ದಾವಣಗೆರೆ: ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ದಿ ನಿಗಮದಿಂದ ಪ್ರಸಕ್ತ ಸಾಲಿನ ಸ್ವಯಂ ಉದ್ಯೋಗ ಯೋಜನೆಯಡಿಯಲ್ಲಿ ಸಂಚಾರಿ ಮಾರಾಟ ಮಳಿಗೆ ಪ್ರಾರಂಭಿಸಲು ಆಯ್ಕೆಯಾದ ಫಲಾನುವಿ ರಾಜು ನಾಗೇಂದ್ರ ಗರಗ್ ಇವರಿಗೆ ಗಣಿ ಭೂ ವಿಜ್ಞಾನ, ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್ ಮಲ್ಲಿಕಾರ್ಜುನ್‍ನವರು ತಮ್ಮ ಗೃಹ ಕಚೇರಿಯಲ್ಲಿ ವಾಹನ ಕೀ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಕೇಂದ್ರ ಕಚೇರಿಯ ಪ್ರಧಾನ ವ್ಯವಸ್ಥಾಪಕರಾದ ಎ.ಎಸ್ ರುದ್ರೇಶಿ, ಜಿಲ್ಲಾ ಸಂಯೋಜಕರಾದ ವೆಂಕಟೇಶ್, ಎಸ್ ನಾಗರಾಜು, ಫಕ್ಕೀರಪ್ಪ ಬೆಟಗೇರಿ, ಕಾರ್ಯದರ್ಶಿ ಬಾಬುಮಾನೆ, ಯಲ್ಲಪ್ಪ ನೌಕರಿ, ರವಿ ಗಾಮನಕಟ್ಟೆ, ಗಣೇಶಮಾನ, ಆನಂದ್ ತೇರದಾಳ್ ಹಾಗೂ ಮತ್ತಿತರು ಉಪಸ್ಥಿತರಿದ್ದರು.



