ಚಿತ್ರದುರ್ಗ: ಸಿದ್ದರಾಮಯ್ಯನವರು ಪ್ರತೀ ಬಜೆಟ್ನಲ್ಲೂ ಸಾಲ ಮಾಡಿ ಭಾಗ್ಯಗಳನ್ನ ಕೊಟ್ಟು, ಕರ್ನಾಟಕಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ ಎಂದು ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಹೇಳುವ ಕನಿಷ್ಠ ನೈತಿಕತೆ ಸಿದ್ದರಾಮಯ್ಯಗೆ ಇಲ್ಲ. 2013 ರಲ್ಲಿ ಅವರು ಸಿಎಂ ಆದಾಗ ಕರ್ನಾಟಕದ ಸಾಲ 1 ಲಕ್ಷ 31 ಸಾವಿರ ಇತ್ತು. 2018 ಕ್ಕೆ ಸಿದ್ದರಾಮಯ್ಯ ಕುರ್ಚಿಯಿಂದ ಇಳಿಯಾವಗ 2ಲಕ್ಷ 86 ಸಾವಿರಕ್ಕೆ ತಗೆದುಕೊಂಡು ಹೋದ್ರು. ಒಟ್ಟು ಸಿಎಂಗಳು ಮಾಡಿದ ಸಾಲಕ್ಕೆ ಐದು ವರ್ಷದಲ್ಲಿ ಡಬಲ್ ಮಾಡಿದ ಕೆಟ್ಟ ಶ್ರೇಯಸ್ ಸಿದ್ದರಾಮಯ್ಯಗೆ ಸಲ್ಲಬೇಕು. 2.86 ಲಕ್ಷ ಕೋಟಿ ಸಾಲದ ಹೊರೆಯನ್ನ ನಮ್ಮ ತಲೆಮೇಲೆ ಹಾಕಿದ್ದಾರೆ. ಅವರಿಗೆ ಈ ವಿಚಾರಗಳ ಬಗ್ಗೆ ಮಾತನಾಡುವ ಕನಿಷ್ಠ ನೈತಿಕತೆ ಅರ್ಹತೆ ಇಲ್ಲ.
ಸಿದ್ದರಾಮಯ್ಯ ಎಲ್ಲ ಭಾಗ್ಯಗಳನ್ನ ಕೊಟ್ಟು, ಕರ್ನಾಟಕ್ಕೆ ದೌರ್ಭಾಗ್ಯ ತಂದಿಟ್ಟಿದ್ದಾರೆ: ಪ್ರತಾಪ್ ಸಿಂಹ
ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ...
Editor: munikondajji, MA journalism, contact number:7483892205, e-mail: dvgsuddi@gmail.com
Leave a Comment



