ನವದೆಹಲಿ: ಮಹಾತ್ಮಗಾಂಧಿ ಅವರಿಗೆ ಇದುವರೆಗೂ ಯಾಕೆ ಭಾರತರತ್ನ ನೀಡಿಲ್ಲ ಎಂದು ಪ್ರಶ್ನಿಸಿ ಸುಪ್ರೀಂ ಕೋರ್ಟ್ ನಲ್ಲಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಿರಸ್ಕರಿಸಿದ ಕೋರ್ಟ್, ದೇಶದ ಎಲ್ಲಾ ಬಿರುದುಗಳಿಗಿಂತ ಮಿಗಿಲಾದ `ರಾಷ್ಟ್ರಪಿತ ಮಹಾತ್ಮ’ ಹೊಂದಿದ್ದಾರೆ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸಿ.ಎ.ಬೊಬಡೆ, ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಸೂರ್ಯಕಾಂತ್ ಅವರಿದ್ದ ಪೀಠವು ಮಹಾತ್ಮ ಗಾಂಧಿಜೀ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಕೋರ್ಟ್ ನಿರ್ದೇಶನ ನೀಡುವುದು ಸರಿಯಾಗುವುದಿಲ್ಲ.
ಗಾಂಧಿಜೀ ಅವರನ್ನು ಪ್ರಶಸ್ತಿಗಿಂತಲೂ ಉನ್ನತ ಸ್ಥಾನದಲ್ಲಿ ಅವರನ್ನು ನಾಗರಿಕರು ಇರಿಸಿದ್ದಾರೆ’ ಎಂದು ಅಭಿಪ್ರಾಯಪಟ್ಟಿದೆ.ಆದರೆ, ಅರ್ಜಿದಾರರ ಭಾವನೆಗೂ ಮನ್ನಣೆ ನೀಡಿ, ನೀವು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬಹುದು ಎಂದು ಸೂಚಿಸಿದೆ.



