Connect with us

Dvgsuddi Kannada | online news portal | Kannada news online

7ನೇ ವೇತನ ಆಯೋಗ ಜಾರಿ ಖಚಿತ; ಈ ವರ್ಷವೇ ಆಯೋಗದ ವರದಿ ಅನುಷ್ಠಾನ: ಬಜೆಟ್ ಮಂಡನೆ ಬಳಿಕ ಸಿಎಂ ಹೇಳಿಕೆ

ಪ್ರಮುಖ ಸುದ್ದಿ

7ನೇ ವೇತನ ಆಯೋಗ ಜಾರಿ ಖಚಿತ; ಈ ವರ್ಷವೇ ಆಯೋಗದ ವರದಿ ಅನುಷ್ಠಾನ: ಬಜೆಟ್ ಮಂಡನೆ ಬಳಿಕ ಸಿಎಂ ಹೇಳಿಕೆ

ಬೆಂಗಳೂರು: 7 ನೇ ವೇತನ ಆಯೋಗದ ಬಗ್ಗೆ ಬಜೆಟ್ ನಲ್ಲಿ ಪ್ರಸ್ತಾಪಿಸದಕ್ಕೆ  ಸರ್ಕಾರಿ ನೌಕರರ ಸಂಘ ತೀವ್ರ ಬೇಸರ ವ್ಯಕ್ತಪಡಿಸಿದ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆ ಕುರಿತ ಮಾತನಾಡಿದ್ದಾರೆ. ಬಜೆಟ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 7ನೇ ವೇತನ ಆಯೋಗ ಜಾರಿ ಖಚಿತವಾಗಿದ್ದು, ಈ ವರ್ಷವೇ 7ನೇ ವೇತನ ಆಯೋಗದ ವರದಿ ಅನುಷ್ಠಾನಕ್ಕೆ ಬರಲಿದೆ ಎಂದು ಭರವಸೆ ನೀಡಿದರು.

ಏಳನೇ ವೇತನ ಆಯೋಗದ ಅನುಷ್ಠಾನದ ಕುರಿತು ಬಜೆಟ್​​ನಲ್ಲಿ ಆ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ತೀವ್ರ ಬೇಸರ ವ್ಯಕ್ತಪಡಿಸಿದ್ದರು. ಇದಕ್ಕೆ  ಸಿಎಂ ಪ್ರತಿಕ್ರಿಯಿಸಿದ್ದು, ಏಳನೇ ವೇತನ ಆಯೋಗದ ವರದಿ ಶೀಘ್ರವೇ ಬರಲಿದೆ. ಈ ವರ್ಷದ ಬಜೆಟ್‌ನಲ್ಲಿ‌ 6 ಸಾವಿರ ಕೋಟಿ ರೂ. ಮೀಸಲಿಟ್ಟಿದ್ದು, ಈ ವರ್ಷವೇ 7ನೇ ವೇತನ ಆಯೋಗದ ವರದಿ ಅನುಷ್ಠಾನ ಮಾಡುತ್ತೇವೆ.  ಚುನಾವಣೆ ಇದೆ ಎಂದು ನಾನು ಕೂಡ ಬೇಜಾವಾಬ್ದಾರಿಯಿಂದ ಘೋಷಣೆಗಳನ್ನು ಮಾಡಬಹುದಿತ್ತು. ಮಹಿಳೆಯರಿಗೆ ಇಷ್ಟು ಕೊಡುತ್ತೇವೆ, ಅಷ್ಟು ಕೊಡುತ್ತೇವೆ ಎಂದೂ ಹೇಳಬಹುದಿತ್ತು. ಆದರೆ ‌ ನಮ್ಮದು‌ ಜವಾಬ್ದಾರಿಯುತ ಸರ್ಕಾರ ಎಂದರು.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top