ಡಿವಿಜಿ ಸುದ್ದಿ, ಬೆಂಗಳೂರು: ಭಾರೀ ಜಿದ್ದಾಜಿದಿನಿಂದ ಕೂಡಿದ್ದ ಶಿರಾ ಮತ್ತು ಆರ್.ಆರ್. ನಗರ ವಿಧಾನಸಭಾ ಉಪ ಚುನಾವಣೆ ನಂತರ ಸಿ-ವೋಟರ್ ಸಮೀಕ್ಷೆ ಹೊರಬಿದಿದ್ದು, ಶಿರಾ ಹಾಗೂ ಆರ್ ಆರ್ ನಗರದಲ್ಲಿ ಬಿಜೆಪಿ ಭರ್ಜರಿ ಜಯಗಳಿಸಲಿದೆ ಎಂದು ಹೇಳಲಾಗುತ್ತಿದೆ.
ಸಿ -ವೋಟರ್ ಸಮೀಕ್ಷೆಯಲ್ಲಿ ಆರ್ ಆರ್ ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಶಿರಾ ಅಭ್ಯರ್ಥಿ ರಾಜೇಶ್ ಗೌಡ ಗೆಲುವು ಸಾಧಿಸುವ ಸಾಧ್ಯತೆ ಇದೆ ಹೇಳಿದೆ. ಮುನಿರತ್ನ ಹೆಚ್ಚಿನ ಶೇಕಡ 37.7 ರಷ್ಟು ಮತ ಗಳಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರು ಶೇಕಡಾ 31.11 ರಷ್ಟು ಮತ ಪಡೆಯಲಿದ್ದಾರೆ. ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಶೇಕಡ 14 ರಷ್ಟು ಮತ ಗಳಿಸಲಿದ್ದಾರೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
ಶಿರಾ ಚುನಾವಣೆಯಲ್ಲಿ ಕೂಡ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯಗಳಿಸಲಿದ್ದಾರೆ ಎಂದು ಸಿ -ವೋಟರ್ ಚುನಾವಣೋತ್ತರ ಸಮೀಕ್ಷೆಯಲ್ಲಿ ಗೊತ್ತಾಗಿದೆ. ಆದರೆ, ಸಮೀಕ್ಷೆಯೇ ಸತ್ಯವಲ್ಲ, ಅದು ಮತದಾರರ ಆಯಾ ಸಂದರ್ಭ, ಪರಿಸ್ಥಿತಿಯನ್ನು ಆಧರಿಸಿರುತ್ತದೆ. ನಿಖರವಾದ ಫಲಿತಾಂಶಕ್ಕಾಗಿ ಮತ ಎಣಿಕೆ ದಿನದವರೆಗೂ ಕಾಯಬೇಕಿದೆ ಎಂದು ಹೇಳಲಾಗಿದೆ.