ಡಿವಿಜಿಸುದ್ದಿ.ಕಾಂ, ದಾವಣಗೆರೆ: ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕ್ಯಾನ್ಸರ್ ನಡಿಗೆ ಜನ ಜಾಗೃತಿ ಜಾಥಕ್ಕೆ ಅಪಾರ ಸಂಖ್ಯೆಯಲ್ಲಿ ಶಾಲಾ ವಿದ್ಯಾರ್ಥಿಗಳು, ಸಾರ್ವಜನಿಕರು ಭಾಗಿಯಾಗಿದ್ರು. ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಜಾಥಕ್ಕೆ ಚಾಲನೆ ನೀಡಿದರು.
ನಗರದ ಮೋತಿ ವೀರಪ್ಪ ಪದವಿಪೂರ್ವ ಕಾಲೇಜಿನಿಂದ ಪ್ರಾರಂಭವಾದ ಜಾಥಾ ಚಿಗಟೇರಿ ಆಸ್ಪತ್ರೆ, ವಿದ್ಯಾರ್ಥಿ ಭವನ, ಹದಡಿರಸ್ತೆ, ಅಂಬೇಡ್ಕರ್ ವೃತ್ತ, ಜಯದೇವ ವೃತ್ತದ ಮೂಲಕ ಸಾಗಿ ಗಾಂಧಿವೃತ್ತದಿಂದ ಪಾಲಿಕೆ ಆವರಣ ತಲುಪಿತು. ಆನಂತರ ಹೈಸ್ಕೂಲ್ ಮೈದಾನ ಮೂಲಕ ರಾಮ್ ಅಂಡ್ ಕೋ ಸರ್ಕಲ್ , ಚರ್ಚ್ ರಸ್ತೆ ಮೂಲಕ ಪುನಃ ವೀತಿ ವೀರಪ್ಪ ಸರ್ಕಲ್ ತಲುಪಿತು. ಈ ಮೂಲಕ ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲಾಯಿತು.

ಚಾಲನೆ ನಂತರ ಮಾತನಾಡಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಜಾಥಾಗಳು ಹೆಚ್ಚಾಗಿ ನಡೆಯಬೇಕಿದೆ. ಇಂತಹ ಕಾರ್ಯಕ್ರಮ ಆಯೋಜಿಸಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಮುಂದಿನ ದಿನಗಳಲ್ಲಿ ಇಂತಹ ಇನ್ನಷ್ಟು ಕಾರ್ಯಕ್ರಮ ಆಯೋಜಿಸಿ ಎಂದು ಆಯೋಜಕರಿಗೆ ಸಲಹೆ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಪ್ರತಿಯೊಬ್ಬ ಮನುಷ್ಯನಿಗೆ ಆರೋಗ್ಯ ತುಂಬಾ ಮುಖ್ಯವಾಗಿದ್ದು, ವಾಕಿಂಗ್ ಮೂಲಕ ಪ್ರತಿಯೊಬ್ಬರು ಆರೋಗ್ಯ ಕಾಪಾಡಿಕೊಳ್ಳಬೇಕಿದೆ ಎಂದು ಸಲಹೆ ನೀಡಿದರು.

ದಾವಣಗೆರೆಯ ಸಿದ್ದಗಂಗಾ ಶಾಲೆ, ಬಿಐಇಟಿ, ಯುಬಿಟಿಡಿ ಎಂಜಿನಿಯರ್, ಮೆಡಿಕಲ್, ಡೆಂಟಲ್ ಕಾಲೇಜ್, ದಾವಣಗೆರೆ ವಿವಿ ವಿದ್ಯಾರ್ಥಿಗಳು, ವಾಕಿಂಗ್ ಗೆ ಬಂದಿದ್ದ ಸಾರ್ವಜನಿಕರು ಸೇರಿದಂತೆ ಒಂದು ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದರು.
ಭಾರತೀಯ ರೆಡ್ ಕ್ರಾಸ್ ಘಟಕ, ಲೈಫ್ಲಲೈನ್ ಫ್ಲೈನ್ ಸಂಸ್ಥೆ, ದಾವಣಗೆರೆ ವಿವಿ, ಲಯನ್ಸ್ ಕ್ಲಬ್, ಜಿಲ್ಲಾ ವರದಿಗಾರ ಕೂಟ, ಭಾರತೀಯ ವೈದ್ಕೀಯ ಸಂಘ, ರೋಟರಿ ಇಂಟರ್ ನ್ಯಾಷನಲ್ ಸೇರಿದಂತೆ ಅನೇಕ ಸಂಘಟನೆಗಳು ಜಾಥಾಕ್ಕೆ ಸಹಕಾರ ನೀಡಿದ್ದವು.
ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಅಧ್ಯಕ್ಷ ಡಾ. ಶ್ರೀಶೈಲ ಎಸ್. ಬ್ಯಾಡಗಿ, ಕಲಾವಿರ ಆರ್.ಟಿ. ಅರುಣ್ ಕುಮಾರ್, ಡಾ. ಸುನಿಲ್ ಎಸ್.ಬ್ಯಾಡಗಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಡಾ.ಎ.ಎಂ. ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ರಾಘವೇಂದ್ರರಾವ್, ಜಿಲ್ಲಾ ವರದಿಗಾರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್, ಬಿಜೆಪಿ ಮುಖಂಡ ಉಮೇಶ್ ಪಟೇಲ್ ಸೇರಿದಂತೆ ಅನೇಕರು ಜಾಥಾದಲ್ಲಿ ಭಾಗಿಯಾಗಿದ್ದರು.



