ಡಿವಿಜಿ ಸುದ್ದಿ, ಅಮರಾವತಿ: ಅತ್ಯಾಚಾರ ಎಸಗಿದ ಕಾಮುಕರಿಗೆ ಕೇವಲ 21 ದಿನಗಳಲ್ಲಿ ತೀರ್ಪು ನೀಡಿ, ಗಲ್ಲು ಶಿಕ್ಷೆ ವಿಧಿಸುವ ಮಹತ್ವದ ದಿಶಾ ಮಸೂದೆ ಆಂಧ್ರಪ್ರದೇಶ ವಿಧಾನಸಭೆಯಲ್ಲಿ ಅಂಗೀಕರವಾಗಿದೆ.
ಈಗಾಗಲೇ ಎರಡು ಸದಸನದಲ್ಲಿ ಪಾಸ್ ಆಗಿರುವ ಬಿಲ್ ರಾಜ್ಯಪಾಲರು ಅಂಕಿತ ಬಿದ್ದ ಬಳಿಕ ಕಾನೂನಾಗಿ ರೂಪುಗೊಳ್ಳಲಿದೆ. ಈ ಮೂಲಕ ಅತ್ಯಾಚಾರಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸುವ ಅವಕಾಶವನ್ನುಈ ಮಸೂದೆ ಒಳಗೊಂಡಿದೆ. ಪ್ರಕರಣ ಸಂಭವಿಸಿ ಕೇವಲ 21 ದಿನಗಳಲ್ಲಿ ತೀರ್ಪು ಪ್ರಕಟಿಸಿ, ಕಠಿಣ ಶಿಕ್ಷೆ ವಿಧಿಸುವ ಅವಕಾಶವಿದೆ. ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್ ಮೋಹನ ರೆಡ್ಡಿ ಅವರ ಸಚಿವ ಸಂಪುಟ ಈ ಮಸೂದೆಗೆ ಬುಧವಾರ ಒಪ್ಪಿಗೆ ನೀಡಿತ್ತು.
ತೆಲಂಗಾಣದ ಸೈಬರಾಬಾದ್‍ನಲ್ಲಿ ಪಶು ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ ಪ್ರಕರಣದ ಬೆನ್ನಲ್ಲೇ ಆಂಧ್ರಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದ್ದು, ಕಾಮುಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುಲು ಹೊಸ ಕಾನೂನು ರಚಿಸಿದೆ.
ಅತ್ಯಾಚಾರ ಹಾಗೂ ಆಸಿಡ್ ದಾಳಿಯಂತಹ ಪ್ರಕರಣಗಳು ನಡೆದಾಗ ನಿರ್ಣಾಯಕ ಸಾಕ್ಷ್ಯಾಧಾರಗಳಿದ್ದಲ್ಲಿ ಅಂತಹ ಪ್ರಕರಣಗಳನ್ನು 14 ದಿನಗಳಲ್ಲಿ ವಿಚಾರಣೆ ನಡೆಸಿ, 21 ದಿನಗಳಲ್ಲಿ ಶಿಕ್ಷೆ ನೀಡಬೇಕು ಎಂದು ಸದನದಲ್ಲಿ ಸಿಎಂ ಜಗನ್‍ಮೋಹನ ರೆಡ್ಡಿ ಹೇಳಿದ್ದಾರೆ.



