Connect with us

Dvg Suddi-Kannada News

ಕರ್ನಾಟಕ ಬಂದ್  ಮುಂದುವರಿಕೆ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ:ಶ್ರೀರಾಮುಲು

ಪ್ರಮುಖ ಸುದ್ದಿ

ಕರ್ನಾಟಕ ಬಂದ್  ಮುಂದುವರಿಕೆ ಕುರಿತು ಸಿಎಂ ಜೊತೆ ಚರ್ಚಿಸಿ ತೀರ್ಮಾನ:ಶ್ರೀರಾಮುಲು

ಡಿವಿಜಿ ಸುದ್ದಿ, ಮಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿಯಿಂದ ಒಂದು ವಾರ ಘೋಷಿಸಿದ್ದ  ಕರ್ನಾಟಕ ಬಂದ್, ಮುಂದುವರಿಯುವ ಸಾಧ್ಯತೆ ಇದೆ. ಈ ಬಗ್ಗೆ ಸಿಎಂ ಜೊತೆ ಚರ್ಚಿಸಿ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ಬಿ. ಶ್ರೀರಾಮುಲು ತಿಳಿಸಿದರು.

ಮಂಗಳೂರಿನ ವೆನ್ಲಾಕ್ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ರಾಜ್ಯದಲ್ಲಿ ಇದುವರೆಗೆ 10  ಕೋವಿಡ್ -19 ಪ್ರಕರಣ ದೃಢಪಟ್ಟಿದ್ದು, ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಸೋಂಕಿನ ಭೀತಿ ಇರುವುದರಿಂದ  ಶಾಲಾ, ಕಾಲೇಜುಗಳು, ಮಾಲ್ ಗಳಿಗೆ ಘೋಷಿಸಿರುವ ರಜೆ ವಿಸ್ತರಣೆ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಸೋಂಕು ಹರಡದಂತೆ ತಡೆಯಲು ಜನರು ಮನೆಯಲ್ಲೇ ಉಳಿಯುವುದು ಅಗತ್ಯ. ಈ ಕಾರಣದಿಂದ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಮಾಲ್ ಗಳನ್ನು ಬಂದ್ ಮಾಡಲಾಗಿದೆ. ಅಗತ್ಯ ಕಂಡುಬಂದಲ್ಲಿ ರಜೆ ಮತ್ತು ಬಂದ್ ಮುಂದುವರಿಸಲಾಗುವುದು ಎಂದರು.

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top