ಬೆಂಗಳೂರು: ಸಿಎಂ ಬಸವರಾಜ ಬೊಮ್ಮಾಯಿ ಅವರು ಮಹಿಳೆಯರನ್ನು ಕೇಂದ್ರಿಕರಿಸಿ ಬಜೆಟ್ ಮಂಡಿಸಿದ್ದು, ಗೃಹಿಣಿ ಶಕ್ತಿ ಮೂಲಕ ಮಹಿಳೆಯರಿಗೆ ಸಹಾಯಧನವನ್ನು ಘೋಷಣೆ ಮಾಡಿದ್ದಾರೆ. ಈ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರಿಗೆ 500 ರೂ ಸಹಾಯಧನವನ್ನು ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್ ನ ಗೃಹ ಲಕ್ಷ್ಮಿ ಯೋಜನೆಗೆ ಕೌಂಟರ್ ನೀಡಿದ್ದಾರೆ.
ಜನನಿಬಿಡ ಪ್ರದೇಶಗಳಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಸುಸಜ್ಜಿತ She Toilet ನಿರ್ಮಾಣ. ಅಂಗನವಾಡಿ, ಆಶಾ ಕಾರ್ಯಕರ್ತೆಯರ ಸಹಾಯಧನ 1000 ರೂ. ನಿಂದ 1500 ರೂ.ಗೆ ಏರಿಕೆ ಮಾಡುವುದಾಗಿ ತಿಳಿಸಿದ್ದಾರೆ. ಬಸವರಾಜ ಬೊಮ್ಮಾಯಿ ಮಂಡಿಸಿರುವ ಬಜೆಟ್‌ನಲ್ಲಿ ‘ಗೃಹಿಣಿ ಶಕ್ತಿ’ ಯೋಜನೆಯು ಸದ್ದು ಮಾಡುತ್ತಿದೆ. ಪ್ರತಿ ತಿಂಗಳಿಗೆ ಮಹಿಳೆಯರಿಗೆ ಐದು ನೂರು ರೂಪಾಯಿ ಕೊಡುವುದಾಗಿ ಬೊಮ್ಮಾಯಿ ಘೋಷಿಸಿದ್ದಾರೆ. ಇದು ಕಾಂಗ್ರೆಸ್‌ನ ‘ಗೃಹಲಕ್ಷ್ಮಿ’ ಯೋಜನೆಗೆ ಕೌಂಟರ್ ನೀಡುವ ಸಲುವಾಗಿ ಬೊಮ್ಮಾಯಿ ಘೋಷಿಸಿದ್ದಾರೆ ಎನ್ನಲಾಗುತ್ತಿದೆ. ಮಹಿಳೆಯರ ಮತಗಳನ್ನು ಸೆಳೆಯಲು ಎರಡೂ ಪಕ್ಷಗಳು ಈ ಮೂಲಕ ಪೈಪೋಟಿ ಇಳಿದಿವೆ.



