ಣ, ನಾಗರಾಜ್ ಲೋಕಿಕೆರೆ, ರಾಜಶೇಖರ್,ಚಂದ್ರು,ರುದ್ರಪ್ಪ ಮತ್ತಿತರರಿದ್ದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top