Connect with us

Dvgsuddi Kannada | online news portal | Kannada news online

ಬಜೆಟ್ ಕೇವಲ ಲೆಕ್ಕಪತ್ರದ ಪುಸ್ತಕ; ದಾವಣಗೆರೆಗೆ ಮೆಕ್ಕೆಜೋಳ ಸಂಸ್ಕರಣೆ ಘಟಕ ಸ್ಥಾಪನೆ ನಿರೀಕ್ಷೆ ಹುಸಿ: ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಕಿಡಿ

ದಾವಣಗೆರೆ

ಬಜೆಟ್ ಕೇವಲ ಲೆಕ್ಕಪತ್ರದ ಪುಸ್ತಕ; ದಾವಣಗೆರೆಗೆ ಮೆಕ್ಕೆಜೋಳ ಸಂಸ್ಕರಣೆ ಘಟಕ ಸ್ಥಾಪನೆ ನಿರೀಕ್ಷೆ ಹುಸಿ: ಶಾಮನೂರು ಶಿವಶಂಕರಪ್ಪ, ಮಲ್ಲಿಕಾರ್ಜುನ ಕಿಡಿ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ  ಮಂಡಿಸಿದ ಬಜೆಟ್ ಕೇವಲ ಲೆಕ್ಕ ಪತ್ರದ ಪುಸ್ತಕದಂತಿದ್ದು, ಬಡವರು,ಯುವಕರು, ಮಹಿಳೆಯರು ಮತ್ತು ಕಾರ್ಮಿಕರಿಗೆ ಯಾವುದೇ ನೆರವು ನೀಡದೆ ಬಿಜೆಪಿ ಸುಳ್ಳಿನ ಪಕ್ಷ ಎಂಬುದನ್ನು ಸಾಬೀತು ಮಾಡಿದಂತಿದೆ. ದಾವಣಗೆರೆಗೆ ಮೆಕ್ಕೆಜೋಳ ಸಂಸ್ಕರಣೆ ಘಟಕ ಸ್ಥಾಪನೆ ನಿರೀಕ್ಷೆ  ಮತ್ತೊಮ್ಮೆ ಹುಸಿಯಾಗಿದೆ  ಎಂದು ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಮಾಜಿ ಸಚಿವ ಎಸ್ .ಎಸ್. ಮಲ್ಲಿಕಾರ್ಜುನ ಕಿಡಿಕಾರಿದ್ದಾರೆ.

ಬಜೆಟ್ ಅಂದರೆ ಮುಂದಿನ ವರ್ಷದ ರಾಜ್ಯದ ಅಭಿವೃದ್ಧಿ ಎಂಬಂತಿರಬೇಕು. ಆದರೆ,  ಈ ಬಜೆಟ್ ಕೇವಲ ಖರ್ಚು ವೆಚ್ಚಕ್ಕೆ ಸೀಮಿತಗೊಳಿಸಿದಂತಿದೆ.   ಬಡವರು ಮತ್ತು ಕಾರ್ಮಿಕರು ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಈ ಬಜೆಟ್ ನಲ್ಲಿ ಯಾವುದೇ ವರ್ಗಕ್ಕೂ ಏನನ್ನು ಸೌಲಭ್ಯ ನೀಡದೆ, ರಾಜ್ಯ ಜನತೆಗೆ ದ್ರೋಹ ಬಗೆಯಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ ಮೆಕ್ಕೆಜೋಳ ಸಂಸ್ಕರಣೆ ಘಟಕ ಸೇರಿದಂತೆ ವಿವಿಧ ಅಭಿವೃದ್ಧಿ ಕೆಲಸಗಳು ಇದ್ದು ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದರು ಯಾವುದೇ ಉಪಯೋಗ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ಎರಡು ಮೂರು ತಿಂಗಳಿಂದ ಬೆಂಗಳೂರಿನಲ್ಲಿ ರಾಜ್ಯದ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದು ಅವರ ಯಾವುದೇ ಬೇಡಿಕೆಗಳನ್ನು ಬಜೆಟ್ ನಲ್ಲಿ ಈಡೇರಿಸಿಲ್ಲ. ಅಲ್ಲದೆ ಓಪಿಎಸ್ ಪಿಂಚಣಿ ಬಗ್ಗೆಯೂ ಬಜೆಟ್ ನಲ್ಲಿ ಪ್ರಸ್ತಾಪಿಸದ,  ಸರ್ಕಾರಿ ನೌಕರರನ್ನು ವಂಚಿಸಲಾಗಿದೆ ಎಂದು ಆರೋಪಿಸಿದ್ದಾರೆ. ಇಂಥ ಜನ ವಿರೋಧಿ ಬಜೆಟ್ ಕೇವಲ ಬಿಜೆಪಿಯಿಂದ ಮಾತ್ರ ನೀಡಲು ಸಾಧ್ಯ ಎಂದು ಲೇವಡಿ ಮಾಡಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top