ಕೆಲವರು ರಾತ್ರಿ-ಹಗಲು ಕಷ್ಟಪಟ್ಟು ದುಡಿದರೂ ಕೂಡ ಆಸ್ತಿಪಾಸ್ತಿ ಕರಿದಿಸಲು ಅಸಾಧ್ಯ. ಕೆಲವರು ಸಾಕಷ್ಟು ಆಸ್ತಿಪಾಸ್ತಿ ಖರೀದಿಸುವರು. ಇದು ಹೇಗೆ ಸಾಧ್ಯ? ಈ ಪ್ರಶ್ನೆಗಳಿಗೆ ತಮಗೆ ಸಹಜವಾಗಿ ಕಾಡುತ್ತವೆ.ಜ್ಯೋತಿಷ್ಯಶಾಸ್ತ್ರದ ಪ್ರಕಾರ ತಮ್ಮ ಜನ್ಮ ಕುಂಡಲಿ ಪರೀಕ್ಷಿಸಬೇಕು.ಗ್ರಹಗಳ ಸ್ಥಾನ, ದೃಷ್ಟಿ ಇದನ್ನು ಪರೀಕ್ಷಿಸಿ ತಿಳಿಸಬೇಕು.
- ಜನ್ಮ ಜಾತಕದಲ್ಲಿ ಲಗ್ನದಿಂದ ನಾಲ್ಕನೇ ಮನೆ ಆಸ್ತಿ ಹಾಗೂ ಆರ್ಥಿಕ ಸ್ಥಿತಿಗತಿಯನ್ನು ತೋರಿಸುತ್ತದೆ. ಈ ಮನೆಯಲ್ಲಿ ಲಾಭದಾಯಕ ಗ್ರಹ ಹಾಗೂ
- ಶುಭ ಗ್ರಹಗಳು ಇದ್ದರೆ ಅವರು ಆಸ್ತಿ ಖರೀದಿಸುವ ಅವಕಾಶ ತುಂಬಾ ಇದೆ. ಅಷ್ಟೇ ಅಲ್ಲ ಆಸ್ತಿ ಸಂಸಾರದ ಜೊತೆ ಆನಂದಮಯವಾದ ಕುಟುಂಬ ನಡೆಸುತ್ತಾರೆ.
- ಲಗ್ನದಿಂದ ನಾಲ್ಕನೇ ಮನೆಯಲ್ಲಿ ಬುಧನಿದ್ದರೆ ವ್ಯಕ್ತಿ ಸುಂದರವಾದ ಮನೆಯನ್ನು ಹೊಂದುವನು.
- ಲಗ್ನದಿಂದ 4ನೇ ಸ್ಥಾನದಲ್ಲಿ ಚಂದ್ರಗ್ರಹ ಇದ್ದು ಉತ್ತಮ ಫಲ ನೀಡುತ್ತಿದ್ದರೆ ಹೊಸ ಮನೆ ಖರೀದಿಸುವ ಯೋಗ ಪ್ರಾಪ್ತಿ.
- ಲಗ್ನದಿಂದ ನಾಲ್ಕನೇ ಮನೆಯಲ್ಲಿ ಗುರು ಇದ್ದರೆ ಹೆಚ್ಚು ಲಾಭ ಭದ್ರವಾದ ಮನೆ ಪ್ರಾಪ್ತಿ.
- ಲಗ್ನದಿಂದ 4ನೇ ಸ್ಥಾನದಲ್ಲಿ ರವಿ ಮತ್ತು ಕೇತು ಇದ್ದರೆ ದುರ್ಬಲ ನಿವೇಶನ ಪ್ರಾಪ್ತಿ.
- ಲಗ್ನದಿಂದ 4ನೇ ಸ್ಥಾನದಲ್ಲಿ ಶನಿ ಅಥವಾ ರಾಹು ಇದ್ದರೆ ಹಳೆಯ ನಿವೇಶನ ಪ್ರಾಪ್ತಿ.
- ಲಗ್ನದಿಂದ ನಾಲ್ಕನೇ ಸ್ಥಾನದಲ್ಲಿ ಶುಕ್ರ ಇದ್ದರೆ ಸುಂದರವಾದ ಮನೆ ಪ್ರಾಪ್ತಿ.
- ಲಗ್ನದಿಂದ ನಾಲ್ಕನೇ ಮನೆಯಲ್ಲಿ ಮಂಗಳ ಇದ್ದರೆ ಮನೆ ಬೆಂಕಿಗಾಹುತಿ ಸಾಧ್ಯತೆ ಇದೆ.
- ಲಗ್ನದಿಂದ ನಾಲ್ಕನೇ ಮನೆಯಲ್ಲಿ ಚಂದ್ರ ಮತ್ತು ಶುಕ್ರ ಜೊತೆಯಾಗಿ ಇದ್ದರೆ ನೀವು ಕಾಂಪ್ಲೆಕ್ಸ್ ಅಂದರೆ ಬಹುಮಾಡಿ ಕಟ್ಟಡವನ್ನು ಖರೀದಿಸಬಹುದು ಅಥವಾ ಕಟ್ಟಬಹುದು.ಸೋಮಶೇಖರ್B.Sc
ಜಾತಕ ಬರೆಯುವುದು, ಜಾತಕ ವಿಶ್ಲೇಷಣೆಗಾರರು, ರಾಶಿ ಹರಳು ತಿಳಿಸುವುದು. ವಂಶಪಾರಂಪರಿಕ ಜ್ಯೋತಿಷ್ಯಶಾಸ್ತ್ರ, ವಾಸ್ತುಶಾಸ್ತ್ರ, ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.9353488403
ಜ್ಯೋತಿಷ್ಯಶಾಸ್ತ್ರದ ಪ್ರಕಾರ ರಾಜಯೋಗ ಪ್ರಾಪ್ತಿ ಅಥವಾ ಮಂತ್ರಿಸ್ಥಾನ ಪ್ರಾಪ್ತಿ ತಿಳಿಯೋಣ…..
ತಮ್ಮ ಜಾತಕ ನೋಡಿ (ಒಂದು ವೇಳೆ ಜಾತಕ ಇಲ್ಲದೆ ಹೋದರೆ ಹುಟ್ಟಿದ ದಿನಾಂಕ ಹಾಗೂ ಸಮಯ ತಿಳಿಸಿದರೆ ಜಾತಕ ಬರೆದು ಕಳುಹಿಸಲಾಗುವುದು) ಜಾತಕ ಆಧಾರ ಮೇಲೆ_ ರಾಶಿ ಹರಳು, ವಿದ್ಯೆ, ಉದ್ಯೋಗ, ಆರೋಗ್ಯ,ವಿವಾಹ, ಮದುವೆ ಸಾಲಾವಳಿ, ದಾಂಪತ್ಯ ಕಲಹ, ಅತ್ತೆ-ಸೊಸೆ ಕಿರಿಕಿರಿ, ಸಂತಾನಭಾಗ್ಯ, ಕುಟುಂಬ ವಿಚಾರ , ಪ್ರೇಮ ವಿವಾಹದ ಮಾಹಿತಿ, ವಿದೇಶ ಪ್ರವಾಸ, ಆಸ್ತಿ ಖರೀದಿ, ಮನೆ ಕಟ್ಟುವ ವಿಚಾರ ಮುಂತಾದ ಮಾರ್ಗದರ್ಶನಗಳು ತಿಳಿಸಲಾಗುವುದು.
ಸೋಮಶೇಖರ್B.Sc
ವಂಶಪಾರಂಪರಿತ ಜ್ಯೋತಿಷ್ಯರು, ವಾಸ್ತುಶಾಸ್ತ್ರ ಹಾಗೂ ಸಂಖ್ಯಾಶಾಸ್ತ್ರ ಪರಿಣಿತರು.
Mob.93534 88403
ನಿಮ್ಮ ಜನ್ಮಕುಂಡಲಿ ಪರೀಕ್ಷಿಸಿ.
ಮೇಷ ಲಗ್ನದಲ್ಲಿ ರವಿ ಇರಬೇಕು. ಗುರು ಮತ್ತು ಶುಕ್ರ ಮೀನ ರಾಶಿಯಲ್ಲಿರಬೇಕು. ಶನಿ ಉಚ್ಚರಾಶಿಲ್ಲಿ ಇರಬೇಕು. ಉಚ್ಚ ಪೂರ್ಣಚಂದ್ರನನ್ನು ಮಂಗಳ ನೋಡಬೇಕು. ಈ ಯೋಗದಲ್ಲಿ ಜನಿಸಿದರೆ, ರಾಜಯೋಗ ಪ್ರಾಪ್ತಿ. ಮಂತ್ರಿಸ್ಥಾನ ಪ್ರಾಪ್ತಿ. ಶ್ರೀಮಂತ ರಾಜಕಾರಣಿ ಪ್ರಾಪ್ತಿ. ಒಳ್ಳೆಯ ಜನಪ್ರತಿನಿಧಿ ಆಗುತ್ತಾನೆ. ಲಾಭಾಧಿಪತಿ ನವಮಾಧಿಪತಿ ಮತ್ತು ಧನಾಧಿಪತಿ ಇದರಲ್ಲಿ ಒಬ್ಬನೇ ಚಂದ್ರನು ಕೇಂದ್ರದಲ್ಲಿ ಇರಬೇಕು. ಗುರು ಪಂಚಮಾಧಿಪತಿ ಅಥವಾ ಲಾಭಾಧಿಪತಿ ಆಗಿರಬೇಕು. ಯೋಗದಲ್ಲಿ ಜನಿಸಿದರು ರಾಜನಾಗುತ್ತಾನೆ.