ಡಿವಿಜಿ ಸುದ್ದು, ಹೊಸಪೇಟೆ: ದೇವರ ಹೆಸರಲ್ಲಿ ಬಾರ್ ನಡೆಸೋ ಬಾರ್ ಮಾಲೀಕರಿಗೆ ರಾಜ್ಯ ಸರ್ಕಾರ ಶಾಕಿಂಗ್ ನ್ಯೂಸ್ ಕೊಟ್ಟಿದೆ. ಹೌದು, ದೇವರ ಹೆಸರಲ್ಲಿ ಯಾವುದೇ ಕಾರ್ಯ ಮಾಡಿದ್ರೆ ಚನ್ನಾಗಿರುತ್ತೆ ಅನ್ನೋ ನಂಬಿಕೆಯಲ್ಲಿ ಜನರು ದೇವರ ಹೆಸರಲ್ಲಿ ಬಾರ್ ತೆರೆದು ಒಳ್ಳೆ ಗಿರಾಕಿ ಕುದುರಿಸಿಕೊಂಡಿದ್ದರು. ಇಂತಹ ಮಾಲೀಕರು ಇನ್ಮುಂದೆ ಹೆಸರು ಚೇಂಜ್ ಮಾಡಿಕೊಳ್ಳಬೇಕಿದೆ…
ಸರ್ಕಾರದ ಕಣ್ಣು ಇದೀಗ ದೇವರ ಹೆಸರಲ್ಲಿರೋ ಬಾರ್ ಮೇಲೆ ಬಿದಿದ್ದು, ಇನ್ಮುಂದೆ ದೇವರ ಹೆಸರು ಬಳಸಿಕೊಂಡು ಬಾರ್ ನಡೆಸಂಗಿಲ್ಲ ಅನ್ನೋ ರೂಲ್ಸ್ ಜಾರಿಗೆ ತರಲು ತಯಾರಿ ನಡೆಸಿದೆ. ಈ ಬಗ್ಗೆ ಶೀಘ್ರವೇ ಸುತ್ತೋಲೆ ಹೊರಡಿಸಲಾಗವುದು ಎಂದು ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ವೆಂಕಟೇಶ್ವರ ಬಾರ್, ಮಂಜನಾಥೇಶ್ವರ ಬಾರ್, ಗಣೇಶ್ ಬಾರ್ ..ಹೀಗೆ ವಿವಿಧ ದೇವರ ಹೆಸರಲ್ಲಿ ಬಾರ್ ನಡೆಸುತ್ತಿರುವ ಬಾರ್ ಗಳಿಂದ ದೇವರಿಗೆ ಅವಮಾನ ಮಾಡಿದಂತಾಗುತ್ತದೆ. ಈ ಹೆಸರುಗಳನ್ನು ಕೂಡಲೇ ತಗೆದು ಹಾಕುವಂತೆ ಕೆಲವರು ಮನವಿ ಮಾಡಿದ್ದರು. ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಅಬಕಾರಿ ಹಾಗೂ ಕಾನೂನು ಇಲಾಖೆಯೊಂದಿಗೆ ಚರ್ಚಿಸಿದ ಬಳಿಕ ಸುತ್ತೋಲೆ ಹೊರಡಿಸಲಾಗುವುದು .ನೀರಾ ಇಳಿಸಲು ಕೆಲವರು ಮನವಿ ಮಾಡಿಕೊಂಡಿದ್ದಾರೆ. ರೈತರಿಗೆ, ಬಡವರಿಗೆ ಅನುಕೂಲವಾಗುವಂತೆ ನೀರಾಕ್ಕೆ ಅನುಮತಿ ಕೊಡುವುದರ ಬಗ್ಗೆ ಪರಿಶೀಲಿಸಿ, ಸೂಕ್ತ ಯೋಜನೆ ರೂಪಿಸಲಾಗುವುದು’ ಎಂದು ಹೇಳಿದರು.
‘



