ಡಿವಿಜಿಸುದ್ದಿ.ಕಾಂ, ದಾವಣಗೆರೆ: ಕಲಾಕುಂಚ ಸಾಂಸ್ಕೃತಿಕ ಸಂಸ್ಥಯು ಕನ್ನಡ ರಾಜ್ಯೋತ್ಸವ ಹಾಗೂ ಮಕ್ಕಳ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಕವಿಗೋಷ್ಠಿಗೆ ಅ. 20 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಮಕ್ಕಳ ಕವಿಗೋಷ್ಠಿಯ ಅಧ್ಯಕ್ಷತೆ, ಉದ್ಘಾಟನೆ, ಮುಖ್ಯ ಅತಿಥಿಗಳು, ಗೋಷ್ಠಿಯ ನಿರ್ವಹಣೆ, ನಿರೂಪಣೆ, ಸ್ವಾಗತ, ವಂದನಾರ್ಪಣೆ ಎಲ್ಲಾ ಹಂತದಲ್ಲಿ ಮಕ್ಕಳೇ ನಿರ್ವಹಿಸಬೇಕಾದ ಈ ಕಾರ್ಯಕ್ರಮದಲ್ಲಿ ಈ ಎಲ್ಲಾ ಜವಾಬ್ದಾರಿ ಹಂಚಲು, ಮಕ್ಕಳನ್ನು ಆಯ್ಕೆ ಮಾಡಲು ತರಬೇತಿ ನೀಡಲು ಅ.20 ರಂದು ಬೆಳಿಗ್ಗೆ 10.30ಕ್ಕೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಜಿಲ್ಲೆಯ ಪ್ರೌಢಶಾಲಾ ಮಕ್ಕಳಿಗೆ ಮಾತ್ರ ಅವಕಾಶವಿದ್ದು ಕನ್ನಡ ನಾಡು-ನುಡಿ, ಇತಿಹಾಸ ಪರಂಪರೆ, ಸಾಹಿತ್ಯ ಸಂಸ್ಕೃತಿಗಳ ಬಗ್ಗೆ, ಅರಿವು ಕಾಳಜಿ, ಆಸಕ್ತಿ ಇರುವ ಮಕ್ಕಳು ಆಯಾ ಶಾಲೆಯಿಂದ ಅಥವಾ ನೇರವಾಗಿ ಭಾಗವಹಿಸಬಹುದು.
ಹೆಚ್ಚಿನ ಮಾಹಿತಿಗೆ ಸಾಲಿಗ್ರಾಮ ಗಣೇಶ್ ಶೆಣೈ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ನಂ.588, ಕನ್ನಡ ಕೃಪ, ಕುವೆಂಪು ರಸ್ತೆ, ಮೊದಲನೇ ಮಹಡಿ, ಕಸ್ತೂರ್ಬಾ ಬಡಾವಣೆ, ದಾವಣಗೆರೆ – 577002, ಮೊಬೈಲ್ ನಂಬರ್: 9901122728, 9838732777 ಸಂಪರ್ಕಿಸಿ. ಮಕ್ಕಳ ಹೆಸರು ನೊಂದಾಯಿಸಲು ಕೊನೆಯ ದಿನಾಂಕ ಅ.15 ಆಗಿದೆ.



