Connect with us

Dvgsuddi Kannada | online news portal | Kannada news online

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯಿಂದ 15.30 ಲಕ್ಷ ನಷ್ಟ

ದಾವಣಗೆರೆ

ದಾವಣಗೆರೆ: ಜಿಲ್ಲೆಯಲ್ಲಿ ಮಳೆಯಿಂದ 15.30 ಲಕ್ಷ ನಷ್ಟ

ಡಿವಿಜಿ ಸುದ್ದಿ, ದಾವಣಗೆರೆ:  ಜಿಲ್ಲೆಯಲ್ಲಿ ಅ.12 ರಂದು 12.0 ಮಿ.ಮೀ. ಸರಾಸರಿ ಮಳೆಯಾಗಿದ್ದು, ನ್ಯಾಮತಿ ತಾಲ್ಲೂಕಿನಲ್ಲಿ ಅತಿ ಹೆಚ್ಚು 34 ಮಿ.ಮೀ. ಮಳೆಯಾಗಿದೆ. ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು 15.30 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ.

ಮಳೆಯ ವಿವರ

  • ಚನ್ನಗಿರಿ- 5.0 ಮಿ.ಮೀ
  • ದಾವಣಗೆರೆ-9.0 ಮಿ.ಮೀ
  •  ಹರಿಹರ – 9.0 ಮಿ.ಮೀ.
  •  ಹೊನ್ನಾಳಿ- 27.0 ಮಿ.ಮೀ
  • ಜಗಳೂರು-8.0 ಮಿ.ಮೀ
  • ನ್ಯಾಮತಿ 34.0 ಮಿ.ಮೀ

ಜಿಲ್ಲೆಯಲ್ಲಿ ಸರಾಸರಿ 3.0 ಮಿ.ಮೀ ವಾಡಿಕೆಗೆ 12.0 ಮಿ.ಮೀ ವಾಸ್ತವ ಮಳೆಯಾಗಿದೆ. ದಾವಣಗೆರೆ ತಾಲ್ಲೂಕಿನಲ್ಲಿ 5 ಕಚ್ಚಾ ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 1.25 ಲಕ್ಷ ನಷ್ಟದ ಅಂದಾಜು ಮಾಡಲಾಗಿದೆ. ಹರಿಹರ ತಾಲ್ಲೂಕಿನಲ್ಲಿ 5 ಮನೆ ತೀವ್ರ ಹಾನಿಯಾಗಿದ್ದು 5.70 ಲಕ್ಷ  ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕಿನಲ್ಲಿ 3  ಮನೆ ಭಾಗಶಃ ಹಾನಿಯಾಗಿದ್ದು, ರೂ.0.60 ಲಕ್ಷ ಮತ್ತು 1 ದನದ ಕೋಟಿಗೆ ಹಾನಿಯಾಗಿದ್ದು, ರೂ.0.15 ಲಕ್ಷ ಒಟ್ಟು ರೂ.0.75 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.

ಚನ್ನಗಿರಿ ತಾಲ್ಲೂಕಿನಲ್ಲಿ 4  ಮನೆಗಳಿಗೆ ಹಾನಿಯಾಗಿದ್ದು, ಒಟ್ಟು 1.10 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ. ಜಿಲ್ಲೆಯಲ್ಲಿ ಒಟ್ಟಾರೆ ರೂ. 15.30 ಲಕ್ಷ ಅಂದಾಜು ನಷ್ಟ ಸಂಭವಿಸಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top