Connect with us

Dvgsuddi Kannada | online news portal | Kannada news online

ಕೊರೊನಾ ಭೀತಿ: ಬಿಜೆಪಿಯಿಂದ ಹೆಲ್ಪ್ ಲೈನ್  ಆರಂಭ

ಪ್ರಮುಖ ಸುದ್ದಿ

ಕೊರೊನಾ ಭೀತಿ: ಬಿಜೆಪಿಯಿಂದ ಹೆಲ್ಪ್ ಲೈನ್  ಆರಂಭ

ಡಿವಿಜಿ ಸುದ್ದಿ, ಮಂಗಳೂರು: ರಾಜ್ಯ ಬಿಜೆಪಿ ಘಟಕದಿಂದ ರಾಜ್ಯಾದ್ಯಂತ ಮಾ.23 ರಿಂದಲೇ  ಕೊರೊನಾ ವೈರಸ್‌  ವಾರ್ ರೂಮ್ ತೆರೆಯಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಹೇಳಿದರು.

ಮಾಧ್ಯಮ ಜೊತೆಗೆ ಮಾತನಾಡಿದ ಅವರು, ಮಾರ್ಚ್ 23ರಿಂದಲೇ ರಾಜ್ಯದ ಎಲ್ಲಾ ಜಿಲ್ಲೆ, ಮಂಡಲಗಳಲ್ಲಿ ಬಿಜೆಪಿ ವಾರ್ ರೂಂ ಆರಂಭವಾಗಿದೆ. ನಿನ್ನೆಯ ವರೆಗೆ ರಾಜ್ಯದಲ್ಲಿ‌ 20,13,910 ಆಹಾರದ ಪೊಟ್ಟಣ, 1,9ಮಾಸ್ಕ್ ಮತ್ತು 5,95,705 ರೇಷನ್ ಕಿಟ್‍ಗಳನ್ನು ರಾಜ್ಯಾದ್ಯಂತ ವಿತರಣೆ ಮಾಡಿದ್ದೇವೆ ಎಂದರು.

ಬಿಜೆಪಿ ಕರ್ನಾಟಕ ಕೋವಿಡ್ ಹೆಲ್ಪ್ ಲೈನ್ ಆರಂಭವಾಗಲಿದ್ದು, 08068324040 ಈ ಸಂಖ್ಯೆ ಇಡೀ ಕರ್ನಾಟಕ ರಾಜ್ಯಕ್ಕೆ ಒಂದೇ ಆಗಿದ್ದು,  8722557733 ಈ ನಂಬರ್ ಗೆ  ವಾಟ್ಸಾಪ್ ಮಾಡಿ ರಾಜ್ಯದ ಜನರು ಸಹಾಯ ಪಡೆಯಬಹುದು.

ಅನಾರೋಗ್ಯ ಪೀಡಿತರು ಆಸ್ಪತ್ರೆಗೆ ಕರೆದುಹೋಗಲು ವ್ಯವಸ್ಥೆ, ಮೆಡಿಕಲ್-ಆಹಾರ ಸಾಮಾಗ್ರಿಗಳಿಗೆ ವ್ಯವಸ್ಥೆ, ತುರ್ತು ಪರಿಸ್ಥಿತಿ ಹೀಗೆ 12 ವಿಷಯಗಳಿಗೆ ಯಾವುದೇ ಕರೆಗಳು ಬಂದಲ್ಲಿ ಎಲ್ಲಿಂದ ಕರೆ ಬಂದಿದೆಯೋ ಅಲ್ಲಿನ ಮಂಡಲ, ವಿಭಾಗಗಳಿಗೆ ತಿಳಿಸಲಾಗುವುದು. ತಕ್ಷಣ ಅಲ್ಲಿನ ಕಾರ್ಯಕರ್ತರು ಕರೆ ಮಾಡಿದವರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುತ್ತಾರೆ ಎಂದರು.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಸೂಚನೆಯಂತೆ ಪ್ರತಿಯೊಬ್ಬ ಕಾರ್ಯಕರ್ತನೂ ಐದು ಜನ ಬಡ, ನಿರ್ಗತಿಕರಿಗೆ ಊಟವನ್ನು ಒದಗಿಸಬೇಕು. ಜೊತೆಗೆ ಹೊರ ರಾಜ್ಯದ ಕೂಲಿ ಕಾರ್ಮಿಕರಿಗೆ ಆಹಾರ ಒದಗಿಸಬೇಕು ಎಂದು ಸೂಚನೆ ನೀಡಿದರು

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top