ಡಿವಿಜಿ ಸುದ್ದಿ, ದಾವಣಗೆರೆ: ಜಿಲ್ಲೆಯಲ್ಲಿ ಅ.15 ರಂದು 1.0 ಮಿ.ಮೀ ಸರಾಸರಿ ಮಳೆಯಾಗಿದ್ದು, 3.75 ಲಕ್ಷ ಅಂದಾಜು ನಷ್ಟ ಸಂಭವಿಸಿರುತ್ತದೆ.ಜಿಲ್ಲೆಯಲ್ಲಿ ಸರಾಸರಿ 2.0 ಮಿ.ಮೀ ಮಳೆ ನಿರೀಕ್ಷಿಸಲಾಗಿತ್ತು. ಆದರೆ, 1.0 ಮಿ.ಮೀ ವಾಸ್ತವ ಮಳೆಯಾಗಿರುತ್ತದೆ. ದಾವಣಗೆರೆ ತಾಲ್ಲೂಕಿನಲ್ಲಿ 13 ಮನೆ ಭಾಗಶಃ ಹಾನಿಯಾಗಿದ್ದು, ರೂ.3.25 ಲಕ್ಷ ನಷ್ಟ ಸಂಭವಿಸಿರುತ್ತದೆ. ನ್ಯಾಮತಿ ತಾಲ್ಲೂಕಿನಲ್ಲಿ 2 ಮನೆಗಳು ಭಾಗಶಃ ಹಾನಿಯಾಗಿದ್ದು, ರೂ. 50 ಸಾವಿರ ನಷ್ಟ ಸಂಭವಿಸಿದ್ದು, ಜಿಲ್ಲೆಯಲ್ಲಿ ಒಟ್ಟಾರೆ ರೂ.3.75 ಲಕ್ಷ ನಷ್ಟ ಸಂಭವಿಸಿರುತ್ತದೆ.



