Connect with us

Dvgsuddi Kannada | online news portal | Kannada news online

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 75,760 ಕೊರೊನಾ ಪಾಸಿಟಿವ್; 1,023  ಸಾವು

ರಾಷ್ಟ್ರ ಸುದ್ದಿ

ಕಳೆದ 24 ಗಂಟೆಯಲ್ಲಿ ದೇಶದಲ್ಲಿ 75,760 ಕೊರೊನಾ ಪಾಸಿಟಿವ್; 1,023  ಸಾವು

ನವದೆಹಲಿದೇಶದಾದ್ಯಂತ ಒಂದೇ ದಿನ ಅವಧಿಯಲ್ಲಿ 75,760 ಕೊರೊನಾ ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. 1,023 ಮಂದಿ ಮೃತಪಟ್ಟಿದ್ದಾರೆ.

ಈ ಬಗ್ಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದ್ದು, ದೇಶದಲ್ಲಿ ಒಟ್ಟು  ಸೋಂಕಿತರ ಸಂಖ್ಯೆ 33,10,235ಕ್ಕೆ ಏರಿಕೆಯಾಗಿದೆ.  25,23,772 ಮಂದಿ ಕೊರೊನಾದಿಂದ  ಗುಣಮುಖರಾಗಿದ್ದಾರೆ. ಈವರೆಗೆ 60,472 ಮಂದಿ ಮೃತಪಟ್ಟಿದ್ದಾರೆ.  ದೇಶದಲ್ಲಿ  ಇನ್ನು 7,25,991 ಸಕ್ರಿಯ ಪ್ರಕರಣಗಳಿವೆ.

ಮಹಾರಾಷ್ಟ್ರ ಅತಿ ಹೆಚ್ಚು 7.04ಲಕ್ಷ ಮಂದಿಗೆ ಸೋಂಕು ತಗುಲಿದೆ. 22,794 ಮಂದಿ ಮೃತಪಟ್ಟಿದ್ದಾರೆ.  ತಮಿಳುನಾಡಿನಲ್ಲಿ 3.91 ಲಕ್ಷ ಜನರಿಗೆ ಸೋಂಕು ದೃಢಪಟ್ಟಿದ್ದು, ಇದುವರೆಗೆ 6,721 ಮಂದಿ ಸಾವನ್ನಪ್ಪಿದ್ದಾರೆ. ಆಂಧ್ರಪ್ರದೇಶದಲ್ಲಿ 3.82 ಲಕ್ಷ ಮಂದಿಗೆ ಸೋಂಕು ತಗುಲಿದ್ದು, ಇದುವರೆಗೆ 3,541 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ 8,580 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಕೋವಿಡ್‌ ಪೀಡಿತರ ಸಂಖ್ಯೆ 3 ಲಕ್ಷಕ್ಕೆ ಏರಿದೆ.  ಒಟ್ಟು ಸಂಖ್ಯೆ ಐದು ಸಾವಿರ  ಮಂದಿ ಮೃತಪಟ್ಟಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ರಾಷ್ಟ್ರ ಸುದ್ದಿ

To Top