Connect with us

Dvgsuddi Kannada | online news portal | Kannada news online

ಕಿವಿಗೆ ಚೆಂಡು ಹೂ ಇಟ್ಟುಕೊಂಡು ಬಜೆಟ್ ಆಲಿಸಿದ ಡಿಕೆಶಿ, ಸಿದ್ದರಾಮಯ್ಯ;  ಧಮ್ ಇಲ್ಲದ ಬಜೆಟ್ ಎಂದು ಟೀಕೆ

ಪ್ರಮುಖ ಸುದ್ದಿ

ಕಿವಿಗೆ ಚೆಂಡು ಹೂ ಇಟ್ಟುಕೊಂಡು ಬಜೆಟ್ ಆಲಿಸಿದ ಡಿಕೆಶಿ, ಸಿದ್ದರಾಮಯ್ಯ;  ಧಮ್ ಇಲ್ಲದ ಬಜೆಟ್ ಎಂದು ಟೀಕೆ

ಬೆಂಗಳೂರು: ಕಿವಿಗೆ ಚೆಂಡು ಹೂ ಇಟ್ಟುಕೊಂಡು ಬಜೆಟ್ ಆಲಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆ ಶಿವಕುಮಾರ, ಇದೊಂದು  ಧಮ್ ಇಲ್ಲದ ಬಜೆಟ್ ಎಂದು ಟೀಕಿಸಿದ್ದಾರೆ.

ಕಳೆದ ಬಾರಿ ಮಂಡಿಸಿದ್ದ ಬಜೆಟ್​ನಲ್ಲಿ ಏನು ಮಾಡಿದ್ರಿ ಎಂದು ಕೇಳಿದ್ದೆವು. ಈ ಪ್ರಶ್ನೆಗೆ ಇನ್ನೂ ಉತ್ತರ ಬಂದಿಲ್ಲ. 90% ಆಶ್ವಾಸನೆಯನ್ನು ಈವರೆಗೆ ಈಡೇರಿಸಿಲ್ಲ. ಜನರ ಕಿವಿಗೆ ಚೆಂಡು ಹೂ ಇಟ್ಟಿದ್ದಾರೆ. ಇದು ಇದು ಬಿಸಿಲ‌ ಕುದುರೆ ಬಜೆಟ್ ಎಂದು ಕೆಪಿಸಿಸಿ ರಾಜ್ಯಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.  ಸಿಎಂ ಬೊಮ್ಮಾಯಿ ಮಂಡಿಸಿರುವ ರಾಜ್ಯ ಬಜೆಟ್ ಪ್ರತಿಕ್ರಿಯಿಸಿದ ಡಿಕೆಶಿ, ಜಿಎಸ್‌ಟಿ‌ ಹಣದಲ್ಲಿ 15% ಹಣ ಕೂಡ‌ ರಾಜ್ಯಕ್ಕೆ ಬರುವುದಿಲ್ಲ. ಈ‌ ಬಾರಿಯ ಬಜೆಟ್​ನ್ನು ಜಾತ್ರೆಯ ಕನ್ನಡಕ‌ ಹಾಕಿಕೊಂಡು ನೋಡಬೇಕು. ಧಮ್ ಧೈರ್ಯ ಅಂತ ಭಾಷ‌ಣ ಮಾಡುವ ಸಿಎಂ ಭಾಷಣದಲ್ಲಿ ಧಮ್ ಇರಲಿಲ್ಲ ಎಂದು ಕಿಡಿಕಾರಿದರು.

ಬೊಮ್ಮಾಯಿ ಅವರು ಬಿಜೆಪಿ ಎಂಎಲ್​ಎ‌ ಕ್ಷೇತ್ರಗಳಿಗೆ ಬಜೆಟ್​ನಲ್ಲಿ ಹೆಚ್ಚಿನ ಪ್ರಾಶಸ್ತ್ಯ ಕೊಟ್ಟಿದ್ದಾರೆ. ಮಹಾದಾಯಿ, ಕೃಷ್ಣಾಗೆ ಯಾವುದೇ ವಿಶೇಷ ಕೊಡುಗೆ ನೀಡಿಲ್ಲ. ಈ ಮೂಲಕ ಡಬಲ್ ಇಂಜಿನ್ ಆಫ್ ಆಗಿದೆ. ಮನೆಯ ಶೋಕೇಸ್​​ನಲ್ಲಿ ಪ್ರದರ್ಶನಕ್ಕೆ ಇಟ್ಟುವಂತಹ ಬಜೆಟ್ ಇದಾಗಿದೆ. ಈ ಬಜೆಟ್​​ನಿಂದ ಕಾಂಗ್ರೆಸ್​ಗೆ ಇನ್ನಷ್ಟು ಶಕ್ತಿ ಬರಲಿದೆ ಎಂದರು.

 

Continue Reading
Advertisement
You may also like...

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top