Connect with us

Dvgsuddi Kannada | online news portal | Kannada news online

ವಿಜಯನಗರ ವಿಶ್ವ ವಿದ್ಯಾಲಯದಲ್ಲಿ 100 ಬೋಧಕ, ಬೋಧಕೇತರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ದಾವಣಗೆರೆ

ವಿಜಯನಗರ ವಿಶ್ವ ವಿದ್ಯಾಲಯದಲ್ಲಿ 100 ಬೋಧಕ, ಬೋಧಕೇತರ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

ಬಳ್ಳಾರಿ:  ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಹಾಗೂ ವಿವಿಧ  ಸ್ನಾತಕೋತ್ತರ ಕೇಂದ್ರಗಳಲ್ಲಿ ಬೋಧಕ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಯುಜಿಸಿ ನಿಯಮಾನುಸಾರ ಪೂರ್ಣಕಾಲಿಕ/ ಅರೆಕಾಲಿಕ ಅತಿಥಿ ಉಪನ್ಯಾಸಕ, ಗ್ರಂಥಪಾಲಕ ಹಾಗೂ ಕ್ರೀಡಾ, ದೈಹಿಕ ಹಾಗೂ ಸಾಂಸತಿಕ ಶಿಕ್ಷಣ ವಿಭಾಗದಲ್ಲಿ ಸಹಾಯಾಕ ಕ್ರೀಡಾ ನಿರ್ದೇಶಕರ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಆಹ್ವಾನಿಸಲಾಗಿದೆ.

ಈ ಹುದ್ದೆಗಳು  ತಾತ್ಕಾಲಿಕವಾಗಿದ್ದು, 2021-22ನೇ ಶೈಕ್ಷಣಿಕ ಸಾಲಿಗೆ ಮಾತ್ರ ಸೀಮಿತವಾಗಿರುತ್ತದೆ. ಎಲ್ಲ ಸ್ನಾತಕೋತ್ತರ ಅಂತಿಮ ವರ್ಷದ ವಿದ್ಯಾಥಿರ್ಗಳು ಅರ್ಜಿ ಸಲ್ಲಿಸಬಹುದು. ನಂದಿಹಳ್ಳಿ , ಕೊಪ್ಪಳ, ಯುಲಬುರ್ಗಾದಲ್ಲಿರುವ ಸ್ನಾತಕೋತ್ತರ ಕೇಂದ್ರಗಳಲ್ಲಿ ನೇಮಕ ಮಾಡಿಕೊಳ್ಳಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳು ಯಾವುದೇ ಕೇಂದ್ರದಲ್ಲಾದರೂ ಸೇವೆ ಸಲ್ಲಿಸಲು ಸಿದ್ಧರಿರಬೇಕು.

ಹುದ್ದೆಗಳು:  ಕನ್ನಡ ಅಧ್ಯಯನ ವಿಭಾಗ – 11, ಇಂಗ್ಲಿಷ್​ -1 ,  ಪ್ರದರ್ಶನ ನಾಟಕ – 3, ವಾಣಿಜ್ಯಶಾಸ್ತ್ರ – 8, ಇತಿಹಾಸ ಮತ್ತು ಪುರಾತತ್ವ – 9, ಅರ್ಥಶಾಸ್ತ್ರ – 4, ರಾಜ್ಯಶಾಸ್ತ್ರ – 6, ಸಮಾಜಕಾರ್ಯ – 5, ಸಮೂಹ ಮಾಧ್ಯಮ ಮತ್ತು ಪತ್ರಿಕೋದ್ಯಮ ವಿಭಾಗ – 5, ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ – 2, ಮಹಿಳಾ ಅಧ್ಯಯನ ವಿಭಾಗ – 2,  ರಸಾಯನಶಾಸ್ತ್ರ/ ಔದ್ಯೋಗಿಕ ರಸಾಯನಶಾಸ್ತ್ರ – 11, ಭೌತಶಾಸ್ತ್ರ – 5, ಪ್ರಾಣಿಶಾಸ್ತ್ರ – 1,  ಗಣಿತಶಾಸ್ತ್ರ – 2,   ಸಸ್ಯಶಾಸ್ತ್ರ – 2,  ಗಣಕಯಂತ್ರ – 4, ಜೈವಿಕ ತಂತ್ರಜ್ಞಾನ – 3, ಸೂಕ್ಷ್ಮ ಜೀವಶಾಸ್ತ್ರ – 3, ಖನಿಜ ಸಂಸ್ಕರಣ ಅಧ್ಯಯನ ವಿಭಾಗ – 5,  ಕಾನೂನು – 1,  ಶಿಕ್ಷಣ ವಿಭಾಗ – 1, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗ – 4,  ಅನ್ವಯಿಕ ಭೂ ವಿಜ್ಞಾನ – 2, ಸಹಾಯಕ ಗ್ರಂಥಪಾಲಕ – 6, ಸಹಾಯಕ ಕ್ರೀಡಾ ನಿರ್ದೇಶಕ – 2 ಒಟ್ಟು 100 ಹುದ್ದೆಗಳು.

ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ, ಎಸ್ಸಿ, ಎಸ್ಟಿ, ಪ್ರವರ್ಗ 1 ಅಭ್ಯರ್ಥಿಗಳಿಗೆ 250 ರೂ. ಅರ್ಜಿ ಶುಲ್ಕ ನಿಗದಿಯಾಗಿದ್ದು, ಡಿಡಿ ಮೂಲಕ ಪಾವತಿಸತಕ್ಕದ್ದು. ಸರ್ಕಾರದ ನಿಯಮಾವಳಿ ಅನ್ವಯ ಅರ್ಹತೆ (ಮೆರಿಟ್​) ಹಾಗೂ ಮೀಸಲಾತಿ ಆಧಾರದ ಮೇಲೆ ಮಾಡಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ: ಆಸಕ್ತ ಅಭ್ಯರ್ಥಿಗಳು ವೆಬ್​ಸೈಟ್​ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿ ನಮೂನೆಯನ್ನು ಡೌನ್​ಲೋಡ್​ ಮಾಡಿಕೊಂಡು ಭತಿರ್ ಮಾಡಿದ ಅರ್ಜಿ ಜತೆ ಶೈಕ್ಷಣಿಕ ಅರ್ಹತೆ, ವೃತ್ತಿ ಅನುಭವ ವಿವರ, ಜಾತಿ, ವರ್ಗ ಪ್ರಮಾಣ ಪತ್ರಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಗೆಜೆಟೆಡ್​ ಅಧಿಕಾರಿಯಿಂದ ದೃಢೀಕರಿಸಿದ ಪ್ರತಿ, ಅರ್ಜಿ ಶುಲ್ಕ ಪಾವತಿಸ ದಾಖಲೆಯನ್ನು ಸೇರಿಸಿ ಖುದ್ದಾಗಿ/ ರಿಜಿಸ್ಟರ್ಡ್​ ಅಂಚೆ ಮೂಲಕ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ, ‘ಜ್ಞಾನ ಸಾಗರ’ ಆವರಣ, ವಿನಾಯಕ ನಗರ, ಕಂಟೋನ್ಮೆಂಟ್​, ಬಳ್ಳಾರಿ- 583 105 ವಿಳಾಸಕ್ಕೆ ಕಳುಹಿಸಬೇಕು. ಅರ್ಜಿ ಸಲ್ಲಿಸಲು ಅ.16 ಕೊನೇ ದಿನವಾಗಿದೆ.  ಹೆಚ್ಚಿನ ಮಾಹಿತಿಗೆ: http://vskub.ac.in/ ಸಂಪರ್ಕಿಸಿ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top