Connect with us

Dvg Suddi-Kannada News

ಶನಿವಾರದ ರಾಶಿ ಭವಿಷ್ಯ

ಪ್ರಮುಖ ಸುದ್ದಿ

ಶನಿವಾರದ ರಾಶಿ ಭವಿಷ್ಯ

ಶ್ರೀಶ್ರೀಶ್ರೀ”ವೀರಾಂಜನೇಯ” ಸ್ವಾಮಿಯ ವಾರ ಈ ಸ್ವಾಮಿಯ ಅನುಗ್ರಹದಿಂದ ಹಾಗೂ ಚೌಡೇಶ್ವರಿ ದೇವಿ ಮಹೋನ್ನತ ಬಲಿಷ್ಠ ಪೂಜಾ ಶಕ್ತಿಗಳಿಂದ ನಿಮ್ಮ ಸಮಸ್ಯೆಗಳು ಏನೇ ಇರಲಿ, ಎಷ್ಟೇ ಕಠಿಣವಾಗಿರಲಿ ಪರಿಹಾರ ಮತ್ತು ಮಾರ್ಗದರ್ಶನ ಸೂಚಿಸುವರು. ತಮ್ಮ ಸಮಸ್ಯೆಗಳಾದ ವಿದ್ಯೆ, ಉದ್ಯೋಗ, ವಿದೇಶ ಪ್ರವಾಸ, ಆರೋಗ್ಯ, ಸಂತಾನ, ದಾಂಪತ್ಯ, ಮದುವೆ ,ಹಣಕಾಸು ,ಪ್ರೇಮ ವಿಚಾರ ,ಇನ್ನಿತರ ಗುಪ್ತ ಕಠಿಣ ಸಮಸ್ಯೆಗಳಿಗೆ
ಮುಖ್ಯಪ್ರಾಣದೇವರ ಕೃಪಾಕಟಾಕ್ಷದಿಂದ ಪರಿಹಾರ ಶತಸಿದ್ಧ.
ಪಂಡಿತ್ ಸೋಮಶೇಖರ್ B.Sc
Mob.No.__93534 88403 ನಿಮ್ಮ ಭವ್ಯ ಭವಿಷ್ಯದ ಕನಸು ನನಸಾಗಲು ಇಂದೇ ಕರೆ ಮಾಡಿ.

🌻 ಮೇಷ ರಾಶಿ🌻
ಅಶ್ವಿನಿ, ಭರಣಿ, ಕೃತ್ತಿಕಾ (ಚೂ.ಚೇ.ಚೋ.ಲ.ಲಿ.ಉ.ಲೇ.ಲೊ.ಅ.)

ಸಾಲಗಾರರಿಂದ ಕಿರಿಕಿರಿ .ಮಗಳ ಸಂಸಾರದ ಸಮಸ್ಯೆ ಕಾಡಲಿದೆ . ಮಗನ ನಡುವಳಿಕೆಯಿಂದ ಬೇಸರವಾಗುವುದು .ಹೊಸ ಯೋಜನೆಗಳನ್ನು ಸಿದ್ಧಪಡಿಸುವ ಮೊದಲು ಅದರಲ್ಲಿರಬಹುದಾದ ಸರಿ-ತಪ್ಪು ಹಾಗೂ ಲಾಭ-ನಷ್ಟಗಳನ್ನು ಚೆನ್ನಾಗಿ ಆಲೋಚಿಸಿ ಆರಂಭಿಸಿರಿ. ಪ್ರತಿಯೊಂದು ಕೆಲಸಕ್ಕೂ ಪರಾವಲಂಭಿಗಳಾಗಬೇಡಿ. ಮೋಸ ಹೋಗುವ ಸಂಭವವಿದೆ. ಸರ್ಕಾರದಿಂದ ಆಗಬೇಕಾಗಿರುವ ಕೆಲಸಗಳು ಸುಸೂತ್ರವಾಗಲಿವೆ. ವ್ಯವಹಾರದಲ್ಲಿ ವಿರೋಧಿಗಳಿಗೆ ನಿಮ್ಮ ಬುದ್ಧಿ ಶಕ್ತಿಯ ಅರಿವಾಗಲಿದೆ. ಆದಾಯದ ಮೂಲದಲ್ಲಿ ಹೆಚ್ಚಳ, ಹಲವು ಸೂಕ್ಷ್ಮ ವಿಷಯಗಳನ್ನು ಬುದ್ಧಿವಂತಿಕೆಯಿಂದ ನಿಭಾಯಿಸಿರಿ. ಸೋಮ, ಮಂಗಳ, ಗುರು ಶುಭ ದಿನಗಳು. ಸೋಮ, ಮಂಗಳ, ಗುರು ಶುಭ ದಿನಗಳು. ಮಂಗಳ, ಬುಧ, ಶುಕ್ರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻ವೃಷಭರಾಶಿ 🌻
ಕೃತ್ತಿಕಾ, 2,3,4, ರೋಹಿಣಿ, ಮೃಗ 1,2 (ಇ.ಉ.ಎ.ಒ.ವ.ವಿ.ವು.ವೆ.ವೋ

ಹೊಸ ಉದ್ಯಮ ಹೋಟೆಲ್ಲು, ಕಬ್ಬಿಣದ ಅಂಗಡಿ, ದಿನಸಿ ಅಂಗಡಿ ಪ್ರಾರಂಭಿಸಲು ಚಿಂತನೆ ಮಾಡುವಿರಿ. ಕೊಂಚ ಸಾಲಗಾರರಿಂದ ಮನಸ್ತಾಪ. ಬರಬಹುದಾದ ಸಮಸ್ಯೆಗಳನ್ನು ಎದುರಿಸಲು ಮಾನಸಿಕವಾಗಿ ಈಗಲೇ ಸಿದ್ಧರಾಗುವುದು ಉತ್ತಮ. ತುಸು ತಾಳ್ಮೆಯಿಂದ ಆಲೋಚಿಸಿದಲ್ಲಿ ನಿಮ್ಮಲ್ಲೇ ಸಮಸ್ಯೆಗೆ ಉತ್ತರ ದೊರೆಯಲಿದೆ. ಧನಾದಾಯದಲ್ಲಿ ಈಗಿರುವ ಸ್ಥಿತಿ-ಗತಿಯೇ ಮುಂದುವರೆಯಲಿದೆ. ಆತ್ಮೀಯರ ಬಗ್ಗೆ ಇದ್ದ ತಪ್ಪು ಕಲ್ಪನೆಗಳು ದೂರವಾಗಿ, ಸೌಹಾರ್ದತೆ ಹೆಚ್ಚಲಿದೆ. ಬೆಳೆದ ಮಕ್ಕಳೊಂದಿಗೆ ವಾಗ್ವಾದ ಮಾಡದೇ, ಅವರಿಗೆ ಸರಿ-ತಪ್ಪುಗಳ ಅರಿವು ಮೂಡಿಸಲು ಪ್ರಯತ್ನಿಸಿ, ವಿದ್ಯಾರ್ಥಿಗಳಿಗೆ ಉತ್ತಮವಾಗಿದ್ದು, ಸಾಧನೆ ಮಾಡಲು ಅವಕಾಶಗಳು ಬರಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಮೂಡಿ ಬರಲಿದೆ. ಬುಧ, ಗುರು, ಶನಿ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻ಮಿಥುನ ರಾಶಿ🌻
3,4, ಆರಿದ್ರಾ, ಪುನರ್ವಸು 1,2,3, (ಕ.ಕಿ.ಕು.ಘ, ಔ, ಚ.ಕೆ.ಕೋ.ಹ.)

ಆಸ್ತಿ ಖರೀದಿ ಯಶಸ್ಸು ಕಾಣುವಿರಿ . ಪತ್ನಿಯ ಮಾರ್ಗದರ್ಶನ ಮತ್ತು ಸಹಾಯದಿಂದ ಹಣಕಾಸಿನ ಸಮಸ್ಯೆ ನಿವಾರಣೆಯಾಗಲಿದೆ. ಜೀವನದಲ್ಲಿ ಗುರಿಮುಟ್ಟಲು ಮನಸ್ಸು ಮಾಡಿದರಷ್ಟೇ ಸಾಲದು, ಅದಕ್ಕೆ ಹೆಚ್ಚಿನ ಪರಿಶ್ರಮ ಹಾಗೂ ಶ್ರದ್ಧೆ ಬೇಕೆಂಬ ಅರಿವಿರಲಿ. ಮತ್ತೊಬ್ಬರ ಜವಾಬ್ದಾರಿಯನ್ನು ಹೊರುವ ಮೊದಲು ಅದನ್ನು ನಿಭಾಯಿಸಲು ಸಾಧ್ಯವೇ? ಎಂಬುದರ ಬಗ್ಗೆ ಯೋಚಿಸಿರಿ. ಹಣಕಾಸಿನ ವಿಚಾರದಲ್ಲಿ ಮೋಸ ಹೋಗುವ ಸಂಭವವಿದೆ. ತರುಣಿಯರು ಪ್ರೀತಿ-ಪ್ರೇಮದ ಹುಚ್ಚಾಟದಿಂದಾಗಿ ಜೀವನದಲ್ಲಿ ಭದ್ರತೆಯನ್ನು ಕಳೆದುಕೊಳ್ಳುವರು. ಕಲಾವಿದರಿಗೆ ವಿದೇಶ ಪ್ರಯಾಣ ಯೋಗವಿದ್ದು, ಸರ್ಕಾರದಿಂದ ಅನುದಾನ ದೊರೆಯಲಿದೆ. ನಂಜಿನ ಮಾತನ್ನಾಡುವವರಿಂದ ದೂರವಿರಿ. ಭಾನು, ಬುಧ, ಗುರು ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ಕಟಕ ರಾಶಿ🌻
ಪುನ 4, ಪುಷ್ಯ, ಆಶ್ಲೇಷ (ಹಿ.ಹು.ಹೆ.ಹೂ.ಡ.ಡಿ.ಡು.ಡೆ.ಡೋ)

ಉದರ ದೋಷ ಸಮಸ್ಯೆ, ಎದೆ ನೋವಿನ ಸಮಸ್ಯೆ ಕಾಡಲಿದೆ ಸರಿಯಾಗಿ ವೈದ್ಯರ ಸಲಹೆ ಪಡೆಯಿರಿ. ಬೆಳ್ಳಗಿರುವುದೆಲ್ಲಾ ಹಾಲಲ್ಲ ಎಂಬ ಅರಿವು ನೀವು ಮತ್ತೊಬ್ಬರಿಂದ ಮೋಸ ಹೋದ ಮೇಲೆ ಅರಿವಾಗಲಿದೆ. ಕ್ರಿಯಾಶೀಲರಾದ ನಿಮಗೆ ಜೀವನದಲ್ಲಿ ಮುಂದೆ ಬರಲು ಹೆಚ್ಚಿನ ಅವಕಾಶ ದೊರೆಯಲಿದೆ. ಮಹತ್ತರ ವಿಷಯಗಳನ್ನು ಅನುಭವಿ ಗಳೊಂದಿಗೆ ಚರ್ಚಿಸಿ. ನಿರ್ಧಾರ ಕೈಗೊಳ್ಳಿ. ಖಾಸಗಿ ಕಂಪನಿ ನೌಕರರ ವಿಷಯದಲ್ಲಿ ಮೇಲಾಧಿಕಾರಿಗಳಿಗೆ ಹೆಚ್ಚಿನ ವಿಶ್ವಾಸ ಮೂಡಲಿದೆ. ವಸ್ತುಗಳು ಕಳೆದುಹೋಗುವ ಸಂಭವವಿದೆ, ಹಿರಿಯರ ಬೇಕು-ಬೇಡಗಳನ್ನು ವಿಚಾರಿಸಿ, ಸರಿಯಾಗಿ ನೋಡಿಕೊಳ್ಳಿ. ಸೋಮ, ಗುರು, ಶುಕ್ರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ಸಿಂಹರಾಶಿ 🌻
ಮಘ, ಪುಬ್ಬ, ಉತ್ತರ 1. (ಮ.ಮಿ.ಮು.ಮೋ.ವೆ.ಟ.ಟಿ.ಟು.ಟೆ)

ದಾಯಾದಿಗಳ ಕಡೆಯಿಂದ ಮನಸ್ತಾಪ . ಟ್ರಾನ್ಸ್ಪೋರ್ಟ್ ಬಿಜಿನೆಸ್ ಮಾಡುವವರು ಮೇಲಿಂದ ಮೇಲೆ ವಾಹನ ರಿಪೇರಿ ಬರುವುದು .ದಂಪತಿಗಳ ಮಧ್ಯೆ ಮೂಡಿದ್ದ ಸಂಶಯ ದೂರವಾಗಲಿದೆ. ಆದಾಯದಲ್ಲಿ ಹೆಚ್ಚಳ ಕಂಡು ಬರದಿದ್ದರೂ ಯಾವುದಕ್ಕೂ ಕೊರತೆ ಕಾಣದು. ನೀವು ಸರ್ಕಾರದ ಉನ್ನತಾಧಿಕಾರಿಗಳಾಗಿದ್ದಲ್ಲಿ ರಾಜಕಾರಣಿಗಳು ತಮ್ಮ ಪ್ರಭಾವ ಬೀರಿ ತಮ್ಮ ಕೆಲಸ ಕಾರ್ಯಗಳನ್ನು ನಿಮ್ಮಿಂದ ಮಾಡಿಸಿಕೊಳ್ಳುವರು. ಅಂದುಕೊಂಡ ಗುರಿಯನ್ನು ಕ್ಲೃಪ್ತ ಸಮಯದಲ್ಲಿ ಸಾಧಿಸಿ ತೋರುವಿರಿ. ಕೃಷಿ ಭೂಮಿಯನ್ನು ವಿಸ್ತರಿಸುವ ವಿಚಾರವನ್ನು ಕಾರ್ಯರೂಪಕ್ಕೆ ತರಲು ಇದು ಸಕಾಲ. ಶುಭ ಕಾರ್ಯದಲ್ಲಿ ಭಾಗವಹಿಸುವಿರಿ. ವೈಯಕ್ತಿಕ ಆರೋಗ್ಯದಲ್ಲಿ ತುಸು ವ್ಯತ್ಯಾಸ ಕಾಣುವ ಸಂಭವವಿದೆ. ಭಾನು, ಗುರು, ಶುಕ್ರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ಕನ್ಯಾ ರಾಶಿ 🌻
ಉತ್ತರಾ 2,3,4, ಹಸ್ತಾ, ಚಿತ್ತಾ 1,2 (ಟೋ.ಪ.ಪಿ.ಪು.ಷ.ಣ.ಠ.ಪೆ.ಪೋ)

ಹೊಸ ಉದ್ಯಮ ಪ್ರಾರಂಭ ಚಿಂತನೆ . ಕೃಷಿಕರಿಗೆ ಒಳ್ಳೆಯ ಲಾಭ ಸಿಗಲಿದೆ .ಆರಂಭದಲ್ಲಿ ಆದಾಯದ ಮೂಲದಲ್ಲಿ ಹೆಚ್ಚಳ ಕಂಡು ಬಂದರೂ ಕ್ರಮೇಣ ಅದರಲ್ಲಿ ಕೊರತೆ ಕಾಣಬಹುದು. ಆದ್ದರಿಂದ ಅದನ್ನು ನಂಬಿಕೊಂಡು ಯಾವುದೇ ಯೋಜನೆಗಳನ್ನು ಜಾರಿಗೆ ತರಲು ಹೋಗಬೇಡಿ. ನಿಮ್ಮಿಂದ ಬಗೆಹರಿಸಲಾಗದ ಕೌಟುಂಬಿಕ ಸಮಸ್ಯೆಯೊಂದು ಹಿರಿಯರ ಮಧ್ಯಸ್ಥಿಕೆಯಿಂದ ಶೀಘ್ರದಲ್ಲಿಯೇ ಬಗೆಹರಿಯಲಿದೆ. ತಿಳುವಳಿಕೆ ಕಡಿಮೆ ಇರುವ ಬಂಧುಗಳೊಬ್ಬರು ಕಾನೂನಿಗೆ ಸಂಬಂಧಿಸಿದ ಸಲಹೆ ಕೇಳಲು ಬರುವರು. ಅನಾರೋಗ್ಯ ಪೀಡಿತ ಗೆಳೆಯನೊಬ್ಬನಿಗೆ ನೆರವಾಗುವಿರಿ. ಮಕ್ಕಳ ಏಳಿಗೆಯಲ್ಲಿ ತುಸು ವಿಳಂಬ ವಾದರೂ ಮುಂದೆ ಉತ್ತಮ ಫಲ ಬುಧ, ಶುಕ್ರ, ಶನಿ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻ತುಲಾ ರಾಶಿ🌻
ಚಿತ್ತಾ 3,4, ಸ್ವಾತಿ, ವಿಶಾಖ 1,2,3 (ರ.ರಿ.ರು.ರೆ.ರೊ.ತ.ತಿ.ತು.ತೆ.)

ಮಕ್ಕಳ ಸಂತಾನದ ಬಗ್ಗೆ ಚಿಂತನೆ ಕಾಡಲಿದೆ . ಆಸ್ತಿ ವಿಚಾರದಲ್ಲಿ ಸಹೋದರ-ಸಹೋದರಿಯರ ಕಡೆಯಿಂದ ಮನಸ್ತಾಪ. ಮತ್ತೊಬ್ಬರಿಗೆ ಹೇಳಲಾಗದೆ ಮಾನಸಿಕ ವ್ಯಥೆ ಅನುಭವಿಸಬೇಕಾದೀತು. ಕೋಪ ತಾಪಗಳು ಮಿತಿ ಮೀರಿ ವಿನಾಕಾರಣ ಕದನಕ್ಕಿಳಿಯುವಿರಿ. ಆದಾಯದಲ್ಲಿ ಹೆಚ್ಚಳ, ವಿದ್ಯಾರ್ಥಿಗಳು ತಮ್ಮ ವಾಕ್ಚಾತುರ್ಯದಿಂದ ಮೇಲಾಧಿಕಾರಿಗಳ ಮನ ಒಲಿಸಿ, ತಮ್ಮ ಕಾರ್ಯ ಸಾಧಿಸಿಕೊಳ್ಳುವರು. ವ್ಯವಹಾರದಲ್ಲಿ ಎದುರಾಳಿಗಳ ತಂತ್ರ ನಿಮ್ಮ ಮುಂದೆ ವ್ಯರ್ಥವಾಗುವುದು, ಕೆಲವು ವಿಷಯಗಳಲ್ಲಿ ನೀವು ತೆಗೆದುಕೊಳ್ಳುವ ದುಡುಕಿನ ನಿರ್ಧಾರದಿಂದಾಗಿ ಕುಟುಂಬದ ಸದಸ್ಯರು ತೊಂದರೆ ಅನುಭವಿಸಬೇಕಾಗಬಹುದು. ಚಿಲ್ಲರೆ ವ್ಯಾಪಾರಿಗಳಿಗೆ ಉತ್ತಮ ಲಾಭ. ಬುಧ, ಶುಕ್ರ, ಶನಿವಾರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ವೃಚಿಕ ರಾಶಿ 🌻
ವಿಶಾಖ 4, ಅನೂ, ಜೇಷ್ಠ (ತೊ.ನ.ನಿ.ನು.ನೆ.ನೋ.ಯ.ಯಿ.ಯು.)

ಹಳೆಯ ಮನೆಯನ್ನು ಹೊಸ ಆಧುನಿಕರಣ ಚಿಂತನೆ ಮಾಡುವಿರಿ . ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಪರಿವರ್ತನೆ ಮಾಡುವಿರಿ .ಹಳೆಯ ಕಹಿ ಘಟನೆಗಳನ್ನು ಮರೆತು ಹೊಸ ಹುರುಪಿನೊಂದಿಗೆ ಕಾರ್ಯ ರಂಗಕ್ಕಿಳಿಯುವಿರಿ. ಆದಾಯದಲ್ಲಿ ಸಾಕಷ್ಟು ಸುಧಾರಣೆಯಾಗಲಿದೆ. ಆದರೂ ಅರ್ಥವಿಲ್ಲದ ಹಾಗೂ ಮಿತಿ ಮೀರುತ್ತಿರುವ ಖರ್ಚು ನಿಮ್ಮ ಹತೋಟಿಗೆ ಬರದೇ ಹೋಗಬಹುದು. ಹತ್ತು ಹಲವು ಕಾರ್ಯಗಳನ್ನು ಏಕ ಕಾಲದಲ್ಲಿಯೇ ಮಾಡಲು ಹೋಗಬೇಡಿ. ಹಿರಿಯರ ಅಣತಿಯಂತೆ ನಡೆದುಕೊಂಡಲ್ಲಿ ಯಶಸ್ಸು, ಮಕ್ಕಳ ವಿಚಾರದಲ್ಲಿ ಮನಸ್ಸಿಗೆ ತುಸು ಬೇಸರ, ವಿದ್ಯಾರ್ಥಿಗಳು ಶ್ರಮಪಡದೆ ವಿಧಿಯಿಲ್ಲ. ಗೋ ಸೇವೆಯಿಂದ ಸಂಕಷ್ಟಗಳು ದೂರ, ಅನ್ನದಾನ ಮಾಡಿ. ಭಾನು, ಮಂಗಳ, ಗುರು ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻ಧನಸ್ಸು ರಾಶಿ🌻
ಮೂಲ, ಪೂರ್ವಾಷಾಡ, ಉತ್ತರಾಷಾಡ, (ಯೆ.ಯೋ. ಬ.ಬಿ.ಬು.ಧ.ಫ.ಡ.ಬೆ.)

ತಾವು ಖರೀದಿಸುವ ಆಸ್ತಿ ವಿಚಾರದಲ್ಲಿ ಗೊಂದಲ ಸೃಷ್ಟಿಯಾಗಲಿದೆ .ಮತ್ತೊಬ್ಬರ ಹುಳುಕನ್ನು ಹೊರ ಹಾಕಲು ಹೋಗಿ ನೀವೇ ಅಪಮಾನಕ್ಕೆ ಒಳಗಾಗುವ ಸಂಭವವಿದೆ. ಹಣಕಾಸು ವಹಿವಾಟಿನ ವಿಚಾರದಲ್ಲಿ ಅಲಕ್ಷೆ ತೋರಿದಲ್ಲಿ ಭಾರೀ ನಷ್ಟವನ್ನು ಎದುರಿಸಬೇಕಾದೀತು. ಭೂಮಿ ವಿಚಾರದಲ್ಲಿ ಹೆಚ್ಚಿನ ಲಾಭ, ಗಂಭೀರ ಚರ್ಚೆಯನ್ನು ಸಾಧ್ಯವಾದಷ್ಟು ಮುಂದೂಡುವುದು ಉತ್ತಮ. ಮಡದಿ ಮಕ್ಕಳು ಕೊಡುವ ಕೆಲವು ಸಲಹೆಗಳು ಅತ್ಯಮೂಲ್ಯವಾಗಲಿವೆ. ರೈತಾಪಿ ಮಿತ್ರರು ತಮ್ಮ ಕೃಷಿ ಬೆಳೆಗಳ ಮಾರಾಟದ ವಿಚಾರದಲ್ಲಿ ಮಧ್ಯವರ್ತಿಗಳಿಂದ ಮೋಸ ಹೋಗಬಹುದು. ಸೋಮ, ಗುರು, ಶುಕ್ರವಾರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ಮಕರ ರಾಶಿ 🌻
ಉತ್ತರಾಷಾಢ 2,3,4, ಶ್ರವಣ, ಧನಿಷ್ಠಾ 1,2 (ಜೊ.ಜ.ಜಿ.ಜೆ.ಶಿ.ಶು.ಶೇ.ಶೋ.ಗ.ಗಿ)

ಹೊಸ ವಾಹನ ಖರೀದಿ ಯಶಸ್ಸು . ಪಿತ್ರಾರ್ಜಿತ ಆಸ್ತಿ ಗೊಂದಲ ಎದುರಿಸುವಿರಿ. ನಿಮಗೆ ಗೊತ್ತಿಲ್ಲದ ವಿಚಾರಗಳ ಬಗ್ಗೆ ಮೌನ ವಹಿಸುವುದು ಉತ್ತಮ, ಅರ್ಧಕ್ಕೆ ನಿಂತಿದ್ದ ಕೆಲಸ ಕಾರ್ಯಗಳಿಗೆ ಮರು ಚಾಲನೆ, ಮನೆಯವರೊಂದಿಗೆ ದೂರ ಪ್ರಯಾಣ, ಅನಿರೀಕ್ಷಿತವಾಗಿ ಸಾಧು-ಸಂತರ ಪುಣ್ಯಕ್ಷೇತ್ರಗಳ ದರ್ಶನ ಭಾಗ್ಯ ನಿಮ್ಮ ದಾಗಲಿದೆ. ಸಂಕಷ್ಟದಲ್ಲಿರುವ ಸೋದರನಿಗೆ ನೆರವು, ನ್ಯಾಯಾಲಯದ ವಾಣಿಜ್ಯ ವ್ಯಾಜ್ಯಗಳನ್ನು ರಾಜೀ-ಪಂಚಾಯ್ತಿಯೊಂದಿಗೆ ಪರಿಹರಿಸಿಕೊಳ್ಳಿ. ಹಿರಿಯರ ಅನಾರೋಗ್ಯ ಸಮಸ್ಯೆ ನಿಮ್ಮ ನೆಮ್ಮದಿ ಕೆಡಿಸಬಹುದು. ಅತಿಯಾದ ದೈಹಿಕ ಶ್ರಮ ಅಷ್ಟು ಒಳ್ಳೆಯದಲ್ಲ. ಬುಧ, ಶುಕ್ರ, ಶನಿವಾರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻ಕುಂಭ ರಾಶಿ 🌻
ಧನಿಷ್ಠಾ, ಶತಭಿಷಾ, ಪೂರ್ವಾಭಾದ್ರ 1,2,3 (ಗು.ಗೆ.ಗೊ.ಸ.ಸಿ.ಸು.ಸೆ.ಸೋ.ದ

ಮಕ್ಕಳ ಭವಿಷ್ಯದ ಬಗ್ಗೆ ಚಿಂತನೆ ಮಾಡುವಿರಿ . ಅಳಿಯನ ನಡುವಳಿಕೆ ಬಗ್ಗೆ ಗಂಭೀರ ಚಿಂತನೆ ಮಾಡುವಿರಿ. ವಿದೇಶದಿಂದ ಮಕ್ಕಳ ಆಗಮನ, ವಿದ್ಯಾರ್ಥಿಗಳು ತೋರುವ ಉದಾಸೀನತೆ ಅವರಿಗೆ ಮುಳುವಾಗಲಿದೆ. ಮತ್ತೊಬ್ಬರ ಮೇಲೆ ದ್ವೇಷ ಸಾಧಿಸಲು ಹೋದಲ್ಲಿ ನೀವೇ ಧನ-ಮಾನ ಎರಡನ್ನೂ ಕಳೆದುಕೊಳ್ಳಬೇಕಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳಿಗೆ ಚಾಲನೆ, ಮಡದಿ-ಮಕ್ಕಳಿಗಾಗಿ ಹೆಚ್ಚಿನ ಮೊತ್ತ ವ್ಯಯ, ಚಿಕ್ಕಮಕ್ಕಳಿಗೆ ಆಹಾರ ಸಂಬಂಧಿ ಅನಾರೋಗ್ಯ, ಆದಾಯದ ಮೂಲದಲ್ಲಿ ಹೆಚ್ಚಳ , ಲೇವಾದೇವಿ ವ್ಯವಹಾರದಲ್ಲಿ ಹೆಚ್ಚಿನ ಹೂಡಿಕೆ. ಸೋಮ, ಬುಧ, ಶನಿವಾರ ಶುಭ ದಿನಗಳು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

🌻 ಮೀನ ರಾಶಿ 🌻
ಪೂರ್ವಾಭಾದ್ರ 4, ಉತ್ತರಾಭಾದ್ರ, ರೇವತಿ (ದಿ.ದು.ಖ.ಝ.ಥ.ದೆ.ದೋ.ಖ.ಚ.ಚಿ.)

ಪತಿ-ಪತ್ನಿ ಸೇರಿ ಮನೆ ಕಟ್ಟುವ ವಿಚಾರ ಪ್ರಸ್ತಾಪ ಮಾಡುವಿರಿ. ಮಕ್ಕಳ ಮದುವೆ ಕಾರ್ಯ ಚಿಂತನೆ ಪ್ರಾರಂಭವಾಗಲಿದೆ. ನಿಮ್ಮಿಂದ ಏನನ್ನ ನಿರೀಕ್ಷಿಸುವ ಜನರು ನಿಮ್ಮನ್ನು ಹೊಗಳಿ ಹೊನ್ನ ಶೂಲಕ್ಕೇರಿಸುವ ಸಂಭವವಿದೆ. ಮತ್ತೊಬ್ಬರ ಆಪತ್ಕಾಲಕ್ಕೆ ಕೊಟ್ಟಿದ್ದ ಹಣ ನಿಮ್ಮ ಕಷ್ಟಕಾಲಕ್ಕೆ ಒದಗದೇ ಹೋದೀತು. ಹಿರಿಯರು ಕೊಡುವ ಅನುಭವಯುಕ್ತ ಸಲಹೆಗಳನ್ನು ಅಲಕ್ಷಿಸಬೇಡಿ. ದೂರದ ಪ್ರಯಾಣ ಮುಂದೂವುದು ಲೇಸು. ಹೊಸ ಯೋಜನೆಗಳಿಗೆ ಹಣಕಾಸಿನ ಮೂಲ ಕಂಡುಕೊಳ್ಳದೇ ಆರಂಭಿಸಬೇಡಿ. ಆರೋಗ್ಯದಲ್ಲಿ ಏರುಪೇರು, ಎಲ್ಲಾ ಕೆಲಸಗಳಿಗೆ ಬಂಧುಗಳ ಸಂಪೂರ್ಣ ಬೆಂಬಲ. ಭಾನು, ಗುರು, ಶುಕ್ರ ಶುಭ ದಿನಗಳು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಸೋಮಶೇಖರ್ ಪಂಡಿತ್B.Sc
Mob.No._93534 88403

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

Advertisement
Advertisement e
Advertisement
To Top