ನವದೆಹಲಿ: ಬೀಚ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ರೂಪದರ್ಶಿ ಹಾಗೂ ನಟಿ ಪೂನಂ ಪಾಂಡೆಯನ್ನು ಉತ್ತರ ಗೋವಾದಲ್ಲಿ ಬಂಧಿಸಲಾಗಿದೆ. ಗೋವಾ ಫಾರ್ವರ್ಡ್ ಪಾರ್ಟಿಯ ಮಹಿಳಾ ಘಟಕವು ನಟಿಯ ವಿರುದ್ಧ ದೂರು ದಾಖಲಿಸಿ ಬಂಧಿಸಿದೆ.
ಗೋವಾದ ಚಾಪೋಲಿ ಡ್ಯಾಮ್ ನಲ್ಲಿ ಅಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ಬಂಧಿಸಲಾಗಿದೆ. ವಿಡಿಯೋ ಚಿತ್ರೀಕರಣಕ್ಕಾಗಿ ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ ಐಆರ್ ಕೂಡ ದಾಖಲಾಗಿದೆ.
ಈ ವರ್ಷದ ಸೆಪ್ಟೆಂಬರ್ ನಲ್ಲಿ ಮದುವೆಯಾದ ಒಂದು ದಿನದ ನಂತರ ಪೂನಂ ಪಾಂಡೆ ತನ್ನ ಪತಿ ಸ್ಯಾಮ್ ಬಾಂಬೆ ಮೇಲೆ ಅತ್ಯಾಚಾರ ಮತ್ತು ಹಲ್ಲೆ ಆರೋಪ ಮಾಡಿದ್ದರು. ದಕ್ಷಿಣ ಗೋವಾದ ಕ್ಯಾನಕೋನಾ ಗ್ರಾಮದಲ್ಲಿ ಈ ಘಟನೆಯಿಂದ ಸುದ್ದಿಯಾಗಿದ್ದರು.



