Connect with us

Dvgsuddi Kannada | online news portal | Kannada news online

ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ ಕೊರೊನಾ ಹಾಟ್ ಸ್ಪಾರ್ಟ್

ಪ್ರಮುಖ ಸುದ್ದಿ

ರಾಜ್ಯದ ಬೆಂಗಳೂರು, ಮೈಸೂರು, ಬೆಳಗಾವಿ ಕೊರೊನಾ ಹಾಟ್ ಸ್ಪಾರ್ಟ್

ನವದೆಹಲಿ: ಕೇಂದ್ರ ಸರ್ಕಾರವು ರಾಜ್ಯದ ಕೊರೊನಾ ಸೋಂಕಿತ ಹಾರ್ಟ್ ಸ್ಪಾರ್ಟ್ ಪಟ್ಟಿ ಬಿಡುಗಡೆ ಮಾಡಿದೆ. ಬೆಂಗಳೂರು , ಮೈಸೂರು, ಬೆಳಗಾವಿ ಹಾರ್ಟ್ ಸ್ಪಾರ್ಟ್ ಪಟ್ಟಿಯಲ್ಲಿವೆ.

ಹಾಟ್ಸ್ಪಾಟ್: ಈ ಪಟ್ಟಿಯಲ್ಲಿ  3 ಜಿಲ್ಲೆಗಳಿವೆ.  ಬೆಂಗಳೂರು ನಗರ, ಮೈಸೂರು, ಬೆಳಗಾವಿ ಇದ್ದು, ಈ ಮೂರು ಜಿಲ್ಲೆಗಳಲ್ಲಿ ಕೊರೊನಾ ಭಾರೀ ಪ್ರಮಾಣದಲ್ಲಿದೆ. ಈ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರ ಬರುವಂತಿಲ್ಲ.

ಹಾಟ್‍ಸ್ಪಾಟ್ ವಿಥ್ ಕ್ಲಸ್ಟರ್ : ಈ ಪಟ್ಟಿಯಲ್ಲಿ ಐದು ಜಿಲ್ಲೆಗಳಿವೆ. ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ. ಈ ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣಗಳು ಬೆಳಕಿಗೆ ಬಂದಿದ್ದು, ಯಾವುದೇ ಕ್ಷಣದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುವ ಸಾಧ್ಯತೆಗಳು ಹೆಚ್ಚಿರುತ್ತದೆ.

ಆರೆಂಜ್ ಜೂನ್ : ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ.  ಬಳ್ಳಾರಿ, ಮಂಡ್ಯ, ಬೆಂಗಳೂರು ಗ್ರಾಮಾಂತರ, ದಾವಣಗೆರೆ, ಉಡುಪಿ, ಗದಗ, ತುಮಕೂರು, ಕೊಡಗು, ವಿಜಯಪುರ, ಚಿಕ್ಕಬಳ್ಳಾಪುರ, ಉತ್ತರಕನ್ನಡ

ಹಸಿರು ವಲಯ: ಈ ಪಟ್ಟಿಯಲ್ಲಿ ರಾಜ್ಯದ 11 ಜಿಲ್ಲೆಗಳಿವೆ. ಚಾಮರಾಜನಗರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಹಾವೇರಿ, ಕೋಲಾರ, ಕೊಪ್ಪಳ, ರಾಯಚೂರು, ರಾಮನಗರ, ಶಿವಮೊಗ್ಗ, ಯಾದಗಿರಿ. ಈ ಭಾಗದಲ್ಲಿ ಯಾವುದೇ ಕೊರೊನಾ ಪ್ರಕರಣಗಳ ಕಂಡು ಬಂದಿಲ್ಲ. ಆದ್ರೂ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು.

ಸದ್ಯದ ಮಾಹಿತಿಯನ್ನು ಪಡೆದು ಕೇಂದ್ರ ಸರ್ಕಾರ ವಲಯವಾರು ಪಟ್ಟಿ ಬಿಡುಗಡೆ ಮಾಡಿದೆ. ಜೊತೆಗೆ ಪ್ರತಿ ನಾಲ್ಕು ದಿನಗಳಿಗೊಮ್ಮೆ ಈ ಪಟ್ಟಿ ಪರಿಷ್ಕೃತವಾಗುತ್ತದೆ. ಏಪ್ರಿಲ್ 20ರ ಬಳಿಕ ಕೇಂದ್ರ ಸರ್ಕಾರ ಹೊಸ ಪಟ್ಟಿ ಬಿಡುಗಡೆ ಮಾಡಲಿದೆ. ಈ ನಾಲ್ಕು ದಿನಗಳಲ್ಲಿ ಒಂದು ವೇಳೆ ಕೊರೊನಾ ಸೋಂಕಿತರ ಸಂಖ್ಯೆ ಯಾವುದೇ ಜಿಲ್ಲೆ ಭಾರೀ ಏರಿಕೆ ಕಂಡ್ರೆ ಅದನ್ನು ಹಾಟ್‍ಸ್ಪಾಟ್ ಪಟ್ಟಿಗೆ ಸೇರಲಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top