ವಿಜಯಪುರ: ರಾಜ್ಯದಲ್ಲಿ 1.12 ಲಕ್ಷ ಎಕರೆ ವಕ್ಫ್ ಆಸ್ತಿ ಇದೆ. ಇದರಲ್ಲಿ ಒಂದಿಂಚು ಸರ್ಕಾರ ಕೊಟ್ಟಿದಲ್ಲ. ಇದು ದಾನಿಗಳು ನೀಡಿದ ಜಮೀನು. ಈ ಜಮೀನಲ್ಲಿ 80 ಸಾವಿರ ಎಕರೆ ಇತ್ತುವರಿಯಾಗಿದ್ದು, ಕೇವಲ 33 ಸಾವಿರ ಎಕರೆ ವಕ್ಫ್ ಬೋರ್ಡ್ ಕೈಯಲ್ಲಿದೆ ಎಂದು ವಕ್ಫ್ ಸಚಿವ ಜಮೀರ್ ಅಹ್ಮದ್‌ಖಾನ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿ, ವಿಜಯಪುರದ ಹೊನವಾಡದಲ್ಲಿ 11ಎಕರೆ ಮಾತ್ರ ವಕ್ಫ್ ಆಸ್ತಿ ಇದೆ. ಯಾರಿಗೂ ನೋಟಿಸ್ ನೀಡಿಲ್ಲ. ರೈತರಿಗೆ ತೊಂದರೆ ಕೊಡಬೇಕು ಎಂಬ ಉದ್ದೇಶವಿಲ್ಲ. ರೈತರು ಆತಂಕ ಪಡುವುದು ಬೇಡ, ರೈತರಿಗೆ ತೊಂದರೆ ಆಗಲ್ಲ.ರೈತರಿಗೆ ನೀಡಿದ ಎಲ್ಲ ನೋಟಿಸ್ ವಾಪಸ್ ಪಡೆಯುತ್ತಿದ್ದೇವೆ. ಈ ಹಿಂದೆ ಬಿಜೆಪಿ ಸರ್ಕಾದಲ್ಲೂ ವಕ್ಫ್ ನೋಟಿಸ್ ನೀಡಲಾಗಿತ್ತು ಎಂದರು.
- ರಾಜ್ಯದಲ್ಲಿ 1.12 ಲಕ್ಷ ಎಕರೆ ವಕ್ಫ್ ಆಸ್ತಿ
- 80 ಸಾವಿರ ಎಕರೆ ಒತ್ತುವರಿ
- ಒಂದಿಂಚು ಸರ್ಕಾರ ಕೊಟ್ಟ ಆಸ್ತಿಯಲ್ಲ
- ಇದು ದಾನಿಗಳು ಕೊಟ್ಟ ಆಸ್ತಿ
- ವಕ್ಫ್ ನೋಟಿಸ್ ವಾಪಸ್
- ಬಿಜೆಪಿ ಸರ್ಕಾದಲ್ಲೂ ವಕ್ಫ್ ನೋಟಿಸ್
ದಾನಿಗಳು ಕೊಟ್ಟ ಆಸ್ತಿ; ಅಲ್ಲಾನ ಆಸ್ತಿ ಎಲ್ಲಿಂದ ಬಂತು ಎಂಬ ಕೇಂದ್ರ ಸಚಿವ ಜೋಶಿ ಕೇಳಿದ್ದಾರೆ. ವಕ್ಫ್ ಎಂದರೆ ಅಲ್ಲಾನ ಆಸ್ತಿ ಎನ್ನುತ್ತೇವೆ. ಇದು ಜೋಶಿ ಕೊಟ್ಟ ಆಸ್ತಿಯೇನಲ್ಲ, ಸರ್ಕಾರದಿಂದ ಕೊಟ್ಟ ಆಸ್ತಿಯೂ ಅಲ್ಲ. ಇದು ದಾನಿಗಳು ದಾನ ಮಾಡಿರುವ ಆಸ್ತಿಯಾಗಿದೆ.ವಕ್ಫ್ ವಿಚಾರದಲ್ಲಿ ಬಿಜೆಪಿಯವರು ಅನಾವಶ್ಯಕವಾಗಿ ಗೊಂದಲ ಸೃಷ್ಟಿ ಮಾಡಿದ್ದಾರೆ. ಬಿಜೆಪಿಯವರಿಗೆ ಬೇರೆ ಯಾವುದೇ ವಿಷಯವಿಲ್ಲ. ಮುಡಾ ಹೋಯ್ತು ಈಗ ವಕ್ಫ್ ಬಂದಿದೆ. ಮುಡಾದಲ್ಲಿ ಏನಿಲ್ಲ ಎಂದು ಗೊತ್ತಾಯ್ತು, ಈಗ ವಕ್ಫ್ ಹಿಡಿದುಕೊಂಡಿದ್ದಾರೆ ಎಂದರು.



