ಅಬುಧಾಬಿ: ಈ ಬಾರಿಯ ಐಪಿಎಲ್ ನಲ್ಲಿ ಪಂಜಾಬ್ ಕಿಂಗ್ಸ್ ಇಲೆವೆನ್ಸ್ ತಂಡದ ಸೋಲಿನ ಸರಣಿ ಮುಂದುವರೆದಿದ್ದು, ಇಂದು ನಡೆದ ವೀಕೆಂಡ್ ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕೊನೆಯ ಕ್ಷಣದಲ್ಲಿ ರೋಚಕ ಜಯ ದಾಖಲಿಸಿತು.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಕೋಲ್ಕತ್ತಾ ತಂಡ ನಾಯಕ ದಿನೇಶ್ ಕಾರ್ತಿಕ್ ಭರ್ಜರಿ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರಿನಲ್ಲಿ 164 ರನ್ ಸವಾಲು ನೀಡಿತು. ಈ ಮೊತ್ತವನ್ನು ಬೆನ್ನಟ್ಟಿದ ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಕ್ಕಿತಾದರೂ, ಪಂಜಾಬ್ ನ ಮಧ್ಯಮ ಕ್ರಮಾಂಕದ ವೈಫ್ಲಯದಿಂದ ಜಯ ಕೈ ಜಾರಿತು.
What a win this for @KKRiders. They win by 2 runs and register another win in #Dream11IPL #KXIPvKKR pic.twitter.com/hdNC5pHenc
— IndianPremierLeague (@IPL) October 10, 2020
ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಮೊದಲ ವಿಕೆಟಿಗೆ 116 ರನ್‍ಗಳ ಜೊತೆಯಾಟವಾಡಿದರು. ಆದರೆ ಕೊನೆಯ ಮೂರು ಓವರಿನಲ್ಲಿ ರನ್ ಕಲೆಹಾಕಲು ಎಡವಿದ ಪಂಜಾಬ್ ಕೇವಲ ಎರಡು ರನ್ ಅಂತರದಲ್ಲಿ ಸೋತಿದೆ.
ಉತ್ತಮ ಆರಂಭ ಪಡೆದ ಪಂಜಾಬ್ ತಂಡ 17ನೇ ಓವರ್ ಮುಕ್ತಾಯಕ್ಕೆ 143 ಗಳಿಸಿ ಎರಡು ವಿಕೆಟ್ ಕಳೆದುಕೊಂಡು ಉತ್ತಮ ಸ್ಥಿತಿಯಲ್ಲಿತ್ತು. ಆದರೆ 18ನೇ ಓವರ್ ಬೌಲಿಂಗ್ ಮಾಡಲು ಬಂದ ನರೈನ್ ಅವರು ಆ ಓವರಿನಲ್ಲಿ ಕೇವಲ ಎರಡು ರನ್ ಕೊಟ್ಟು ಒಂದು ವಿಕೆಟ್ ಕಿತ್ತರು. ನಂತರ 19ನೇ ಓವರ್ ಬೌಲ್ ಮಾಡಿದ ಕನ್ನಡಿಗ ಪ್ರಸೀದ್ ಕೃಷ್ಣ ಕೇವಲ 6 ರನ್ ಕೊಟ್ಟು ನಾಯಕ ರಾಹುಲ್ ವಿಕೆಟ್ ಸೇರಿ ಎರಡು ವಿಕೆಟ್ ಕಿತ್ತರು. ನಂತರ ಕೊನೆಯ ಓವರಿಗೆ ಪಂಜಾಬಿಗೆ 14 ರನ್ ಬೇಕಿತ್ತು. ಆಗ ಬೌಲಿಂಗ್ ದಾಳಿಗಿಳಿದ ನರೈನ್ 11 ರನ್ ನೀಡಿ ಒಂದು ವಿಕೆಟ್ ಪಡೆದು ಕೋಲ್ಕತ್ತಾ ತಂಡಕ್ಕೆ ಜಯ ತಂದುಕೊಟ್ಟರು.
ಪಂಜಾಬ್ ಆರಂಭಿಕರಾದ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರು ಮೊದಲಿಗೆ ತಾಳ್ಮೆಯಿಂದ ರನ್ ಕಲೆಹಾಕಿದರು. ರಾಹುಲ್ ಅಗರ್ವಾಲ್ ಜೋಡಿ 12 ಓವರ್ ಮುಕ್ತಾಯಕ್ಕೆ 94 ರನ್ ಸೇರಿಸಿತು. ಈ ನಡುವೆ 43 ಬಾಲಿಗೆ ನಾಯಕ ರಾಹುಲ್ ಅವರು ಅರ್ಧಶತಕ ಸಿಡಿಸಿ ಮಿಂಚಿದರು. ಇವರಿಗೆ ಉತ್ತಮ ಸಾಥ್ ಕೊಟ್ಟ ಮಯಾಂಕ್ ಅಗರ್ವಾಲ್ ಅವರು 33 ಬಾಲಿನಲ್ಲಿ ಅರ್ಧಶತಕ ಸಿಡಿಸಿ ಮಿಂಚಿದರು. ಇದರ ಜೊತೆಗೆ 73 ಬಾಲಿಗೆ ಈ ಜೋಡಿ ಶತಕ ಜೊತೆಯಾಟವಾಡಿತು.
ಆದರೆ 14ನೇ ಓವರಿನ 2ನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿದ ಮಯಾಂಕ್ ಅಗರ್ವಾಲ್ ಅವರು 39 ಬಾಲಿಗೆ ಒಂದು ಸಿಕ್ಸರ್ ಮತ್ತು ಆರು ಫೋರ್ ಗಳ ಸಹಾಯದಿಂದ 56 ರನ್ ಸಿಡಿಸಿ ಪ್ರಸೀದ್ ಕೃಷ್ಣ ಅವರಿಗೆ ವಿಕೆಟ್ ಒಪ್ಪಿಸಿದರು.
And his good friend joins the party. Another half-century for @mayankcricket. His 7th in IPL.#Dream11IPL pic.twitter.com/FybbePshDr
— IndianPremierLeague (@IPL) October 10, 2020
ಈ ಮೂಲಕ ರಾಹುಲ್ ಜೊತೆ 116 ರನ್‍ಗಳ ಜೊತೆಯಾಟವಾಡಿದರು. ನಂತರ ಬಂದ ನಿಕೋಲಸ್ ಪೂರನ್ ಅವರು 10 ಬಾಲಿಗೆ 16 ರನ್ ಗಳಿಸಿ ಸುನಿಲ್ ನರೈನ್ ಅವರಿಗೆ ಬೌಲ್ಡ್ ಆದರು. ನಂತರ ಅಂಗಳಕ್ಕೆ ಬಂದ ಸಿಮ್ರಾನ್ ಸಿಂಗ್ ಅವರು 18ನೇ ಓವರಿನ 4ನೇ ಬಾಲಿನಲ್ಲಿ ಕ್ಯಾಚ್ ಕೊಟ್ಟು ಔಟ್ ಆದರು. ಇದಾದ ನಂತರ ನಾಯಕ ರಾಹುಲ್ ಔಟ್ ಆದರು. ನಂತರ ಗ್ಲೆನ್ ಮ್ಯಾಕ್ಸ್ ವೆಲ್ ಅವರು ಕೊನೆ ಬಾಲಿನವರೆಗೂ ಕ್ರೀಸಿನಲ್ಲಿದ್ದರು ಪ್ರಯೋಜನವಾಗಲಿಲ್ಲ.
FIFTY!
@klrahul11 brings up his fourth half-century in #Dream11IPL 2020. This is also 19th in IPL.#KXIPvKKR pic.twitter.com/OeRGh9qU2m
— IndianPremierLeague (@IPL) October 10, 2020



