Connect with us

Dvgsuddi Kannada | online news portal | Kannada news online

ಕ್ರಿಕೆಟ್: ಭಾರತೀಯ ಮೂಲದ ಅಜಾಜ್​​ ಪಟೇಲ್​ ವಿಶ್ವ ದಾಖಲೆ; ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವ ಮೂರನೇ ಬೌಲರ್ ..!

Ajaz patel

ಕ್ರೀಡೆ

ಕ್ರಿಕೆಟ್: ಭಾರತೀಯ ಮೂಲದ ಅಜಾಜ್​​ ಪಟೇಲ್​ ವಿಶ್ವ ದಾಖಲೆ; ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆದ ವಿಶ್ವ ಮೂರನೇ ಬೌಲರ್ ..!

ಮುಂಬೈ: ಭಾರತೀಯ ಮೂಲದ ನ್ಯೂಜಿಲೆಂಡ್​ ತಂಡದ ಬೌಲರ್​ ಅಜಾಜ್​​ ಪಟೇಲ್​ , ಭಾರತದ ವಿರುದ್ಧ ಟೆಸ್ಟ್​ ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದಿದ್ದಾರೆ. ಒಂದೇ ಇನ್ನಿಂಗ್ಸ್​ನಲ್ಲಿ 10 ವಿಕೆಟ್​ ಪಡೆಯುವ ಮೂಲಕ ವಿಶ್ವದ ಮೂರನೇ ಆಟಗಾರನೆಂಬ ಕೀರ್ತಿಗೆ ಭಾಜನರಾಗಿದ್ದಾರೆ.

ಜಿಮ್​ ಲೇಕರ್​ ಮತ್ತು ಅನಿಲ್​ ಕುಂಬ್ಳೆ ದಾಖಲೆ ಬಳಿಕ ವಿಶ್ವದ ಮೂರನೇ ಆಟಗಾರನಾಗಿ ಅಜಾಜ್​ ಪಟೇಲ್​ ತಮ್ಮ ಹೆಸರನ್ನು ಇತಿಹಾಸದ ಪುಟಕ್ಕೆ ಸೇರಿಸಿಕೊಂಡಿದ್ದಾರೆ. ಇಂದು ನಡೆದ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್​ ಪಂದ್ಯದ ಮೊದಲ ಇನ್ನಿಂಗ್ಸ್​ನಲ್ಲಿ ಟೀಮ್​ ಇಂಡಿಯಾ 109.5 ಓವರ್​ಗಳಲ್ಲಿ 325 ರನ್​ಗಳಿಗೆ ಆಲೌಟ್​ ಆಗಿದೆ. ನ್ಯೂಜಿಲೆಂಡ್​ ಪರ ಕರಾರುವಾಕ್ ದಾಳಿ ನಡೆಸಿದ ಅಜಾಜ್​ ಪಟೇಲ್​, ಟೀಮ್​ ಇಂಡಿಯಾದ 10 ವಿಕೆಟ್​ಗಳನ್ನು ಉರುಳಿಸಿ ವಿಶ್ವದಾಖಲೆ ಬರೆದರು.

47.5 ಓವರ್​ ಎಸೆದ ಅಜಾಜ್​ ಪಟೇಲ್​ 119 ರನ್​ ನೀಡಿ 10 ವಿಕೆಟ್​ ಪಡೆದಿದ್ದಾರೆ. ಭಾರತ ಮಧ್ಯಾಹ್ನದ ಹೊತ್ತಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು 109.5 ಓವರ್​ಗಳಲ್ಲಿ 325 ರನ್​ ಕಲೆಹಾಕಿತು.

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೀಡೆ

To Top